Breaking News

Yearly Archives: 2020

ಮತ್ತೊಬ್ಬ ಯುವಕನ ಜತೆ ನಿಶ್ಚಿತಾರ್ಥವಾಗಿರುವ ಸುದ್ದಿ ತಿಳಿದು ಪ್ರೇಮಿಗಳಿಬ್ಬರು  ವಿಷ ಸೇವಿಸಿ   ಆತ್ಮಹತ್ಯೆ 

ರಾಯಚೂರು:  ಪ್ರೇಮಿಗಳಿಬ್ಬರು  ವಿಷ ಸೇವಿಸಿ   ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ  ಮಾನ್ವಿ ತಾಲೂಕಿನ  ಮಲ್ಲಟ ಗ್ರಾಮದಲ್ಲಿ  ಬುಧವಾರ  ನಡೆದಿದೆ. ಮಲ್ಲಟ ಗ್ರಾಮದ ನಿವಾಸಿಗಳಾದ ಮಹೇಶ(21)  ಅಕ್ಷತಾ(19) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.  ಹಲವು ದಿನಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮಹೇಶ ಬೆಂಗಳೂರಿನಲ್ಲಿ  ಕೆಲಸ  ಮಾಡುತ್ತಿದ್.   ಇತ್ತ ಅಕ್ಷತಾಳಿಗೆ ಪೋಷಕರು ಮತ್ತೊಬ್ಬನ  ಜತೆ ನಿಶ್ಚಿತಾರ್ಥ ಮಾಡಿದ್ದರು. ಅಕ್ಷತಾಳಿಗೆ ಮತ್ತೊಬ್ಬ ಯುವಕನ ಜತೆ ನಿಶ್ಚಿತಾರ್ಥವಾಗಿರುವ ಸುದ್ದಿ ತಿಳಿದು  ಮಹೇಶ ಸ್ವಗ್ರಾಮಕ್ಕೆ ವಾಪಸ್ …

Read More »

ಜವಾಬ್ದಾರಿಯುತ ಸ್ಥಾನದಲ್ಲಿರುವವರುಅಸಭ್ಯವಾಗಿ ನಡೆದುಕೊಳ್ಳುವುದನ್ನು ನಾವು ಖಂಡಿಸುತ್ತೇವೆ.: ಸತೀಶ್ ಜಾರಕಿಹೊಳಿ

ಗೋಕಾಕ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ಮಹಾಲಿಂಗಪುರ ಪುರಸಭೆಗೆ ಸಂಬಂಧಿಸಿದಂತೆ ನಡೆದ ಘಟನೆಯು ಒಂದು ಕೆಟ್ಟ ಸಂಪ್ರದಾಯವಾಗಿದೆ. ಅಧ್ಯಕ್ಷೆ ಆಕಾಂಕ್ಷಿಯಾಗಿರುವ ಮಹಿಳೆಯನ್ನು ಎಳೆದಾಡಿ ಬಿಜೆಪಿ ಶಾಸಕ ಸಿದ್ದು ಸವದಿ ಸೇರಿದಂತೆ ಇತರರು ಅಸಭ್ಯ ವರ್ತನೆ ತೋರಿರುವುದು ಒಂದು ಕೆಟ್ಟ ಸಂಪ್ರದಾಯಾವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.     ನಗರದ ಅವರ ಹೀಲ್ ಗಾರ್ಡನ್ ಕಛೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ …

Read More »

ಎಲ್ಲರಿಗೂ  ಮಂತ್ರಿ ಸ್ಥಾನ ಸಿಗತ್ತೆ ಎಂದು ಹೇಳೋಕೆ ಆಗಲ್ಲ :ರಮೇಶ ಜಾರಕಿಹೊಳಿ ಹೊಸ ಬಾಂಬ್

ಬೆಂಗಳೂರು: ಎಲ್ಲರಿಗೂ  ಮಂತ್ರಿ ಸ್ಥಾನ ಸಿಗತ್ತೆ ಎಂದು ಹೇಳೋಕೆ ಆಗಲ್ಲ  ಅಂತಾ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು  ನಿರ್ಧಾರ ತಗೆದುಕೊಳ್ಳುತ್ತಾರೆ. ಮಂತ್ರಿ ಸ್ಥಾನ ನೀಡುವ ಬಗ್ಗೆ ನಾವು ಮೊದಲು  ಮಾತನಾಡಿದಂತೆಯೇ ನಡೆಯಲಿದೆ. .  ಎಲ್ಲರಿಗೂ ಮಂತ್ರಿ ಸ್ಥಾನ ಸಿಗುತ್ತದೆ ಎನ್ನುವುದು  ಸುಳ್ಳು.   ನನ್ನ ಮೂಲಕ ಪ್ರಭಾವ ಬೀರಿದರೆ ಏನು ಆಗದು.  …

Read More »

ಸಚಿವನಾಗಲು ಯಾರ ಕಾಲಿಗೂ ಬೀಳುವುದಿಲ್ಲನವೆಂಬರ್ 25 ರವರೆಗೆ ಕಾದು ನೋಡಿ

ವಿಜಯಪುರ: ತಾನು ಸಚಿವನಾಗಲು ಯಾರ ಕಾಲಿಗೂ ಬೀಳುವುದಿಲ್ಲ. ಈ ದೀಪಾವಳಿ, ಸಿಹಿ ನೀಡುತ್ತದೆಯೋ, ಕಹಿ ನೀಡುತ್ತದೆಯೋ ಎಂದು ನವೆಂಬರ್ 25 ರವರೆಗೆ ಕಾದು ನೋಡಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜಕೀಯವಾಗಿ ಮತ್ತೊಂದು ಕುತೂಹಲದ ಬಾಂಬ್ ಎಸೆದಿದ್ದಾರೆ. ನಗರದಲ್ಲಿ ನಡೆದ ವಸತಿ ಯೋಜನೆ ಸಮುಚ್ಛಯ ಕಾಮಗಾರಿಗೆ ವಸತಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭೀಮಾ ನದಿ …

Read More »

ಸಚಿವ ರಮೇಶ ಜಾರಕಿಹೊಳಿ  ಕೆಲ ಶಾಸಕರು ಮಹತ್ವ ಸಭೆಸೋತವರಿಗೆ ಮಣೆ ಹಾಕದಂತೆ ಒತ್ತಡ:

ಬೆಂಗಳೂರು: ಉಪ ಚುನಾವಣೆಯ ಎರಡು ಕ್ಷೇತ್ರದಲ್ಲಿ  ಅಭ್ಯರ್ಥಿಗಳು  ಜಯಗಳಿಸುತ್ತಿದ್ದಂತೆ ಆಡಳಿತ ಬಿಜೆಪಿ ಪಕ್ಷದಲ್ಲಿ ರಾಜಕೀಯ  ಚಟುವಟಿಕೆ ಗರಿಗೆದರಿದ್ದು,   ಸಚಿವ ರಮೇಶ ಜಾರಕಿಹೊಳಿ  ಕೆಲ ಶಾಸಕರು ಮಹತ್ವ ಸಭೆ ನಡೆಸಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ಹಿನ್ನಲೆಯಲ್ಲಿ ಇಂದು  ಸಚಿವ ರಮೇಶ ಜಾರಕಿಹೊಳಿ ಅವರ ಬೆಂಗಳೂರು ನಿವಾಸದಲ್ಲಿ  ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಸಿಎಂ ರಾಜಕೀಯ  ಕಾರ್ಯದರ್ಶಿ ರೇಣುಕಾಚಾರ್ಯ, ಮುರುಗೇಶ್ ನಿರಾಣಿ,  ಬೆಳ್ಳಿ ಪ್ರಕಾಶ,  ರಾಜುಗೌಡ ನಾಯಕ, ಶಂಕರ ಪಾಟೀಲ್ ಸೇರಿದಂತೆ ಮುಂತಾದ  …

Read More »

ಪೊಲೀಸರ ವೇಷ ಧರಿಸಿ ಸುಲಿಗೆ ಮಾಡುತ್ತಿದ್ದ ನಾಲ್ವರು ಸೆರೆ

ನವದೆಹಲಿ, ನ.11- ಪೊಲೀಸರ ವೇಷ ಧರಿಸಿ ಜನರನ್ನು ಸುಲಿಗೆ ಮಾಡುತ್ತಿದ್ದ ನಾಲ್ವರು ಕುಖ್ಯಾತ ಸುಲಿಗೆಕೋರರನ್ನು ದೆಹಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಕಿ (40) , ರಾಹುಲ್ ಕುಮಾರ್ (29), ಅಲೀಕ್ ಅಬ್ರಹಾಂ (37) ಮತ್ತು ರಾಹುಲ್ (27) ಬಂಧಿತ ಸುಲಿಗೆಕೋರರು. ಹೆದ್ದಾರಿಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ವಾಹನಗಳಿಗೆ ಕಾಯುವಂತಹ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಈ ತಂಡ ರಾಷ್ಟ್ರ ರಾಜಧಾನಿ ಜನರಿಗೆ ಆತಂಕಕಾರಿಯಾಗಿ ಪರಿಣಮಿಸಿತ್ತು. ಪೊಲೀಸ್ ಅಧಿಕಾರಿಗಳು ಇಲ್ಲವೆ …

Read More »

ಯುಪಿ, ಬಂಗಾಳ ಚುನಾವಣೆ ಮೇಲೆ ಒವೈಸಿ ಕಣ್ಣು

ಹೈದರಾಬಾದ್, ನ.11- ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಗೆದ್ದು ಬೀಗಿರುವ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷ ಇತರ ರಾಜ್ಯಗಳ ಚುನಾವಣಾ ಅಖಾಡಕ್ಕಿಳಿಯಲು ತೀರ್ಮಾನಿಸಿದೆ. ಮುಂಬರುವ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಆ ಎರಡು ರಾಜ್ಯಗಳ ಹಲವು ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧಿಸಲಿದೆ ಎಂದು ಅಸಾದುದ್ದೀನ್ ಒವೈಸಿ ತಿಳಿಸಿದ್ದಾರೆ. ಬಿಜೆಪಿ ವಿರೋಧಿ ಮತಗಳನ್ನು ತಮ್ಮ ಪಕ್ಷ ಪಡೆದುಕೊಳ್ಳುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಒವೈಸಿ …

Read More »

ಮಹಿಳೆಯರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ:BSY

ಬೆಂಗಳೂರು,ನ.11-ಮಹಿಳೆಯರು ನಿರ್ಭೀತಿಯಿಂದ ಜೀವನ ಸಾಗಿಸಲು ನಮ್ಮ ಸರ್ಕಾರ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧ ಮುಂಭಾಗದಲ್ಲಿ ಇಂದು ನಿರ್ಭಯ ಯೋಜನೆಯಡಿ ಪೊಲೀಸ್ ಠಾಣೆಗಳಿಗೆ 751 ದ್ವಿಚಕ್ರ ವಾಹನಗಳನ್ನು ಹಸ್ತಾಂತರ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದರು. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮಹಿಳೆಯರಿಗೆ ಅತ್ಯಂತ ಸುರಕ್ಷಿತ ತಾಣವಾಗಿದೆ. ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ನಾವು ಹಲವು ಮುಂಜಾಗ್ರತಾ ಕ್ರಮಗಳನ್ನು …

Read More »

BIG NEWS : ಆನ್‍ಲೈನ್‍ ನ್ಯೂಸ್, ಧ್ವನಿಮುದ್ರಿಕೆಗಳು ಇನ್ನ ಮುಂದೆ ವಾರ್ತಾ ಇಲಾಖೆ ವ್ಯಾಪ್ತಿಗೆ

ನವದೆಹಲಿ, ನ.11-ಆನ್‍ಲೈನ್‍ನಲ್ಲಿ ಪ್ರಸಾರವಾಗುವ ಚಲನಚಿತ್ರಗಳು , ಧ್ವನಿಮುದ್ರಿಕೆಗಳು, ನ್ಯೂಸ್ ಮತ್ತು ಪ್ರಚಲಿತ ವಿದ್ಯಮಾನಗಳು ಇನ್ನು ಮುಂದೆ ವಾರ್ತಾ ಇಲಾಖೆ ವ್ಯಾಪ್ತಿಗೆ ಒಳಪಡಲಿವೆ. ದೇಶ-ವಿದೇಶಗಳ ಚಲನಚಿತ್ರಗಳು ಪ್ರಸಾರವಾಗುವ ಅಂತಾರಾಷ್ಟ್ರೀಯ ಖ್ಯಾತಿಯ ನೆಟ್‍ಫಿಕ್ಸ್ ಮತ್ತಿತರ ಜಾಲ ತಾಣಗಳು ಇನ್ನು ಮುಂದೆ ವಾರ್ತಾ ಇಲಾಖಾ ವ್ಯಾಪ್ತಿಗೆ ಒಳಪಡಿಸುವ ಮಹತ್ವದ ತೀರ್ಮಾನವಸರ್ಕಾರದ ಈ ತೀರ್ಮಾನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಆನ್‍ಲೈನ್‍ನಲ್ಲಿ ಅಡೆ ತಡೆ ಇಲ್ಲದೆ ಪ್ರಸಾರವಾಗುವ ಮಾಹಿತಿಗಳಿಗೆ …

Read More »

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜೀನಾಮೆ ನೀಡದೆ ತಮ್ಮ ಹಠ ಮುಂದುವರಿಸಿದ್ದಾರೆ.

ವಾಷಿಂಗ್ಟನ್: ನಾವು ಖಂಡಿತಾ ಗೆಲ್ಲುತ್ತೇವೆ, ಮುಂದಿನ ವಾರ ಫಲಿತಾಂಶ ಹೊರಬೀಳಲು ಆರಂಭವಾಗುತ್ತದೆ. ಅಮೆರಿಕವನ್ನು ಮತ್ತೆ ದೊಡ್ಡ ರಾಷ್ಟ್ರವನ್ನಾಗಿ ಮಾಡೋಣ, ಜೋ ಬೈಡೆನ್ ಅವರ ಸಿದ್ಧತೆಗಳನ್ನು ತಡೆಯುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಈಗಾಗಲೆ ಪ್ರಕಟವಾಗಿದ್ದು, ಡೆಮಾಕ್ರಟಿಕ್ ಅಭ್ಯರ್ಥಿ ಜೊ ಬೈಡನ್ ಅಮೆರಿಕಾದ ಅಧ್ಯಕ್ಷರಾಗಿ ಮುಂದುವರೆಯಲು ಸಿದ್ಧರಿರುವಾಗಲೇ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜೀನಾಮೆ ನೀಡದೆ ತಮ್ಮ ಹಠ ಮುಂದುವರಿಸಿದ್ದಾರೆ.

Read More »