ಗೋಕಾಕ: ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ಇಂದು 75 ಸಾವಿರ ರೂ. ಚೆಕ್ ಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ವೀಕರಿಸಿದರು. ಧುಳಗೌಡ ಪಾಟೀಲ ಅವರು ವ್ಯಯಕ್ತಿಕವಾಗಿ 50 ಮತ್ತು ರಾಯಬಾಗ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಮಹಾವೀರ ಮೊಹಿತೆ ಅವರು 25 ಸಾವಿರ ರೂ. ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಲಕ್ಷ್ಮಣರಾವ ಚಿಂಗಳೆ ಸೇರಿ ಇತರರು ಇದ್ದರು.
Read More »Yearly Archives: 2020
ಬೆಳಗಾವಿಯಲ್ಲಿ ಮತ್ತೆ 2 ಪಾಸಿಟಿವ್ ಕೇಸ್ ಪತ್ತೆ ಆಗಿವೆ. ಸೊಂಕಿತರ ಸಂಖ್ಯೆ 45ಕ್ಕೇರಿದೆ
ಬೆಳಗಾವಿ- ಬೆಳಗಾವಿ ಪಾಲಿಗೆ ಇಂದು ಕ್ರವಾರ ಮಧ್ಯಾಹ್ನ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಜಿಲ್ಲೆಯ ರಾಯಬಾಗ ಕುಡಚಿಯ ಎರಡು ಪಾಸಟೀವ್ ಕೇಸ್ ಪತ್ತೆಯಾಗಿವೆ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 45ಕ್ಕೇರಿದೆ. ಮಹಾಮಾರಿ ಕೊರೋನಾ ದಿನದಿಂದ ದುನಕ್ಕೆ ಬೆಳಗಾವಿ ಜಿಲ್ಲೆಯಿಂದ ದೂರ..ದೂರವಾಗುತ್ತಿದೆ ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಮೈನಸ್ ಆಗುತ್ತಲೇ ಇದೆ.ಆದ್ರೆ ಇಂದು ಮತ್ತೆ ಇಬ್ಬರ ರಿಪೋರ್ಟ್ ಪಾಸಿಟೀವ್ ಬಂದಿದ್ದು ಜಿಲ್ಲೆಗೆ ಆಘಾತ ತಂದಿದೆ. ಇಂದು ಬಿಡುಗಡೆಯಾದ ಹೆಲ್ತ್ …
Read More »ಕಳ್ಳಭಟ್ಟಿ ದಂಧೆ ವಿರುದ್ಧ 21 ಪ್ರಕರಣ ದಾಖಲು………
ಕಳ್ಳಭಟ್ಟಿ ತಯಾರಿಕೆಯಲ್ಲಿ ಕೊಳೆತ ಹಣ್ಣು, ಕೊಳೆತ ಬೆಲ್ಲ, ಬ್ಯಾಟರಿ ಸೆಲ್, ಯೂರಿಯಾ ಮತ್ತಿತರ ಆರೋಗ್ಯಕ್ಕೆ ಹಾನಿಕರವಾದ ಪದಾರ್ಥಗಳನ್ನು ಮಿಶ್ರಣ ಮಾಡುವ ಸಾಧ್ಯತೆಗಳಿದ್ದು, ಇದು ಪಾನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿ ರೋಗ ನಿರೋಧಕ ಶಕ್ತಿ ಕುಂದಿಸಲಿದೆ. ಮಡಿಕೇರಿ: ಜಿಲ್ಲೆಯಾದ್ಯಂತ ಕೋವಿಡ್-19 (Covid-19) ವೈರಸ್ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಿಸುವಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಮದ್ಯ ಮಾರಾಟ ನಿಷೇದಿಸಿದ್ದು, ಮದ್ಯ ಮಾರಾಟ ನಿಷೇದ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ ಎಂದು ಕೊಡಗು ಜಿಲ್ಲಾ ಅಬಕಾರಿ …
Read More »ರಂಜಾನ್ ಮಾಸಾಚರಣೆ ಪಾಲಿಸಬೇಕಾದ ಮಾರ್ಗಸೂಚಿ…….
ಮಸೀದಿಯ ಸಿಬ್ಬಂದಿಗಳು ಯಾವುದೇ ತರಹದ ಧ್ವನಿವರ್ಧಕಗಳನ್ನು ಮಸೀದಿಯಲ್ಲಿ ಐದು ಹೊತ್ತಿನ ಪ್ರಾರ್ಥನೆ(ನಮಾಜ್) ಯನ್ನು ಶುಕ್ರವಾರ (ನಮಾಜ್) ಪ್ರಾರ್ಥನೆ ಸಹ ಒಳಗೊಂಡಂತೆ ಮತ್ತು ತರ್ಹಾವಿ (ನಮಾಜ್) ಪ್ರಾರ್ಥನೆಗೆ ಬಳಸಲು ನಿರ್ಬಂಧಿಸಲಾಗಿದೆ. ಬೆಂಗಳೂರು: ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸ ಪ್ರಾರಂಭವಾಗಲಿದ್ದು, ಮೇ 3ರವರೆಗೆ ಅನ್ವಯವಾಗುವಂತೆ ಸರ್ಕಾರದ ಮಾರ್ಗದರ್ಶನಗಳನ್ನು ಮುಂದುವರೆಸುತ್ತಾ ದಾವಣಗೆರೆ ಜಿಲ್ಲೆಯಾದ್ಯಂತ ಬರುವ ಎಲ್ಲಾ ಮಸೀದಿ, ದರ್ಗಾಗಳಲ್ಲಿ ದೈನಂದಿನ ಮತ್ತು ರಂಜಾನ್ ಮಾಸದ ಸಾಮೂಹಿಕ ಪ್ರಾರ್ಥನೆಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ …
Read More »ಬಿಬಿಎಂಪಿ ಬಜೆಟ್ ಪುಸ್ತಕದಲ್ಲಿ ಮೇಯರ್ ಗೆ ಅಪಮಾನ..!
ಬೆಂಗಳೂರು : ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಳೆದು ತೂಗಿ ಮಂಡಿಸಲಾದ ಬಿಬಿಎಂಪಿ ಬಜೆಟ್ ಪುಸ್ತಕದಲ್ಲಿ ಮೇಯರ್ ಅವರ ಭಾವಚಿತ್ರವೇ ನಾಪತ್ತೆ..! ಬಜೆಟ್ ಪುಸ್ತಕದಲ್ಲಿ ಮೇಯರ್ ಭಾವಚಿತ್ರ ಪ್ರಕಟಿಸುವುದು ಶಿಷ್ಟಾಚಾರ. ಆದರೆ, ಈ ಬಾರಿಯ ಪುಸ್ತಕದಲ್ಲಿ ಮೇಯರ್ ಗೌತಮ್‍ಕುಮಾರ್ ಅವರ ಭಾವಚಿತ್ರ ಇಲ್ಲದೆ ಇರುವುದರಿಂದ ಅವರಿಗೆ ಉದ್ದೇಶಪೂರ್ವಕವಾಗಿಯೇ ಅಪಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಬಜೆಟ್ ಪುಸ್ತಕದಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಶ್ರೀನಿವಾಸ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ …
Read More »ಪ್ರಶಸ್ತಿಗಳ ಸುರಿಮಳೆ, ಅಣ್ಣಾವ್ರ ಕುಟುಂಬದ ದಾಖಲೆ..!
ವರನಟ ಡಾ.ರಾಜ್‍ಕುಮಾರ್ ಅವರ ಜನ್ಮ ದಿನ ಏಪ್ರಿಲ್ 24ರಂದು. ರಾಜ್ ಮತ್ತು ಅವರ ಕುಟುಂಬದ ಸಾಧನೆ ಅನನ್ಯ. ಈ ಕುರಿತು ಒಂದು ಪಕ್ಷಿನೋಟ ಇಲ್ಲಿದೆ. ಬಾಲಿವುಡ್ ಅಥವಾ ಹಿಂದಿ ಚಿತ್ರರಂಗದಲ್ಲಿ ರಾಜ್‍ಕಪೂರ್ ಕುಟುಂಬ ದೊಡ್ಡ ಹೆಸರು ಮಾಡಿದೆ. ಈ ಕುಟುಂಬದ ಪೃಥ್ವಿರಾಜ್ ಕಪೂರ್, ರಾಜ್‍ಕಪೂರ್, ಶಮ್ಮಿ ಕಪೂರ್, ಶಶಿಕಪೂರ್ ಈ ನಾಲ್ವರು ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವುದು ಭಾರತೀಯ ಚಿತ್ರರಂಗದಲ್ಲೇ ಒಂದು ಅಪೂರ್ವ …
Read More »ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ …….
ಬೆಂಗಳೂರು, ಏ.24-ರಾಮನಗರ ಜೈಲ್ ಅನ್ನು ಸಂಪೂರ್ಣ ಕ್ವಾರಂಟೈನ್ ಮಾಡಬೇಕು. ಪೊಲೀಸರು ಸೇರಿದಂತೆ ಜೈಲಿನಲ್ಲಿ ಕಾರ್ಯನಿರ್ವಹಿಸಿದ ಅಡುಗೆ ಮತ್ತು ಸ್ವಚ್ಛತೆಯವರು ಸೇರಿದಂತೆ ಸಂಬಂಧಿಸಿದವರ ಆರೋಗ್ಯ ಕಾಪಾಡಲು ಸರ್ಕಾರ ತಕ್ಷಣವೇ ಕಾರ್ಯೋನ್ಮುಖವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸರ್ಕಾರ ತೆಗೆದುಕೊಂಡ ಎಡವಟ್ಟು ನಿರ್ಧಾರದಿಂದ ರಾಮನಗರದಲ್ಲೂ ಸೋಂಕು ಹರಡುವ ಭೀತಿ ಎದುರಾಗಿದೆ. ಸರ್ಕಾರ ಸಕಲ ಮುನ್ನೆಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ಪಾದರಾಯನಪುರದ …
Read More »ಯುವ ವಕೀಲರ ಬ್ಯಾಂಕ್ ಖಾಯತೆಗೆ ತಲಾ 5 ಸಾವಿರ ಹಣ ಜಮೆ
ಬೆಂಗಳೂರು : ಬೆಂಗಳೂರು ವಕೀಲರ ಸಂಘವು ಹಿರಿಯ ಹಾಗೂ ಇತರ ವಕೀಲರಿಂದ ದೇಣಿಗೆ ಸಂಗ್ರಹಿಸಿ, ಸಂಕಷ್ಟದಲ್ಲಿದ್ದ 368 ಅರ್ಹ ಯುವ ವಕೀಲರಿಗೆ ತಲಾ 5 ಸಾವಿರ ರೂ.ಗಳಂತೆ ಒಟ್ಟು 18,40,000 ರೂ. ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಿದೆ. ಕೊರೋನಾದ ಸಂಕಷ್ಟದ ಕಾಲದಲ್ಲಿ ಹಿರಿಯ ಹಾಗೂ ಇತರೆ ವಕೀಲರಿಂದ 19,14,501 ರೂ.ಗಳನ್ನು ದೇಣಿಗೆ ಸಂಗ್ರಹಿಸಲಾಗಿತ್ತು ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ತಿಳಿಸಿದ್ದಾರೆ. ಏಪ್ರಿಲ್ 6 ರಂದು ಸಂಘದ …
Read More »ರಾಜ್ಯದಲ್ಲಿ ಲಾಕ್‍ಡೌನ್ ಮತ್ತಷ್ಟು ಸಡಿಲ- ನಗರ ಪ್ರದೇಶದಲ್ಲಿಯೂ ಕಟ್ಟಡ ನಿರ್ಮಾಣ
ಬೆಂಗಳೂರು: ಕೇಂದ್ರ ಸರ್ಕಾರದ ಬುಧವಾರ ನೀಡಿದ್ದ ಮಾರ್ಗಸೂಚಿಗಳ ಅನ್ವಯ ಒಂದಿಷ್ಟು ಕೊರೊನಾ ಲಾಕ್‍ಡೌನ್ ನಿಯಮಗಳನ್ನು ಸಡಿಲ ಮಾಡಿದ್ದ ರಾಜ್ಯ ಸರ್ಕಾರ, ಇವತ್ತು ಇನ್ನೊಂದಿಷ್ಟು ವಿನಾಯಿತಿ ನೀಡಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಬೆಂಗಳೂರು ಸೇರಿದಂತೆ ನಗರ ಹಲವು ನಗರಗಳಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆ ಆಗದಿದ್ದರೂ ರಾಜ್ಯ ಸರ್ಕಾರ ರಿಸ್ಕ್ ತೆಗೆದುಕೊಂಡಂತೆ ಕಾಣುತ್ತಿದೆ. ಮೊಬೈಲ್ ಅಂಗಡಿ, ಜ್ಯೂಸ್ ಅಂಗಡಿ, ಕಟ್ಟಡ ನಿರ್ಮಾಣ ಹೀಗೆ ಹಲವುಗಳಿಗೆ ಮಹಾನಗರ, ನಗರಸಭೆಗಳ ವ್ಯಾಪ್ತಿಯಲ್ಲಿ ಷರತ್ತುಬದ್ಧ ಅನುಮತಿ …
Read More »ಹೊಂಗಸಂದ್ರದಲ್ಲಿ ವ್ಯಕ್ತಿಯೊಬ್ಬ ಮನೆ,ಅಂಗಡಿಗಳ ಮುಂದೆ ಉಗುಳುವುದು, ಅನುಮಾನಾಸ್ಪದ
ಬೆಂಗಳೂರು: ಕೊರೊನಾ ಭೀತಿಯ ನಡುವೆಯೇ ಬೆಂಗಳೂರಿನ ಹೊಂಗಸಂದ್ರದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡಿ ಜನರಲ್ಲಿ ಮತ್ತಷ್ಟು ಭಯ ಹುಟ್ಟಿಸಿದ್ದಾನೆ. ಹೊಂಗಸಂದ್ರದ ಕೊರೊನಾ ಪೀಡಿತ ಪ್ರದೇಶ ವಿದ್ಯಾಜ್ಯೋತಿ ನಗರದ ಸುತ್ತಮುತ್ತ ವ್ಯಕ್ತಿ ಓಡಾಟ ನಡೆಸುತ್ತಿದ್ದಾನೆ. ಅಲ್ಲಿ ಈಗಾಗಲೇ 9 ಜನರಿಗೆ ಪಾಸಿಟಿವ್ ಬಂದಿದ್ದು, ಪರಿಣಾಮ ಹೊಂಗಸಂದ್ರ ಸಂಪೂರ್ಣ ಸೀಲ್ ಡೌನ್ ಆಗಿದೆ. ಇದರ ಮಧ್ಯೆ ಈತನ ವರ್ತನೆ ಕಂಡು ಹೊಂಸಂದ್ರದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಈ ಅನುಮಾನಸ್ಪದ ವ್ಯಕ್ತಿ ಉಗುಳುವುದು, ಮನೆಗಳ ಮುಂದೆ, …
Read More »