Breaking News
Home / ಜಿಲ್ಲೆ / ಕೊಡಗು / ಕಳ್ಳಭಟ್ಟಿ ದಂಧೆ ವಿರುದ್ಧ 21 ಪ್ರಕರಣ ದಾಖಲು………

ಕಳ್ಳಭಟ್ಟಿ ದಂಧೆ ವಿರುದ್ಧ 21 ಪ್ರಕರಣ ದಾಖಲು………

Spread the love

ಕಳ್ಳಭಟ್ಟಿ ತಯಾರಿಕೆಯಲ್ಲಿ ಕೊಳೆತ ಹಣ್ಣು, ಕೊಳೆತ ಬೆಲ್ಲ, ಬ್ಯಾಟರಿ ಸೆಲ್, ಯೂರಿಯಾ ಮತ್ತಿತರ ಆರೋಗ್ಯಕ್ಕೆ ಹಾನಿಕರವಾದ ಪದಾರ್ಥಗಳನ್ನು ಮಿಶ್ರಣ ಮಾಡುವ ಸಾಧ್ಯತೆಗಳಿದ್ದು, ಇದು ಪಾನಿಕರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡಿ ರೋಗ ನಿರೋಧಕ ಶಕ್ತಿ ಕುಂದಿಸಲಿದೆ. 

ಮಡಿಕೇರಿ: ಜಿಲ್ಲೆಯಾದ್ಯಂತ ಕೋವಿಡ್-19 (Covid-19) ವೈರಸ್ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಿಸುವಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಮದ್ಯ ಮಾರಾಟ ನಿಷೇದಿಸಿದ್ದು, ಮದ್ಯ ಮಾರಾಟ ನಿಷೇದ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ ಎಂದು ಕೊಡಗು ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಪಿ.ಬಿಂದುಶ್ರೀ ತಿಳಿಸಿದ್ದಾರೆ.  
     
ಇದುವರೆಗೆ ಮಡಿಕೇರಿ ತಾಲ್ಲೂಕಿನಲ್ಲಿ 09 ಪ್ರಕರಣ ದಾಖಲಿಸಲಾಗಿದ್ದು, 23 ಲೀ. ಕಳ್ಳಭಟ್ಟಿ, 1665 ಲೀ. ಗೇರು ಹಣ್ಣಿನ ಪುಳಗಂಜಿ ಹಾಗೂ 1 ಸನ್ನದಿನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪಿ.ಬಿಂದುಶ್ರೀ ಮಾಹಿತಿ ನೀಡಿದ್ದಾರೆ.

ತುರ್ತು ಕಾರ್ಯಕ್ಕೆ ಅಂತರ್ ಜಿಲ್ಲೆ, ಅಂತರ್ ರಾಜ್ಯ ತೆರಳುವವರಿಗೆ ಸಿಗಲಿದೆ ಇ-ಪಾಸ್

ಸೋಮವಾರಪೇಟೆ ತಾಲ್ಲೂಕಿನಲ್ಲಿ 09 ಪ್ರಕರಣ ದಾಖಲಿಸಿದ್ದು, 2.5 ಲೀ. ಕಳ್ಳಭಟ್ಟಿ, 128 ಲೀ. ಬೆಲ್ಲದ ಕೊಳೆ, 120 ಲೀ. ಬೆಲ್ಲದ ಪುಳಗಂಜಿ ಹಾಗೂ 2 ಸನ್ನದಿನ ಮೇಲೆ ಪ್ರಕರಣ ದಾಖಲಿಸಲಾಗಿದೆ.     ಹಾಗೆಯೇ ವಿರಾಜಪೇಟೆ ತಾಲ್ಲೂಕಿನಲ್ಲಿ 03 ಪ್ರಕರಣ ದಾಖಲಿಸಲಾಗಿದ್ದು 05 ಲೀ. ಕಳ್ಳಭಟ್ಟಿ, 20 ಲೀ.  ಪುಳಗಂಜಿ ಹಾಗೂ 2 ಸನ್ನದಿನ ಮೇಲೆ ಪ್ರಕರಣ ದಾಖಲಾಗಿದೆ.

ಜೊತೆಗೆ ಜಿಲ್ಲೆಯಾದ್ಯಂತ ಒಟ್ಟು 360 ದಾಳಿ ನಡೆಸಿದ್ದು 21 ಪ್ರಕರಣ ದಾಖಲಿಸಲಾಗಿದ್ದು,  128 ಲೀ. ಬೆಲ್ಲದ ಕೊಳೆ, 1805 ಪುಳಗಂಜಿ, 30.500 ಲೀ ಕಳ್ಳಭಟ್ಟಿ ಸಾರಾಯಿ, 8.280 ಲೀ ಅಕ್ರಮ ಮದ್ಯ ಹಾಗೂ ಕಳ್ಳಭಟ್ಟಿ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ನಿಯಮ ಉಲ್ಲಂಘನೆ ಮಾಡಿರುವ ಆರೋಪಿಗಳ ವಿರುದ್ದ ಮೊಕದ್ದಮೆ ದಾಖಲಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ.


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ