ಹೈದರಾಬಾದ್: ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ತಮ್ಮ ಮುಂದಿನ ಸಿನಿಮಾ ಮಾಡುವುದಾಗಿ ಖ್ಯಾತ ನಿರ್ದೇಶಕ ಎಸ್‍ಎಸ್ ರಾಜಮೌಳಿ ಹೇಳಿದ್ದಾರೆ. ಆ ಮೂಲಕ ಟಾಲಿವುಡ್‍ನಲ್ಲಿ ಬಹುದಿನಗಳಿಂದ ಕೇಳಿ ಬರುತ್ತಿದ್ದ ಕ್ರೇಜಿ ಕಾಂಬಿನೇಷನ್ ಸುದ್ದಿಗಳಿಗೆ ತೆರೆ ಹೇಳಿದಿದ್ದಾರೆ. ಸದ್ಯ ಎನ್‍ಟಿಆರ್, ರಾಮ್ ಚರಣ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಮಹೇಶ್ ಬಾಬು ಅವರೊಂದಿಗೆ ತಮ್ಮ ಮುಂದಿನ ಸಿನಿಮಾ ಎಂದು ಘೋಷಣೆ ಮಾಡುವ ಮೂಲಕ ಅಭಿಮಾನಿಗಳಲ್ಲಿ …
Read More »Yearly Archives: 2020
ದೇಶದಲ್ಲಿ 15 ಸಾವಿರ ದಾಟಿದ ಸೋಂಕಿತರ ಸಂಖ್ಯೆ- ಅಮೆರಿಕದಲ್ಲಿ ಒಂದೇ ದಿನ 4,600 ಸಾವು
ನವದೆಹಲಿ: ದೇಶದಲ್ಲಿ ಇಂದು ಒಂದೇ ದಿನ 1,300ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 15,232ಕ್ಕೆ ತಲುಪಿದೆ. ಈ ಪೈಕಿ ತಬ್ಲೀಘಿಗಳ ಪಾಲು 4,200ಕ್ಕೂ ಹೆಚ್ಚು. ಅಂದರೆ ಪ್ರತಿ ಮೂವರು ಸೋಂಕಿತರಲ್ಲಿ ಒಬ್ಬರು ತಬ್ಲಿಘಿಗಳು. ಕಳೆದ 24 ಗಂಟೆಗಳಲ್ಲಿ 43 ಮಂದಿ ಸಾವನ್ನಪ್ಪಿದ್ದು, ಒಟ್ಟು 505 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 3,648 ದಾಟಿದ್ದು, ಇಂದು 328 ಹೊಸ ಪ್ರಕರಣಗಳು ಪತ್ತೆಯಾಗಿವೆ. ಗುಜರಾತ್‍ನಲ್ಲಿ ಒಂದೇ ದಿನ …
Read More »ಮಗನಿಗೆ ಕೊರೊನಾ ಸೋಂಕು- ಹೃದಯಾಘಾತದಿಂದ ತಾಯಿ ಸಾವು…….
ಬಾಗಲಕೋಟೆ: ಮಗನಿಗೆ ಕೊರೊನಾ ಸೋಂಕಿರುವ ವಿಷಯ ತಿಳಿಯುತ್ತಿದ್ದಂತೆ ರೋಗಿ ನಂ.381 ಅವರ 70 ವರ್ಷದ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಂಯ ಜಮಖಂಡಿಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ನಿವಾಸಿಯಾಗಿರುವ ಸೋಂಕಿತ ತಾಯಿ, ಹೃದಯಸಂಬಂಧಿ ಖಾಯಿಲೆ, ರಕ್ತದೊತ್ತಡದಿಂದ ಬಳಲುತ್ತಿದ್ದರು. ಇತ್ತೀಚೆಗೆ ಜಮಖಂಡಿ ಖಾಸಗಿ ಆಸ್ಪತ್ರೆಯಲ್ಲಿ ಒಂದು ದಿನ ದಾಖಲಾಗಿ ಡಿಸ್ಚಾರ್ಜ್ ಆಗಿದ್ದರು. ಮನೆಯಲ್ಲಿ ಕುಟುಂಬದ ಜೊತೆಗಿದ್ದರು. ಇಂದು ಮಗನಿಗೆ ಕೊರೊನಾ ಸೋಂಕಿರುವುದು ದೃಢವಾಗಿತ್ತು. ಇದರಿಂದ ಶಾಕ್‍ಗೆ …
Read More »ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ಇಂದು ರಾತ್ರಿ 10.15ಕ್ಕೆ ಬೆಳಗಾವಿಯಲ್ಲಿ ನಿಧನರಾದರು
ಬೆಳಗಾವಿ – ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ಇಂದು ರಾತ್ರಿ 10.15ಕ್ಕೆ ಬೆಳಗಾವಿಯಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಪತ್ನಿ, ನಾಲ್ವರು ಗಂಡುಮಕ್ಕಳು ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಅಸಂಗತ ನಾಟಕ ಮತ್ತು ಜಪಾನಿ ಮಾದರಿಯ ಹೈಕುಗಳನ್ನು ಪರಿಚಯಿಸಿದ್ದರು. ಹೈಕು ಮಾದರಿಯ ಕವಿತೆಗಳನ್ನು ಸಹ ಕನ್ನಡಕ್ಕೆ ಪರಿಚಯಿಸಿದ್ದರು. ಗುಲಬರ್ಗಾದಲ್ಲಿ ಜನಿಸಿದ್ದ ಅವರು ಹಿಂದಿ ಉಪನ್ಯಾಸಕರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. …
Read More »ಬೆಚ್ಚಿ ಬಿದ್ದ ಬೆಳಗಾವಿ ಜಿಲ್ಲೆಗೆ ಖುಷಿ ಸುದ್ದಿ: ಪಾಸಿಟಿವ್ ವ್ಯಕ್ತಿ ಗುಣಮುಖ
ಬೆಳಗಾವಿ: ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆಳಗಾವಿಯಲ್ಲಿ ಶನಿವಾರ ಕೊಂಚ ನಿಟ್ಟುಸಿರು ಬಿಡುವ ವಿಚಾರ ಹೊರ ಬಿದ್ದಿದ್ದು, ಸೋಂಕಿತ ವ್ಯಕ್ತಿಯೋರ್ವ ಗುಣಮುಖನಾಗಿ ಡಿಸ್ಚಾರ್ಜ್ ಅಗುತ್ತಿರುವುದ ಜಿಲ್ಲೆಗೆ ಖುಷಿಯ ವಿಷಯವಾಗಿದೆ. ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ವ್ಯಕ್ತಿಗೆ ಏ. 3ರಂದು ಸೋಂಕು ತಗುಲಿರುವುದು ಖಚಿತವಾಗಿತ್ತು. ಜಿಲ್ಲೆಯಲ್ಲಿ ಬಂದ ಮೊದಲ ಪಾಸಿಟಿವ್ ವರದಿಯಲ್ಲಿ ಈ ವ್ಯಕ್ತಿಯೂ ಸೇರಿದ್ದನು. 14 ದಿನಗಳ ಬಳಿಕ ವ್ಯಕ್ತಿಯ ಗಮಟಲು ದ್ರವ ಮದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದಾಗ ನೆಗೆಟಿವ್ …
Read More »ದಿಯಾ ಸಿನಿಮಾ ಮೆಚ್ಚಿದ ಸಮಂತಾ, ತೆಲುಗಿಗೆ ರಿಮೇಕ್ ಮಾಡಲು ಚಿಂತನೆ….
ಹೈದರಾಬಾದ್: ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ ಅಕ್ಕಿನೇನಿ ರಿಮೇಕ್ ಸಿನಿಮಾಗಳತ್ತ ಹೆಚ್ಚು ಒಲವು ತೋರುತ್ತಿದ್ದು, ಕೆಲ ರಿಮೇಕ್ ಸಿನಿಮಾಗಳೂ ಅವರಿಗೆ ಯಶಸ್ಸು ಹಾಗೂ ಹೆಸರನ್ನು ತಂದುಕೊಟ್ಟಿವೆ. ಅದೇ ರೀತಿ ಇದೀಗ ಕನ್ನಡದ ಸಿನಿಮಾವೊಂದರ ಮೇಲೆ ಸಮಂತಾ ಕಣ್ಣು ಹಾಕಿದ್ದಾರೆ. ಕೇವಲ ನಟಿಸುವುದು ಮಾತ್ರವಲ್ಲ, ಅವರೇ ನಿರ್ಮಿಸುವುದಕ್ಕೂ ಮುಂದಾಗಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಇತ್ತೀಚೆಗೆ ಸಮಂತಾ ಕನ್ನಡದ ಈ ಸಿನಿಮಾ ನೋಡಿದ್ದು, ತುಂಬಾ ಇಷ್ಟವಾಗಿದೆಯಂತೆ. ಹೀಗಾಗಿ ಈ ಸಿನಿಮಾವನ್ನು ತೆಲುಗಿನಲ್ಲಿ …
Read More »ಸರ್ಕಾರದ ಮುಂದಿನ ಆದೇಶದವರೆಗೂ ಖಾಸಗಿ ಶಾಲೆಗಳು ಶುಲ್ಕ ವಸೂಲಿ ಮಾಡುವಂತಿಲ್ಲ
ಬೆಂಗಳೂರು,ಏ.18- ಖಾಸಗಿ ಶಾಲೆಗಳಲ್ಲಿ 2020-21ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ವಸೂಲಿ ಮಾಡುವುದನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. 2019-20ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ತೇರ್ಗಡೆಗೊಂಡು ಅದೇ ಶಾಲೆಯಲ್ಲಿ ಮುಂದಿನ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಂದ ಖಾಸಗಿ ಶಾಲೆಗಳು ಆನ್‍ಲೈನ್ ಮೂಲಕ ಬೋಧನಾ ಶುಲ್ಕ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು ಮುಂದಿನ ಆದೇಶದವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಖಾಸಗಿ ಶಾಲೆಗಳವರು ಆನ್‍ಲೈನ್ ಮೂಲಕ …
Read More »ಕೂಲಿ ಕಾರ್ಮಿಕರ ಮಗಳ ಹುಟ್ಟುಹಬ್ಬ ಆಚರಿಸಿದ ಪೊಲೀಸ್……..
ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಏಕಾಏಕಿ ಲಾಕ್‍ಡೌನ್ ಜಾರಿಗೆ ಬಂದಿದೆ. ಇಂತಹ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಂದ ಅನೇಕ ಹೃದಯ ಸ್ಪರ್ಶಿಸು ಪ್ರಸಂಗಗಳು ನಡೆದಿವೆ. ಅಂತೆ ಪೊಲೀಸರ ಪುಟ್ಟ ಸಹಾಯದಿಂದ ಶನಿವಾರ ಕೂಲಿ ಕಾರ್ಮಿಕರ ನಾಲ್ಕು ವರ್ಷದ ಬಾಲಕಿಯೊಬ್ಬಳು ತನ್ನ ಜನ್ಮದಿನವನ್ನು ಆಚರಿಸಿಕೊಳ್ಳಲು ಸಾಧ್ಯವಾಯಿತು. ಫತೇಪುರಿ ಬೇರಿಯ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು …
Read More »ಹುಬ್ಬಳ್ಳಿ:ಸಂಚಾರಿ ಫೀವರ್ ಕ್ಲೀನಿಕ್ ಕಾರ್ಯಾರಂಭ- ಕ್ವಾರಂಟೈನ್ ಪ್ರದೇಶಗಳಲ್ಲಿ ತಪಾಸಣೆ
ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಅನ್ನು ಸಂಚಾರಿ ಫೀವರ್ ಕ್ಲೀನಿಕ್ ಆಗಿ ಮಾರ್ಪಡಿಸಲಾಗಿದೆ. ಕೊರೊನಾ ಸೋಂಕು ಕಂಡುಬಂದ ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಸಂಚರಿಸಿ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡವರನ್ನು ಪರೀಕ್ಷಿಸಲಾಗುವುದು ಎಂದು ಜಿಲ್ಲಾ ಉಸ್ತವಾರಿ ಸಚಿವರೂ ಆಗಿರುವ ಬೃಹತ್ ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದರು. ನಗರದ ಬಿಆರ್ ಟಿಎಸ್ ಪ್ರಾದೇಶಿಕ ಬಸ್ ನಿಲ್ದಾಣದಲ್ಲಿನ ಕಂಟ್ರೋಲ್ ರೂಂ ಹಾಗೂ …
Read More »ಕುಡಿತ ಬಿಟ್ಟು ಇತರರಿಗೂ ಕುಡಿಯಬೇಡಿ ಎನ್ನುತ್ತಿದ್ದಾರಂತೆ ಯಾರು ಗೊತ್ತಾ .ಇವರು..
ಚಿಕ್ಕೋಡಿ: ಮಾಜಿ ಸಿಎಂ ಸಿದ್ದರಾಮಯ್ಯನವರ ಭಾಷಣದ ವೇಳೆ ಕಂಠಪೂರ್ತಿ ಕುಡಿದು ಹೌದೋ ಹುಲಿಯಾ ಎಂದು ಕೂಗಿ ಖ್ಯಾತಿ ಗಳಿಸಿದ್ದ ಪೀರಪ್ಪ ಕಟ್ಟಿಮನಿ ಇದೀಗ ಲಾಕ್‌ಡೌನ್ ಹಿನ್ನೆಲೆ ತಾನೂ ಕುಡಿತ ಬಿಟ್ಟು ಇತರರಿಗೂ ಕುಡಿಯಬೇಡಿ ಎನ್ನುತ್ತಿದ್ದಾರಂತೆ. ಕುಡಿದು ಬಂದ್ರೆ ಕುಟುಂಬದಲ್ಲಿ ಜಗಳವಾಗುತ್ತೆ, ಬಡತನ ಬರುತ್ತೆ, ನಾನು ಬಿಟ್ಟಿದ್ದೀನಿ.. ನೀವೂ ಬಿಡಿ ಅಂತ ಪೀರಪ್ಪ ಹೇಳುತ್ತಿದ್ದಾರಂತೆ. ಅಲ್ಲದೇ, ಸೆಲ್ಫಿ ತೆಗೆದುಕೊಳ್ಳುವವರು ನನಗೆ ಹಣ ನೀಡುತ್ತಿದ್ದರು, ಅದಕ್ಕೆ ನಾನು ಕುಡಿಯುತ್ತಿದ್ದೆ ಅಂತ ಬೆಳಗಾವಿ ಜಿಲ್ಲೆ …
Read More »