ಘಟಪ್ರಭಾ :ಕರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರದಾನ ಮಂತ್ರಿಯವರು ಕರೆ ನೀಡಿದ ಜನತಾ ಕರ್ಪ್ಯೂಗೆ ಜನರಿಂದ ನಿನ್ನೆ ಪೂರ್ವ ಬೆಂಬಲ ವ್ಯಕ್ತವಾಗಿದೆ ಬೆಳಗಾವಿ ಜಿಲ್ಲೆಯ ಗೋಕಾಕ ಸೇರಿದಂತೆ ಘಟಪ್ರಭಾ,ಕೊಣ್ಣೂರ ಪಟ್ಟಣ ಸಂಪೂರ್ಣ ಬಂದ ಮಾಡಿ ಬೆಂಬಲ ವ್ಯಕ್ತ ಪಡಿಸಿದರು ತಮ್ಮಗೆ ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಮನೆಯಿಂದ ಹೊರಗಡೆ ಬರದೆ ಕರ್ಪ್ಯೂಗೆ ಬೆಂಬಲ ಸೂಚಿಸಿ ಗೋಕಾಕ ತಾಲೂಕಿನ ಜನತೆ ಪ್ರದಾನ ಮಂತ್ರಿ ತೆಗೆದುಕೊಂಡ ನಿರ್ಣಯವನ್ನು ಮನಪೂರ್ವಕವಾಗಿ ಸ್ವಾಗತಿಸಿದ್ದಾರೆ. ಘಟಪ್ರಭಾ, …
Read More »Yearly Archives: 2020
SHOCKING : ಬೆಂಗಳೂರಿನಲ್ಲಿ ಹೋಂ ಕ್ವಾರಂಟೆನ್‍ನಲ್ಲಿದ್ದಾರೆ 22 ಸಾವಿರ ಮಂದಿ..!
ಬೆಂಗಳೂರು,ಮಾ.23- ನಗರದಲ್ಲಿ 22 ಸಾವಿರ ಹೋಂ ಕ್ವಾರಂಟೆನ್‍ಗಳಿದ್ದು, ಇವರಲ್ಲಿ 16 ಮಂದಿ ನಗರದ ವಿವಿಧ ಆಸ್ಪತ್ರೆಗಳ ಐಸೋಲೇಷನ್‍ಗಳಲ್ಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ತಿಳಿಸಿದರು. ಕೊರೊನಾ ಹಾವಳಿ ತಡೆಗಟ್ಟುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿರುವ ವಾರ್‍ರೂಮ್ ಉದ್ಘಾಟಿಸಿ ಅವರು ಮಾತನಾಡಿದರು. ಹೋಂ ಕ್ವಾರಂಟೆನ್‍ಗಳಲ್ಲಿ ಇರಬೇಕಾದವರು ಮನೆಬಿಟ್ಟು ಹೊರಬರುತ್ತಿದ್ದಾರೆ ಇಂಥವರ ಮೇಲೆ ಪಾಲಿಕೆ ಹದ್ದಿನ ಕಣ್ಣಿಟ್ಟಿದೆ. ಹೋಂ ಕ್ವಾರಂಟೆನ್‍ಗಳು ರಸ್ತೆಗಿಳಿದರೆ ಅವರನ್ನು ಹಿಡಿದು ಮಾಸ್ಕ್ ಕ್ವಾರಂಟೆನ್ ಸೆಂಟರ್‍ಗಳಿಗೆ ರವಾನಿಸಲಾಗುವುದು ಎಂದು …
Read More »ಬೆಂಗಳೂರು: ಸಾವಿರದಿಂದ ಸಾವಿರದ ಐದುನೂರು ಬೆಡ್ ಉಳ್ಳ ಆಸ್ಪತ್ರೆಯನ್ನು ಕೇವಲ ಕೋವಿಡ್ -19 ಗೆ ಮೀಸಲಿಡುತ್ತೇವೆ: ಸಚಿವ ಡಾ.ಸುಧಾಕರ್
ಬೆಂಗಳೂರು: ಸಾವಿರದಿಂದ ಸಾವಿರದ ಐದುನೂರು ಬೆಡ್ ಉಳ್ಳ ಆಸ್ಪತ್ರೆಯನ್ನು ಕೇವಲ ಕೋವಿಡ್ -19 ಗೆ ಮೀಸಲಿಡುತ್ತೇವೆ ಎಂದು ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ವಿಕ್ಟೋರಿಯದಲ್ಲಿ 2100 ಬೆಡ್ ಇದ್ದರೂ ಎಲ್ಲವನ್ನೂ ಬಳಕೆ ಮಾಡಲು ಆಗಲ್ಲ .ಬೇರೆ ಬೇರೆ ರೋಗಿಗಳು ಇದ್ದಾರೆ. ವಿಕ್ಟೋರಿಯ ಆಸ್ಪತ್ರೆಯಲ್ಲಿದ್ದ ಉಳಿದ ರೋಗಿಗಳನ್ನು ಹೇಗೆ ಬೇರೆ ಕಡೆ ಶಿಫ್ಟ್ ಮಾಡಬೇಕು ಎನ್ನುವ ಬಗ್ಗೆಯೂ ತೀರ್ಮಾನ ಮಾಡ್ತೇವೆ ಎಂದು ಸುಧಾಕರ್ ತಿಳಿಸಿದರು. ಸದ್ಯ …
Read More »ಮಂಗಳೂರು;:ಭಟ್ಕಳ ಮೂಲದ ಯುವಕನಲ್ಲಿ ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ.
ಮಂಗಳೂರು; ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ನಡುವೆ ಭಟ್ಕಳ ಮೂಲದ ಯುವಕನಲ್ಲಿ ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ. ಭಟ್ಕಳದ 22 ವರ್ಷದ ಯುವಕ ಮಾರ್ಚ್ 19ರಂದು ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದ. ಏರ್ ಪೋರ್ಟ್ ನಲ್ಲಿ ತಪಾಸಣೆ ನಡೆಸಿದಾಗ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು ಈ ಹಿನ್ನಲೆಯಲ್ಲಿ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇದೀಗ ಯುವಕನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು …
Read More »ನವದೆಹಲಿ:ಲಾಕ್‌ಡೌನ್ ಅನ್ನು ಹಲವರು ಗಂಭೀರವಾಗಿ ಪರಿಗಣಿಸುತ್ತಿಲ್ಲ.:ನರೇಂದ್ರ ಮೋದಿ
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಹೇರಿರುವ ಲಾಕ್‌ಡೌನ್ ಅನ್ನು ಹಲವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಕಟ್ಟುನಿಟ್ಟಿನ ಆದೇಶವನ್ನು ಜನರು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೇಶದ 80ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಕಂಡು ಬಂದಿವೆ. 400ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ದೇಶದಲ್ಲಿ ಈ ವರೆಗೆ ಕೊರೊನಾಗೆ 8 ಜನ ಮೃತಪಟ್ಟಿದ್ದಾರೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರದ ಮಾರ್ಚ್ …
Read More »ಹುಬ್ಬಳ್ಳಿಯಲ್ಲಿ ಕೋರೋನಾ ತಪಾಸಣೆಗೆ ಮುಗಿಬಿದ್ದ ಜನ.
. ಹುಬ್ಬಳ್ಳಿಯಲ್ಲಿ ಕೋರೋನಾ ತಪಾಸಣೆಗೆ ಮುಗಿಬಿದ್ದ ಜನ… ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಬಳಿ ಸರದಿ ಸಾಲಿನಲ್ಲಿ ನಿಂತು ತಪಾಸಣೆ ಮಾಡಿಸಿಕೊಳ್ಳುತ್ತಿರೋ ಜನ… ತಪಾಸಣೆ ಮಾಡುವವರ ಬಳಿ ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಳ್ಳುತ್ತಿರೋ ಜನ.. . ಸ್ವಯಂ ಪ್ರೇರಿತರಾಗಿ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಿರೋ ಜನ… ತಪಾಸಣೆ ಮಾಡಿಸಿಕೊಂಡವರ ಹೆಸರನ್ನು ನಮೋದಿಸಿಕೊಂಡು ತಪಾಸಣೆ ಮಾಡುತ್ತಿರೋ ಅರೋಗ್ಯ ಇಲಾಖೆ… ತಪಾಸಣೆ ಮಾಡುವ ವೇಳೆ ಕೋರೋನಾ ಶಂಕಿತ ಲಕ್ಷಣಗಳು ಕಂಡು ಬಂದರೆ ಅವರ ಕುಟುಂಬದ ಮೇಲೆ ನಿಗಾ …
Read More »ಮಹಾರಾಷ್ಟ್ರದಲ್ಲಿ ಕೊರೊನಾಗೆ ಮೂರನೇ ವ್ಯಕ್ತಿ ಬಲಿಯಾಗಿದ್ದು, ಕೊರೊನಾ ದೇಶದಲ್ಲಿ ಈವರೆಗೂ 8 ಜನರನ್ನು ಬಲಿಪಡೆದುಕೊಂಡಿದೆ
ವಿಶ್ವಾದ್ಯಂತ ಹೆಚ್ಚುತ್ತಿರುವ ಮಾರಣಾಂತಿಕ ಕೊರೊನಾ ವೈರಸ್‍ಗೆ ದೇಶದಲ್ಲಿ ಮತ್ತೊಂದು ಬಲಿಯಾಗಿದೆ. ಮುಂಬೈನಲ್ಲಿ ಕೊರೊನಾ ಸೋಂಕಿಗೆ ವಿದೇಶಿ ಪ್ರವಾಸಿಗ ಸಾವನ್ನಪ್ಪಿದ್ದು, ಈವರೆಗೆ ದೇಶದಲ್ಲಿ ಒಟ್ಟು 8 ಜನರು ಮೃತಪಟ್ಟಿದ್ದಾರೆ. ಮುಂಬೈನಲ್ಲಿ 68 ವರ್ಷದ ಫಿಲಿಪೈನ್ಸ್ ಪ್ರಜೆ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ. ಮುಂಬೈನ ಕಸ್ತೂರಬಾ ಆಸ್ಪತ್ರೆಯಿಂದ ಪ್ರೈವೇಟ್ ಆಸ್ಪತ್ರೆಗೆ ವ್ಯಕ್ತಿಯನ್ನು ಸ್ಥಳಾಂತರಿಸಲಾಗಿತ್ತು. ಅವರು ಮೂತ್ರಪಿಂಡ ವೈಫಲ್ಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೊನಾಗೆ ಮೂರನೇ ವ್ಯಕ್ತಿ …
Read More »ಬೆಳಗಾವಿ ಪೋಲೀಸರು ಸರ್ಕಾರದ ಲಾಕ್ ಡೌನ್ ಆದೇಶವನ್ನು ಅನುಷ್ಠಾನಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.
ಬೆಳಗಾವಿ ಪೋಲೀಸರು ನಗರದ ಮಾರುಕಟ್ಟೆ ಪ್ರದೇಶಗಳಲ್ಲಿ ಸರ್ಕಾರದ ಲಾಕ್ ಡೌನ್ ಆದೇಶವನ್ನು ಅನುಷ್ಠಾನಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಪಕ್ಕದ ಮಹಾರಾಷ್ಟ್ರ ದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ,ರಾಜ್ಯ ಸರ್ಕಾರ ಹಲವಾರು ನಗರಗಳು ಸೇರಿದಂತೆ ಬೆಳಗಾವಿ ನಗರವನ್ನು ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದು ಇಂದು ಬೆಳ್ಳಂ ಬೆಳಿಗ್ಗೆ ಬೆಳಗಾವಿ ಪೋಲೀಸರು ಲಾಕ್ ಡೌನ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಳಗಾವಿಯ ಖಡೇಬಝಾರ್ ನಿಂದ ಕಾರ್ಯಾಚರಣೆ ಆರಂಂಭಿಸಿರುವ ಪೋಲೀಸರು ಕಿರಾಣ,ಡೈರಿ,ಔಷಧಿ,ಹಣ್ಣು,ತರಕಾರಿ ಅಂಗಡಿಗಳನ್ನು ಹೊರತುಪಡಿಸಿ ಉಳಿದ …
Read More »15 ದಿನ ಸಿಟಿಯಿಂದ ಹಳ್ಳಿಗಳಿಗೆ ಹೋಗಬೇಡಿ; ಇನ್ಮುಂದೆ ವಿಕ್ಟೋರಿಯಾ ಆಸ್ಪತ್ರೆ ಕೊರೋನಾ ಕೇಂದ್ರ; ಸಿಎಂ ಬಿಎಸ್ವೈ
ಬೆಂಗಳೂರು(ಮಾ.22): ಈ ಮಾರಣಾಂತಿಕ ಕೊರೋನಾ ವೈರಸ್ ನಿಗ್ರಹ ಮಾಡಲು ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ಅದಕ್ಕೆ ಕರ್ನಾಟಕದ ಜನತೆ ಸಂಪೂರ್ಣವಾಗಿ ಸಹಕಾರ ಕೊಟ್ಟಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆಯಿಂದ ನಾನು ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಇಂದಿನ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದ್ದೇನೆ. 1700 ಹಾಸಿಗೆಗಳನ್ನು ಒಳಗೊಂಡ ವಿಕ್ಟೋರಿಯಾ …
Read More »ಕೊರೋನಾ ಭೀತಿ: ಮೈಸೂರಿನಲ್ಲಿ ನಿಷೇಧಾಜ್ಞೆ ಜಾರಿ, ಮಾರ್ಚ್ 31ರವರೆಗೆ ಜಿಲ್ಲೆ ಲಾಕ್‌ಡೌನ್
ಸರ್ಕಾರಿ ಕಚೇರಿಗಳು, ಜಿಲ್ಲಾ ಪಂಚಾಯತಿ. ಅಂಚೆ ಕಚೇರಿ, ವಿದ್ಯುತ್ ಇಲಾಖೆ ಮಹಾನಗರ ಪಾಲಿಕೆ, ನೀರು ಸರಬರಾಜು ಕೇಂದ್ರ, ಬ್ಯಾಂಕ್ಗಳು, ಎಟಿಎಂ, ಔಷಧಿ, ವೈದ್ಯಕೀಯ ಸಲಕರಣೆ, ಕೃಷಿಗೆ ಸಂಬಂಧಿಸಿದ ಚಟುವಟಿಕೆ, ರೇಷ್ಮೆ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆಗೆ ಸಂಬಂಧಿಸಿದಂತೆ ವ್ಯಾಪಾರ ಹಾಗೂ ಮಾರುಕಟ್ಟೆಗಳು ಎಂದಿನಂತೆ ಕೆಲಸ ನಿರ್ವಹಿಸಲಿವೆ. ಮೈಸೂರು(ಮಾ.23): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ, ಇಂದಿನಿಂದ ಜಿಲ್ಲೆ ಲಾಕ್‌ಡೌನ್ ಆಗಲಿದೆ. ಇಂದಿನಿಂದ ಮಾರ್ಚ್ 31ರವೆಗೆ ಜಿಲ್ಲೆಯಲ್ಲಿ …
Read More »