Breaking News

Yearly Archives: 2020

‘ಮಹಾನಾಯಕ’ ಧಾರಾವಾಹಿಯಿಂದ ಮರೆತು ಹೋದ ಡಾ. ಬಿ.ಆರ್.ಅಂಬೇಡ್ಕರ್ ಅವರ  ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನವಾಗುತ್ತಿದೆ:ಸತೀಶ್ ಜಾರಕಿಹೊಳಿ

ಹುಕ್ಕೇರಿ : ‘ ಝೀ ವಾಹಿನಿಯಲ್ಲಿ  ಪ್ರಸಾರವಾಗುತ್ತಿರುವ ‘ಮಹಾನಾಯಕ’ ಧಾರಾವಾಹಿಯಿಂದ ಮರೆತು ಹೋದ ಡಾ. ಬಿ.ಆರ್.ಅಂಬೇಡ್ಕರ್ ಅವರ  ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನವಾಗುತ್ತಿದೆ ‘ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಅರ್ಜುನ ವಾಡ್ ಗ್ರಾಮದಲ್ಲಿ ಗುರುವಾರ ಮಹಾನಾಯಕ ಬ್ಯಾನರ್ ಉದ್ಘಾಟನೆಗೊಳಿಸಿ ಮಾತನಾಡಿದರು. ‘ ಇಡೀ ಕರ್ನಾಟಕದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಭಾವಚಿತ್ರವಿರುವ ಪೊಸ್ಟರ್ ಉದ್ಘಾಟನೆಗೊಳಿಸುವ ಪರಂಪರೆ ಮುಂದುವರೆದಿದೆ. ಇದಕ್ಕೆ ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ …

Read More »

ವಿದ್ಯುತ್ ದರ  ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು  ಆಗ್ರಹಿಸಿಪ್ರತಿಭಟನಾ ಮೆರವಣಿಗೆ

ಬೆಳಗಾವಿ: ರಾಜ್ಯ ಸರ್ಕಾರದ ವಿದ್ಯುತ್ ದರ ಏರಿಕೆ ನಿರ್ಧಾರವನ್ನು ಖಂಡಿಸಿ ಬೆಳಗಾವಿ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇಲ್ಲಿ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದರು. ಬಿಜೆಪಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಬಿಜೆಪಿ ಸರ್ಕಾರವು ವಿದ್ಯುತ್ ದರವನ್ನು ಸರಾಸರಿ 5.4 ರಂತೆ ಪ್ರತಿ ಯೂನಿಟ್ ಗೆ 40 ಪೈಸೆ ಹೆಚ್ಚಳ ಮಾಡಿದೆ. ಕೋವಿಡ್ ಸಂಕಷ್ಟದ …

Read More »

ಜಿಲ್ಲೆ ಮಾಡುವುದಾದರೆ ಮೊದಲು ಚಿಕ್ಕೋಡಿ ಜಿಲ್ಲೆ ಮಾಡಿ ಇಲ್ಲವಾದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ:ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ

ಚಿಕ್ಕೋಡಿ: ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ನೂತನವಾಗಿ ವಿಜಯನಗರ ಜಿಲ್ಲೆ ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸುತ್ತಿದ್ದಂತೆ. ವಿಜಯನಗರ ಜಿಲ್ಲೆಗೆ ಚಿಕ್ಕೋಡಿಯಲ್ಲಿ ವಿರೋಧ ವ್ಯಕ್ತವಾಗಿದೆ. ಜಿಲ್ಲೆ ಮಾಡುವುದಾದರೆ ಮೊದಲು ಚಿಕ್ಕೋಡಿ ಜಿಲ್ಲೆ ಮಾಡಿ ಇಲ್ಲವಾದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನೀಡಿದೆ. ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆ ಎನ್ನುವ ಹೆಗ್ಗಳಿಕೆ ಹೊಂದಿದಂತಹ ಜಿಲ್ಲೆ 18 ವಿಧಾನಸಭಾ, ಎರಡು …

Read More »

ರಸ್ತೆಗಳ ಅಭಿವೃದ್ಧಿಗಾಗಿ ಪಿಎಂಜಿಎಸ್‍ವಾಯ್ ಅಡಿ 21.27 ಕೋಟಿ ರೂ. ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಡೇರಹಟ್ಟಿಯಲ್ಲಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಅರಭಾವಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ವಿವಿಧ ರಸ್ತೆ ಕಾಮಗಾರಿಗಳಿಗಾಗಿ 21.27 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಮಂಗಳವಾರದಂದು ಉದಗಟ್ಟಿಯಿಂದ ನಾಗನೂರ ವ್ಹಾಯಾ ವಡೇರಹಟ್ಟಿ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು,         ಈ …

Read More »

ಲಾರಿ ಚಾಲಕನ ಅವಘಡದಿಂದಾಗಿ ಲಾರಿ, ಬೈಕ್, ಕಾರು, ನಡುವೆ ಭೀಕರ ಅಪಘಾತ

ನೆಲಮಂಗಲ: ಇಲ್ಲಿನ ಬಸ್ ನಿಲ್ದಾಣದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಕಾರು ಚಾಲಕನನ್ನು ಸುನೀಲ್ ಎಂದು ಗುರುತಿಸಲಾಗಿದೆ. ಬೈಕ್ ಸವಾರನ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಲಾರಿ ಚಾಲಕನ ಅವಘಡದಿಂದಾಗಿ ಲಾರಿ, ಬೈಕ್, ಕಾರು, ನಡುವೆ ಭೀಕರ ಅಪಘಾತ ಸಂಭವಿಸಿದೆ.ಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿಯಾಗಿ ಸರಣಿ ಅಪಘಾತವೆಸಗಿ ಚಾಲಕ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ನೆಲಮಂಗಲ ಟೌನ್ ಹಾಲ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಕನ್ನಡಿಗರ ಸ್ಟಾರ್ಟಪ್ ಆ್ಯಪ್ ಆಧಾರಿತ ಹೊಯ್ಸಳ ಕ್ಯಾಬ್ ಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು.

ಬೆಂಗಳೂರು: ಕನ್ನಡಿಗರ ಸ್ಟಾರ್ಟಪ್ ಆ್ಯಪ್ ಆಧಾರಿತ ಹೊಯ್ಸಳ ಕ್ಯಾಬ್ ಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ, ಹೊಯ್ಸಳ ಕ್ಯಾಬ್ ಕನ್ನಡಿಗರ ಸ್ಟಾರ್ಟಪ್ ಆಗಿದ್ದು, ಕನ್ನಡತಿ ಸುಧಾ ಉಮಾಶಂಕರ್ ಅವರು ಈ ಕ್ಯಾಬ್ ಸೇವೆ ಅರ್ಪಿಸಿದ್ದಾರೆ. ನಗರಗಳಲ್ಲಿದ್ದ ಕ್ಯಾಬ್ ಸೇವೆ ಇನ್ನು ರಾಜ್ಯದ ಎಲ್ಲೆಡೆ ಸೇವೆಗೆ ಆರಂಭಿಸಲಿದೆ. ಈ ಕ್ಯಾಬ್‍ಗಳು ಕಡಿಮೆ ದರದಲ್ಲಿ ಸುಭದ್ರ ಸೇವೆ ನೀಡಲಿವೆ. ಹೊಯ್ಸಳ …

Read More »

ದೇವರ ಮುಂದೆ ಅಪ್ಪ- ಅಮ್ಮ ಕುಳಿತಿರುವ ಫೋಟೋ ಹಾಕಿಭಾವುಕರಾದ ಜಗ್ಗೇಶ್

ಬೆಂಗಳೂರು: ಇತ್ತೀಚೆಗಷ್ಟೇ ತಮ್ಮ ಸಿನಿ ಜರ್ನಿಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ ನವರಸ ನಾಯಕ ಜಗ್ಗೇಶ್ ಅವರು ಇದೀಗ ತಮ್ಮ ಅಪ್ಪ- ಅಮ್ಮನ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡು ಭಾವುಕರಾಗಿದ್ದಾರೆ. ದೇವರ ಮುಂದೆ ಅಪ್ಪ- ಅಮ್ಮ ಕುಳಿತಿರುವ ಫೋಟೋ ಹಾಕಿ ಬರೆದುಕೊಂಡಿರುವ ಜಗ್ಗೇಶ್, ಹಿರಿ ಅಕ್ಕನಿಗೆ ಸಿಕ್ಕ ಕಳೆದು ಹೋಗಿದ್ದ ಅಮ್ಮ-ಅಪ್ಪನ ಜೊತೆಯಿದ್ದ ಅಪರೂಪದ ಚಿತ್ರ. ಇಬ್ಬರು ಹೀಗೆ ಒಟ್ಟಿಗೆ ಕೂತು ದಿನನಿತ್ಯ ಭಕ್ತಿಯಿಂದ ಶಿವಪೂಜೆ …

Read More »

ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯನಿಶ್ಚಿತಾರ್ಥನವ ಜೋಡಿಗೆ ಹಾರೈಸಿದ B.S.Y.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಕಾಫಿ ಡೇ ಸಿದ್ಧಾರ್ಥ್ ಹೆಗ್ಡೆ ಪುತ್ರ ಅಮರ್ಥ್ಯ ಸುಬ್ರಮಣ್ಯ ಹೆಗ್ಡೆ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆಯುತ್ತಿದ್ದು, ಕಡಿಮೆ ಜನರನ್ನು ಆಹ್ವಾನಿಸಿದ್ದರೂ ಸಂಭ್ರಮಕ್ಕೆ ಮಾತ್ರ ಕೊರತೆ ಇಲ್ಲ ಎಂಬಂತೆ ನಡೆಸಲಾಗುತ್ತಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್‍ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿದೆ. ಆಯ್ದ ಗಣ್ಯರು ಹಾಗೂ ಕುಟುಂಬಸ್ಥರು, ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿದ್ದು, ಒಟ್ಟು 250 ಜನರನ್ನು ಆಹ್ವಾನಿಸಲಾಗಿದೆ. ಈಗಾಗಲೇ …

Read More »

ಜನರ ರಕ್ತ ಹೀರುವ ಹೆದ್ದಾರಿ ಟೋಲ್‍ಗಳು, ಹಗಲು ದರೋಡೆಗೆ ಮತ್ತೊಂದು ಲೈಸೆನ್ಸ್..!

ಬೆಂಗಳೂರು, ನ.19-ಮುಂದಿನ ವರ್ಷದಿಂದ ಹೆದ್ದಾರಿಗಳ ಟೋಲ್‍ಗಳಲ್ಲಿ ಹಾದು ಹೋಗಬೇಕಾದರೆ ಫಾಸ್ಟ್ಯಾಗ್ ಕಡ್ಡಾಯ ಎಂಬ ನಿರ್ಧಾರ ವಾಹನ ಸವಾರರನ್ನು ಕೆರಳಿಸಿದ್ದು, ಎಲ್ಲೆಡೆ ವ್ಯಾಪಕ ಆಕ್ರೋಶ ಕೇಳಿಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ನಿರ್ಧಾರದ ವಿರುದ್ಧ ವಾಗ್ದಾಳಿಗಳು ನಡೆಯುತ್ತಿವೆ. ಸರ್ಕಾರ ಸರಿಯಾದ ಸೌಲಭ್ಯ ನೀಡದೆ, ಬದಲಿ ರಸ್ತೆ ನಿರ್ಮಿಸದೆ ಜನರನ್ನು ಸುಲಿಗೆ ಮಾಡುವಂತಹ ಹುಚ್ಚು ನಿರ್ಧಾರಗಳನ್ನು ಪ್ರಕಟಿಸಿರುವುದು ಪ್ರಶ್ನಾರ್ಹವಾಗಿದೆ. ಜನವರಿ 1ರಿಂದ ಟೋಲ್ ಇರುವ ಹೆದ್ದಾರಿಗಳಲ್ಲಿ ಸಂಚರಿಸಬೇಕಾದರೆ ಫಾಸ್ಟ್ಯಾಗ್ ಕಡ್ಡಾಯ. ಫಾಸ್ಟ್ಯಾಗ್ …

Read More »

ಯಡಿಯೂರಪ್ಪ ಮತ್ತು ದೆಹಲಿ ನಾಯಕರ ನಡುವಿನ ಸಂಬಂಧ ಅಷ್ಟೇಕಷ್ಟೇ……..?

ಬೆಂಗಳೂರು,ನ.19- ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರ ಬಿಜೆಪಿ ವರಿಷ್ಠರ ನಡುವೆ ಸಂಬಂಧ ಹಳಸಿದೆಯೇ? ಇತ್ತೀಚಿಗೆ ಪಕ್ಷ ಮತ್ತು ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ದೆಹಲಿ ನಾಯಕರು ಮತ್ತು ಬಿಎಸ್‍ವೈ ಅವರ ನಡುವಿನ ಸಂಬಂಧ ಹಾವು-ಮುಂಗೂಸಿ ಎಂಬಂತಿದೆ. ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರನ್ನು ಕೇವಲ 15 ನಿಮಿಷದಲ್ಲಿ ಭೇಟಿಯಾಗಿ ಹಿಂತಿರುಗಿರುವುದು. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಲು ಬಿಎಸ್‍ವೈ ಉತ್ಸುಕತೆ …

Read More »