ತುಮಕೂರು/ಬೆಂಗಳೂರು, ಮೇ 25- ಮಹಾಮಾರಿ ಕೊರೊನಾ ಹಳ್ಳಿ ಹಳ್ಳಿಗೂ, ಗಲ್ಲಿ ಗಲ್ಲಿಗೂ ವಕ್ಕರಿಸಿದೆ. ನಗರ ಪ್ರದೇಶಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈಗ ಗ್ರಾಮೀಣ ಪ್ರದೇಶಗಳಿಗೂ ಕಾಲಿಟ್ಟಿದೆ. ಲಾಕ್‍ಡೌನ್ ನಿಯಮಗಳನ್ನು ಚಾಚೂತಪ್ಪದೆ ಕಡ್ಡಾಯವಾಗಿ ಪಾಲಿಸುತ್ತ ಕೊರೊನಾ ಸೋಂಕಿತರನ್ನಾಗಲಿ, ಶಂಕಿತರನ್ನಾಗಲಿ ಒಳಗೆ ಬಿಟ್ಟುಕೊಳ್ಳದೆ ಗ್ರಾಮಗಳಲ್ಲಿ ಅತಿ ಎಚ್ಚರಿಕೆಯಿಂದ ನಿಗಾ ವಹಿಸಿದ್ದ ಹಿನ್ನೆಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಗ್ರಾಮಾಂತರ ಪ್ರದೇಶದಲ್ಲಿ ಪತ್ತೆಯಾಗಿರಲಿಲ್ಲ. ಆದರೆ, ಲಾಕ್‍ಡೌನ್ ಸಡಿಲಿಕೆಯಾಗಿ ಹಳ್ಳಿಗಳಿಗೆ ಬರುವವರು, ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ …
Read More »Yearly Archives: 2020
ಇನ್ನೂ 2 ತಿಂಗಳು ‘ಸಂಡೆ ಲಾಕ್‍ಡೌನ್’ ಮುಂದುವರಿಕೆ..!
ಬೆಂಗಳೂರು, ಮೇ 25- ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ನಿನ್ನೆ ಪ್ರಾಯೋಗಿಕವಾಗಿ ಮೊದಲ ಭಾನುವಾರ ಲಾಕ್‍ಡೌನ್ ಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿರುವ ಹಿನ್ನಲೆಯಲ್ಲಿ ಇನ್ನೂ ಎರಡು ತಿಂಗಳ ಕಾಲ ಮುಂದುವರೆಸಲು ಸರ್ಕಾರ ತೀರ್ಮಾನಿಸಿದೆ. ನಿನ್ನೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮನೆಯಿಂದ ಆಚೆ ಬಾರದೆ ತಮಗೆ ತಾವೇ ದಿಗ್ಬಂಧನ ಹಾಕಿಕೊಂಡು, ಕೊರೊನಾ ನಿಯಂತ್ರಿಸಲು ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಮ್ಮ ಬೆಂಬಲವಿದೆ ಎಂಬ ಸಂದೇಶ ಸಾರಿದ್ದರು. …
Read More »(ರಂಜಾನ್) ಹಬ್ಬವನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಾಡಿನ ಮುಸಲ್ಮಾನ ಬಾಂಧವರು ಇಂದು ಸರಳವಾಗಿ ಆಚರಿಸಿದರು.
ಮೂವತ್ತು ದಿನಗಳ ಉಪವಾಸ ಮತ್ತು ಪ್ರಾರ್ಥನೆ ನಂತರ ಬಂದಿರುವ ಈದ್ ಉಲ್ ಫಿತರ್ (ರಂಜಾನ್) ಹಬ್ಬವನ್ನು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ನಾಡಿನ ಮುಸಲ್ಮಾನ ಬಾಂಧವರು ಇಂದು ಸರಳವಾಗಿ ಆಚರಿಸಿದರು. ಮುಸಲ್ಮಾನ ಬಾಂಧವರು ಶ್ರದ್ಧೆ, ನಿಷ್ಠೆ, ಭಕ್ತಿಯಿಂದ ಪ್ರತಿ ವರ್ಷ ಪವಿತ್ರ ರಂಜಾನ್ ತಿಂಗಳಿನಲ್ಲಿ ಉಪವಾಸ ಆಚರಿಸಿ ಹಬ್ಬ ಮಾಡುವುದು ವಾಡಿಕೆ. ರಂಜಾನ್ ತಿಂಗಳಿನಲ್ಲಿ ಉಪವಾಸವೆಂದರೆ ಸೂರ್ಯೋದಯಕ್ಕೂ ಮುನ್ನ ಆಹಾರ ಸೇವನೆ ಮಾಡಿ ಬಳಿಕ 14 ಗಂಟೆಗೂ ಹೆಚ್ಚು ಕಾಲ ನೀರು …
Read More »ಘಟಪ್ರಭಾ ನದಿಯಲ್ಲಿ ಸೋಮವಾರ 4 ಮೊಸಳೆ ಮರಿಗಳು ಪ್ರತ್ಯಕ್ಷ………
ಬೆಳಗಾವಿ : ಜಿಲ್ಲೆಯ ಘಟಪ್ರಭಾ ನದಿಯಲ್ಲಿ ಸೋಮವಾರ 4 ಮೊಸಳೆ ಮರಿಗಳು ಪ್ರತ್ಯಕ್ಷವಾಗಿವೆ. ಇದರಿಂದ ಜನರು ಆಂತಕಗೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಮರಿ ತಾಯಿ ಹುಡುಕಾಟದಲ್ಲಿದ್ದಾರೆ. ಬೆಳಿಗ್ಗೆ ಯುವಕರು ಶಿವಗೊಂಡ ಅಂಗಡಿ ನದಿಗೆ ಈಜಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮೊಸಳೆ ಮರಿಗಳು ಪ್ರತ್ಯಕ್ಷವಾಗಿವೆ. ಬಳಿಕ 2 ಮರಿಗಳನ್ನು ಸಂರಕ್ಷಿಸುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದಿರುವ ಅರಣ್ಯ ಇಲಾಖೆ ಸಿಬ್ಬಂದಿ ಹನುಮಂತ ಹನ್ನಮಣ್ಣವರ ಮೊಸಳೆ …
Read More »ಮಹೇಶ ಕುಮಟಳ್ಳಿ ಅವರಿಗೆ ಸದ್ಯದಲ್ಲಿ ಸಚಿವ ಸ್ಥಾನ ನೀಡುವ ಆಲೋಚನೆ ಇಲ್ಲ ಮುಂದಿನ ದಿನಗಳಲ್ಲಿ ಮಂತ್ರಿ ಮಾಡುವುದಾಗಿ ಭರವಸೆ
ಅಥಣಿ: ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಸದ್ಯದಲ್ಲಿ ಸಚಿವ ಸ್ಥಾನ ನೀಡುವ ಆಲೋಚನೆ ಇಲ್ಲ ಅಂತಾ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಅಥಣಿ ತಾಲೂಕಿನ ನೀರಾವರಿ ಕಾಮಗಾರಿ ಪರಿಶೀಲನೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ಸದ್ಯದಲ್ಲಿ ಇಲ್ಲ. ನಾವು ಅಥಣಿ ತಾಲೂಕು ನೀರಾವರಿ ಅಭಿವೃದ್ದಿಗೆ ಒತ್ತು ನೀಡುತ್ತಿದ್ದೇವೆ ಅಂತಾ ಸಮಜಾಯಿಷಿ ನೀಡಿ ಜಾರಿಕೊಂಡರು. ಜಮಖಂಡಿಯ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ …
Read More »ಬ್ರೇಕಿಂಗ್ : ರಾಜ್ಯದಲ್ಲಿ ಇಂದು 69 ಮಂದಿಗೆ ಕೊರೋನಾ ಪಾಸಿಟಿವ್, 2158 ಕ್ಕೇರಿದ ಸೋಂಕಿತರ ಸಂಖ್ಯೆ..!
ಬೆಂಗಳೂರು, ಮೇ 25- ನಿನ್ನೆ ಭಾನುವಾರ ಸಂಪೂರ್ಣ ಲಾಕ್‍ಡೌನ್ ಮಾಡಿದ ಪರಿಣಾಮ ಕೊರೊನಾ ಸೋಂಕಿತರ ಪ್ರಮಾಣ ತಗ್ಗಿದೆ. ಆದರೆ, ಇದುವರೆಗೂ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ರಾಮನಗರಕ್ಕೆ ತಮಿಳುನಾಡು ನಂಜು ತಗುಲಿದ್ದು, 2 ವರ್ಷದ ಮಗುವಿಗೆ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕೋವಿಡ್-19ನಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇಂದು 69 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆಯಾಗಿದೆ.ಇಂದು ಒಂದೇ ದಿನ 26 ಮಂದಿ ರೋಗದಿಂದ ಗುಣಮುಖವಾಗುವುದರ …
Read More »ಕರ್ನಾಟಕದಿಂದ ತಮ್ಮ ರಾಜ್ಯಗಳಿಗೆ ತೆರಳಿದ 1.50 ಲಕ್ಷಕ್ಕೂ ಹೆಚ್ಚು ವಲಸಿಗರು..!
ಬೆಂಗಳೂರು, ಮೇ 25- ರಾಜ್ಯದ ನಾನಾ ಭಾಗಗಳಿಂದ ಶ್ರಮಿಕ್ ರೈಲಿನ ಮೂಲಕ ಸುಮಾರು 1.50 ಲಕ್ಷ ವಲಸಿಗರು ತಮ್ಮೂರಿಗೆ ಸಂತಸದಿಂದ ತೆರಳಿದ್ದಾರೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಹಲವು ದಿನಗಳಿಂದ ಸುಮಾರು 150 ರೈಲುಗಳು ಬಿಹಾರ, ಜಾರ್ಖಂಡ್, ಒಡಿಸ್ಸಾ, ನವದೆಹಲಿ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ಭಾಗಗಳಿಗೆ ವಲಸಿಗರನ್ನು ಸುರಕ್ಷಿತವಾಗಿ ತಲುಪಿಸಿದೆ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಅವರಿಗೆ ಕುಡಿಯುವ ನೀರಿನ ಬಾಟಲ್, ಹಣ್ಣು, …
Read More »ಒತ್ತಡಕ್ಕೆ ಮಣಿದ ಬಿಎಂಟಿಸಿ, ಪಾಸ್ ದರ ಪರಿಷ್ಕರಣೆ : ಇಲ್ಲಿದೆ ಹೊಸ ದರಗಳ ಪಟ್ಟಿ…
ಬೆಂಗಳೂರು, ಮೇ 25- ಸಾರ್ವಜನಿಕರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದೈನಂದಿನ ಪಾಸ್ ದರವನ್ನು ಪರಿಷ್ಕರಣೆ ಮಾಡಿದೆ. 70ರೂ.ಗಳ ದಿನದ ಪಾಸ್ ದರವನ್ನು 50ರೂ.ಗೆ ಇಳಿಕೆ ಮಾಡಿದೆ. ಅದೇ ರೀತಿ ಹೊಸದಾಗಿ 30ರೂ., 20ರೂ., 15ರೂ., 10ರೂ., 5ರೂ.ಗಳ ಹೊಸ ಪಾಸ್‍ಗಳನ್ನು ಬಿಡುಗಡೆ ಮಾಡಿದ್ದು, ಟಿಕೆಟ್ ಬದಲಾಗಿ ಇವುಗಳನ್ನು ನೀಡಲು ನಿರ್ಧರಿಸಿದೆ. ಈವರೆಗೆ ದಿನದ ಪಾಸ್‍ಅನ್ನು 70ರೂ.ಗೆ ನೀಡಲಾಗಿತ್ತು. ಕೊರೊನಾ ಸಾಂಕ್ರಾಮಿಕ ಭೀತಿ ಹಿನ್ನೆಲೆಯಲ್ಲಿ …
Read More »ವೆಚ್ಚಕ್ಕೆ ಬ್ರೇಕ್ ಹಾಕ್ಳು ಕೆಲ ಇಲಾಖೆಗಳನ್ನು ವಿಲೀನನಕ್ಕೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು, ಮೇ 25- ಲಾಕ್‍ಡೌನ್ ಹಿನ್ನೆಲೆ ರಾಜ್ಯದ ಬೊಕ್ಕಸ ಖಾಲಿಯಾಗಿದ್ದು, ರಾಜ್ಯ ಸರ್ಕಾರ ವೆಚ್ಚ ಕಡಿತದ ಮೊರೆ ಹೋಗಿದೆ. ಸರ್ಕಾರ ಕೆಲ ಇಲಾಖೆಗಳನ್ನು ವಿಲೀನ ಮಾಡಲು ಚಿಂತನೆ ನಡೆಸಿದೆ. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತ್ತು ಸಮಾಜ ಕಲ್ಯಾಣ ಇಲಾಖೆ, ಸಹಕಾರ ಮತ್ತು ಕೃಷಿ ಮಾರುಕಟ್ಟೆ ಇಲಾಖೆ, ಸಹಕಾರಿ ಲೆಕ್ಕ ಪರಿಶೀಲನಾ ಇಲಾಖೆ ಮತ್ತು ಲೆಕ್ಕ ಪತ್ರ ಇಲಾಖೆ ಸೇರಿದಂತೆ ಇಲಾಖೆಗಳನ್ನು ವಿಲೀನ ಮಾಡಲು …
Read More »ಬೆಳಗಾವಿ:ಇಂದು 10 ವರ್ಷದ ಬಾಲಕನಿಗೆ ಕೊರೊನಾ ಸೋಂಕು ದೃಢ
ಬೆಳಗಾವಿ: ಜಿಲ್ಲೆಯಲ್ಲಿ ಇಂದು 10 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬೆಳಗಾವಿಯಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಪೆ ನಂ- 2101 ಹತ್ತು ವರ್ಷದ ಬಾಲಕ ಮಹಾರಾಷ್ಟ್ರ ಟ್ರಾವೆಲ್ ಹಿಸ್ಟರಿ ಇದೆ. ರಾಜ್ಯದಲ್ಲಿ ಒಟ್ಟು 69 ಪ್ರಕರಣ ಕೇಸ್ ಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 2158 ಕ್ಕೆ ಏರಿಕೆಯಾಗಿದೆ
Read More »