ಗೋಕಾಕ: ಏ12 -ದೇಶದಲ್ಲಿ ದಿನದಿನಕ್ಕೆ ಅಟ್ಟಹಾಸ ಮೇರೆಯುವ ಮಹಾಮಾರಿ ಕೋರೊನಾ ವೈರಸ್ ಹರಡುವಿಕೆಯಿಂದ ದೇಶವ್ಯಾಪ್ತಿ ಲಾಕ್ ಡೌನ್ ಆಗಿದ್ದು ಗೋಕಾಕ ನಗರ ಪ್ರದೇಶದಲ್ಲಿ ಸಿಂದೋಳ್ಳಿಮಠ ದವಾಖಾನೆಯ ಹಿಂದುಗಡೆ ಅಲೆಮಾರಿ ಜನಾಂಗದವರು ಕೂಲಿ ಕಾರ್ಮಿಕರು ಇದ್ದಾರೆ ಅವರಿಗೆಲ್ಲ ಊಟದ ಸಮಸ್ಯೆ ಇತ್ತು ಊಟವಿಲ್ಲದೆ ಇದ್ದ ಸುಮಾರು 60 ರಿಂದ್ 70 ಕುಟುಂಬಗಳು. ಸರಿ ಸುಮಾರು 300 ಮೇಲ್ಪಟ್ಟು ಜನರು ವಾಸವಿದ್ದರು ಅವರಿಗೆ ಬಹಳ ಊಟದ ಕೊರತೆ ಇತ್ತು ಹಂತಹ ಸಂದರ್ಭದಲ್ಲಿ ಅವರಿಗೆ …
Read More »Yearly Archives: 2020
ಮಂಡ್ಯ ಜಿಲ್ಲೆಯಿಂದ ಶ್ರಾವಣ ಬೆಳಗೊಳ ಹಾಸನ ಜಿಲ್ಲೆಗೆ ಸಂಪರ್ಕಿಸುವ ಹೋಬಳಿಯ ಎಲ್ಲಾ ಮುಖ್ಯ ರಸ್ತೆಗಳನ್ನು ಸಂಪೂರ್ಣವಾಗಿ ಮುಚ್ಚಲಾಯಿತು
ಮಂಡ್ಯ ಜಿಲ್ಲೆಯ ನಾಗಮಂಗಲದಿಂದ ಸಂಪರ್ಕಿಸುವ ಬೆಟ್ಟದಹಳ್ಳಿ ಹಾಗೂ ಸಂತೆಬಾಚಹಳ್ಳಿ ರಸ್ತೆ, ಮೇಲುಕೋಟೆ ರಸ್ತೆ, ಕೆ.ಆರ್.ಪೇಟೆ ರಸ್ತೆ, ಕಿಕ್ಕೇರಿ ರಸ್ತೆ ಹಾಗೂ ಆನೆಗೊಳದಿಂದ ಕಾಂತರಾಜಪುರ, ಚಿಕ್ಕಬೀಳ್ತಿ, ಮಾದಪುರ, ದೊಡ್ಡತರಹಳ್ಳಿ, ಚಿಕ್ಕತರಹಳ್ಳಿ ಗಡಿ ಮಾರ್ಗವಾಗಿ ಬರುವ ಜಿಲ್ಲೆಗೆ ಸಂಪರ್ಕಿಸುವ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಯಿತು. ಮಂಡ್ಯ ಜಿಲ್ಲೆಯಲ್ಲಿ ಕರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಹೊರ ಜಿಲ್ಲೆಯ ಸಂಪರ್ಕ ನಿರ್ಬಂಧಿಸಲಾಯಿತು. ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಮೋಹನ್ ಕುಮಾರ್, ಕಾಂತರಾಜಪುರ …
Read More »*ನೂತನ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಅವರು ಕೆ.ಆರ್.ಪೇಟೆ ಪಟ್ಟಣದ ಮಿನಿವಿಧಾನ ಸೌಧದ ಆವರಣದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದರು*
ಕೆ.ಆರ್ ಪೇಟೆ :ತಾಲೂಕಿನ ರೋಗಿಗಳು ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಲ್ಲಿರುವ ದೊಡ್ಡ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋಗಲು ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಗತ್ಯ ಪಾಸ್ ದೊರೆಯದ ಕಾರಣ ರೋಗಿಗಳಿಗೆ ತೀವ್ರ ತೊಂದರೆಯಾಗಿದೆ. ಹಾಗಾಗಿ ತಾಲ್ಲೂಕು ಮಟ್ಟದಲ್ಲಿಯೇ ಆಸ್ಪತ್ರೆಗೆ ಹೋಗಲು ಪಾಸ್ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್ ಅವರು ಸಚಿವರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವ ನಾರಾಯಣಗೌಡ ಅವರು ಈ ಬಗ್ಗೆ ಮುಖ್ಯಮಂತ್ರಿಗಳು ಹಾಗು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ …
Read More »ರಮ್ಯಾ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಮತ್ತೆ ಟ್ವಿಟ್ಟರ್‌ಗೆ ಮರಳಿದ ಪದ್ಮಾವತಿ
ಬೆಂಗಳೂರು: ಸ್ಯಾಂಡಲ್‍ವುಡ್ ಬ್ಯೂಟಿಕ್ವೀನ್ ರಮ್ಯ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಬಂದಿದ್ದು, ಅವರ ಟ್ವಿಟ್ಟರ್ ಖಾತೆ ಸಕ್ರಿಯವಾಗಿದೆ. ಒಂದು ಕಾಲದಲ್ಲಿ ಚಂದನವದ ಬುಹುಬೇಡಿಕೆಯ ನಟಿಯಾಗಿ ಮರೆದಿದ್ದ ರಮ್ಯಾ, ಸದ್ಯ ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಸಖತ್ ಸಕ್ರಿಯವಾಗಿ ಇದ್ದ ರಮ್ಯಾ ಅವರು, ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಆದರೆ ಈಗ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆ್ಯಕ್ಟಿವ್ ಆಗಿ ಇಟ್ಟುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ …
Read More »ಹುಬ್ಬಳ್ಳಿಯಲ್ಲಿ ಪಶು ವೈದ್ಯರ ಮಾನವೀಯತೆ; ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಗರ್ಭಿಣಿ ಹಸುವಿಗೆ ಮರುಜೀವ
ಹುಬ್ಬಳ್ಳಿ(ಏ.12): ಕೊರೋನಾ ಸೋಂಕಿನ ವಿರುದ್ಧ ವಿಶ್ವದ ವೈದ್ಯರು ಮನುಕುಲದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಉಣಕಲ್ ಗ್ರಾಮದ ಪಶುವೈದ್ಯರು ಮೃತ್ಯುವಿನ ಬಾಗಿಲು ತಟ್ಟಿದ್ದ ಅನಾಥ ಗರ್ಭಿಣಿ ಹಸುವಿಗೆ ಮರುಜನ್ಮ ನೀಡಿದ್ದಾರೆ. ಈ ಹೃದಯಸ್ಪರ್ಶಿ ಘಟನೆ ಉಣಕಲ್ ಸಿದ್ದಪ್ಪಜ್ಜನ ಹೊಸಮಠದ ಆವರಣದಲ್ಲಿ ನಡೆದಿದೆ. ಉಣಕಲ್ ಕ್ರಾಸ್ ರಾಮಲಿಂಗೇಶ್ವರ ದೇವಸ್ಥಾನದ ಬಯಲಿನಲ್ಲಿ ಪರಸ್ಪರ ಬಡಿದಾಡುತ್ತ ಬಂದ ನಾಲ್ಕಾರು ಬೀಡಾಡಿ ದನಗಳು ತುಂಬು ಗರ್ಭಿಣಿ ಹಸುವೊಂದನ್ನು ಕೆಳಗೆ ಬೀಳಿಸಿದ್ದವು. ಹಸುವಿನ ಮೇಲೆ ದಾಳಿ …
Read More »ವಿಜಯಪುರ ಜಿಲ್ಲಾಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು; ನಗರದ ಹಲವೆಡೆ ಸೀಲ್ಡೌನ್
ವಿಜಯಪುರ(ಏ.12): ವಿಜಯಪುರದಲ್ಲಿ ಕೊರೋನಾ ಭೀತಿ ಹೆಚ್ಚಾದ ಹಿನ್ನೆಲೆ, ಜಿಲ್ಲಾಡಳಿತವು ಕಟ್ಟೆಚ್ಚರ ವಹಿಸಿದೆ. ಕೊರೋನಾ ನಿಗ್ರಹಕ್ಕಾಗಿ ಹಲವಾರು ಮುಂಜಾಗ್ರತಾ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ವಿಜಯಪುರ ಜಿಲ್ಲಾಡಳಿತವು ತೆಗೆದುಕೊಂಡಿದೆ. ಈಗ ವಿಜಯಪುರ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿದೆ. ಹೌದು, ವಿಜಯಪುರ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಿದೆ. ಹೀಗಾಗಿ ಜಿಲ್ಲಾಸ್ಪತ್ರೆಯಲ್ಲಿದ್ದ ಎಲ್ಲಾ ರೋಗಿಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಈ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 150ಕ್ಕೂ ಹೆಚ್ಚು ರೋಗಿಗಳಿದ್ದು, ಅವರನ್ನು ನಗರದ ಬೇರೆ …
Read More »ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಸಿಗುತ್ತೆ ರೇಷನ್…
ಬೆಂಗಳೂರು: ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ನೀಡುವ ಮಹತ್ವದ ಘೋಷಣೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರಿಗೂ ಏಪ್ರಿಲ್‍ನಿಂದ ಜೂನ್‍ವರೆಗೆ ಅಕ್ಕಿ ವಿತರಣೆ ಮಾಡಲು ಸರ್ಕಾರ ಆದೇಶ ನೀಡಿದೆ. ಈ ಮೂಲಕ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಸಿಗಲಿದೆ. ಆದರೆ ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಸರ್ಕಾರ ಹಣ ನಿಗದಿ ಮಾಡಿದೆ. …
Read More »ರಾಮನಗರ:2 ದಿನದಲ್ಲಿ ಪೊಲೀಸರಿಂದ 956 ವಾಹನಗಳು ಸೀಜ್, 92 ಪ್ರಕರಣ ದಾಖಲು
ರಾಮನಗರ: ಕೊರೊನಾ ತಡೆಗಾಗಿ ದೇಶವನ್ನೇ ಲಾಕ್‍ಡೌನ್ ಮಾಡಿದರೂ ಅನಗತ್ಯವಾಗಿ ರಸ್ತೆಗಿಳಿದು ಓಡಾಟ ನಡೆಸುತ್ತಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಲಾಕ್‍ಡೌನ್ ಉಲ್ಲಂಘನೆ ಸಂಬಂಧಿಸಿದಂತೆ ಒಟ್ಟು 956 ವಾಹನಗಳನ್ನು ರಾಮನಗರ ಪೊಲೀಸರು ಸೀಜ್ ಮಾಡಿದ್ದಾರೆ. ಅನುಮತಿಯಿಲ್ಲದೇ ಅಂಗಡಿ ತೆರೆದಿದ್ದಕ್ಕೆ 94 ಪ್ರಕರಣ ದಾಖಲು ಮಾಡಲಾಗಿದೆ. ಅನಗತ್ಯವಾಗಿ ರಸ್ತೆಗಿಳಿದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, ನಗರದ ರಸ್ತೆಗಳಲ್ಲಿ ಹಾಗೂ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನಗಳನ್ನು ಸೀಜ್ ಮಾಡಲಾಗಿದೆ. ಜೊತೆಗೆ ಅಂಗಡಿಗಳು, ಬೇಕರಿ, ಟೀ ಸ್ಟಾಲ್, ಸಲೂನ್ …
Read More »ನಾಪತ್ತೆಯಾಗಿರುವ ತಬ್ಲಿಘಿಗಳ ಮಾಹಿತಿ ನೀಡಿದ್ರೆ ಸಿಗುತ್ತೆ ನಗದು ಬಹುಮಾನ,”ಮಾಹಿತಿ ನೀಡಿದವರ ಹೆಸರ ಗೌಪ್”ಯ
ಲಕ್ನೋ: ತಬ್ಲಿಘಿ ಜಮಾತ್‍ಗೆ ತೆರಳಿ ಇನ್ನೂ ಪತ್ತೆಯಾಗದವರನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡಲಾಗುವುದು ಎಂದು ಉತ್ತರ ಪ್ರದೇಶದ ಪೊಲೀಸರು ಪ್ರಕಟಿಸಿದ್ದಾರೆ. ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಸದಸ್ಯರು ಕೂಡಲೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ನಡೆಸಬೇಕೆಂದು ಎಲ್ಲ ಸರ್ಕಾರಗಳು ಸೂಚನೆ ನೀಡುತ್ತಿವೆ. ಆದರೂ ಈ ಕಾರ್ಯಕ್ರಮಕ್ಕೆ ತೆರಳಿದ ಹಲವು ಮಂದಿ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಜಂಗಢದ ಪೊಲೀಸರು ನಾಪತ್ತೆಯಾದ ವ್ಯಕ್ತಿಗಳನ್ನು ಪತ್ತೆ ಮಾಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. ಬಹಳ ಸಂಖ್ಯೆಯಲ್ಲಿ ಜಮಾತ್ …
Read More »ಮೀನುಗಾರಿಕೆಗೆ ವಿನಾಯಿತಿ- ನಾಡದೋಣಿ, ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ
ಮಂಗಳೂರು: ಕೊರೊನಾ ಮಹಾಮಾರಿ ಹಿನ್ನೆಲೆ ಇನ್ನೂ 15 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸಲಾಗಿದ್ದು, ಆದರೆ ಕೆಲವು ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ. ಈ ಪಟ್ಟಿಯಲ್ಲಿ ಮೀನುಗಾರಿಕೆ ಸಹ ಇದ್ದು, ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇಂದಿನಿಂದ ನಾಡದೋಣಿ, ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಮೀನುಗಾರಿಕೆ ಆರಂಭವಾಗಲಿದೆ. ಜನಸಂದಣಿ ಇಲ್ಲದ …
Read More »