Breaking News
Home / ಜಿಲ್ಲೆ / ರಾಮನಗರ:2 ದಿನದಲ್ಲಿ ಪೊಲೀಸರಿಂದ 956 ವಾಹನಗಳು ಸೀಜ್, 92 ಪ್ರಕರಣ ದಾಖಲು

ರಾಮನಗರ:2 ದಿನದಲ್ಲಿ ಪೊಲೀಸರಿಂದ 956 ವಾಹನಗಳು ಸೀಜ್, 92 ಪ್ರಕರಣ ದಾಖಲು

Spread the love

ರಾಮನಗರ: ಕೊರೊನಾ ತಡೆಗಾಗಿ ದೇಶವನ್ನೇ ಲಾಕ್‍ಡೌನ್ ಮಾಡಿದರೂ ಅನಗತ್ಯವಾಗಿ ರಸ್ತೆಗಿಳಿದು ಓಡಾಟ ನಡೆಸುತ್ತಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಲಾಕ್‍ಡೌನ್ ಉಲ್ಲಂಘನೆ ಸಂಬಂಧಿಸಿದಂತೆ ಒಟ್ಟು 956 ವಾಹನಗಳನ್ನು ರಾಮನಗರ ಪೊಲೀಸರು ಸೀಜ್ ಮಾಡಿದ್ದಾರೆ. ಅನುಮತಿಯಿಲ್ಲದೇ ಅಂಗಡಿ ತೆರೆದಿದ್ದಕ್ಕೆ 94 ಪ್ರಕರಣ ದಾಖಲು ಮಾಡಲಾಗಿದೆ.

ಅನಗತ್ಯವಾಗಿ ರಸ್ತೆಗಿಳಿದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, ನಗರದ ರಸ್ತೆಗಳಲ್ಲಿ ಹಾಗೂ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನಗಳನ್ನು ಸೀಜ್ ಮಾಡಲಾಗಿದೆ. ಜೊತೆಗೆ ಅಂಗಡಿಗಳು, ಬೇಕರಿ, ಟೀ ಸ್ಟಾಲ್, ಸಲೂನ್ ಶಾಪ್‍ಗಳನ್ನು ತೆರೆದು ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ ಒಟ್ಟು 94 FIR ದಾಖಲಾಗಿದೆ.

ಈಗಾಗಲೇ ರಾಮನಗರ, ಚನ್ನಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೀಜ್ ಮಾಡಿರುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಪೊಲೀಸ್ ಠಾಣೆ ಆವರಣದಲ್ಲಿ ಬೈಕ್‍ಗಳು, ಕಾರು, ಆಟೋಗಳು ನಿಲ್ಲಿಸಲು ಸ್ಥಳಾವಕಾಶವೇ ಇಲ್ಲದಂತಾಗಿದೆ. ಠಾಣೆಯ ಆವರಣದಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣ ಬಳಕೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

ಸೀಜ್ ಮಾಡುವ ವಾಹನಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ನಿಲ್ಲಿಸಿ ಲಾಕ್‍ಡೌನ್ ತೆರವಿನ ಬಳಿಕ ದಂಡ ಹಾಕಿ ಬೈಕ್ ನೀಡಲು ಪೊಲೀಸರು ಮುಂದಾಗಿದ್ದಾರೆ.


Spread the love

About Laxminews 24x7

Check Also

ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’

Spread the love ಗದಗ : ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’ (ವೈಮಾನಿಕ ಭೂ ಸಮೀಕ್ಷೆ)ಗೆ ಚಾಲನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ