Breaking News

Monthly Archives: ನವೆಂಬರ್ 2020

ಯತ್ನಾಳ್‍ಗೆ ತಲೆ ಸರಿಯಿಲ್ಲ ನಾವೇ ನಿಮಾನ್ಸ್ ಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ:ವಾಟಾಳ್ ನಾಗರಾಜ್

ಕೊಪ್ಪಳ: ಯತ್ನಾಳ್‍ಗೆ ತಲೆ ಸರಿಯಿಲ್ಲ ನಾವೇ ನಿಮಾನ್ಸ್ ಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು. ರೋಲ್‍ಕಾಲ್ ಕನ್ನಡಪರ ಸಂಘಟನೆಗಳ ಬಂದ್‍ಗೆ ಕಿವಿಗೊಡಬೇಕಿಲ್ಲ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್‍ಗೆ ತಲೆ ಸರಿಯಿಲ್ಲ, ನಾವೇ ನಿಮಾನ್ಸ್ ಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ. ಈ ಹಿಂದೆ ಯಡಿಯೂರಪ್ಪ ಅವರನ್ನೇ ಬೈದಂತವರು, ಅವರ ತಂದೆ ತಾಯಿಗೂ ಬೈಯೋದಿಲ್ಲ ಎಂದು …

Read More »

ಅರಭಾವಿ ಕ್ಷೇತ್ರದ ಯುವ ಜನಾಂಗಕ್ಕೆ ಹೊಸ ಚೈತನ್ಯ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಜಿ.ಟಿ.ಟಿ. ಸಂಸ್ಥೆ ಸಹಕಾರಿ

ಅರಬಾವಿ –  ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ಗಳು ಉದ್ಯೋಗ ತರಬೇತಿ ನೀಡುವ ಮೂಲಕ ಯುವಜನಾಂಗಕ್ಕೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ.ಅಶ್ವಥ್ ನಾರಾಯಣ ಸಿ.ಎನ್‌. ಅವರು ಹೇಳಿದರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ ಅರಭಾವಿಯಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿ.ಟಿ.ಟಿ.ಸಿ) …

Read More »

ಉಮೇಶ ಕತ್ತಿ ಅವರು ಸಚಿವರಾಗಬೇಕು:ಮಹಾಂತೇಶ ಕವಟಗಿಮಠ

ಬೆಳಗಾವಿ : ಬೆಳಗಾವಿ ಬಿಜೆಪಿ ಹಿರಿಯ ನಾಯಕ, 8 ಬಾರಿ ಶಾಸಕರಾದ ಉಮೇಶ ಕತ್ತಿ ಅವರು ಸಚಿವರಾಗಬೇಕು ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅಭಿಪ್ರಾಯ ವ್ಯಕ್ತಪಡಿಸಿದರು. ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಪಾಂಗೀರೆ ಗ್ರಾಮದಲ್ಲಿ ಸೋಮವಾರ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರರಚನೆ ಇದು ಸಂಪೂರ್ಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಹಿರಿಯ ಶಾಸಕ ಉಮೇಶ …

Read More »

ಅಸ್ವಚ್ಛತೆಯಿಂದ ಕುಡಿರುವ ಕೊಣ್ಣೂರು ಬಸ್ ನಿಲ್ದಾಣ

ಹುಬ್ಬಳ್ಳಿ : ನರಗುಂದ ತಾಲೂಕಿನ  ಕೋಣ್ಣೂರು ಗ್ರಾಮದ ಬಸ್ ನಿಲ್ದಾಣವು ಅಸ್ವಚ್ಛತೆಯಿಂದ ಕೊಡಿದ್ದು, ಇಲ್ಲಿ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರು ದುರ್ವಾಸನೆಯಿಂದ ಕಂಗಾಲಾಗಿದ್ದಾರೆ. ಕೊಣ್ಣೂರು ಗ್ರಾಮ ದೊಡ್ಡ ಗ್ರಾಮವಾಗಿದ್ದು ಇದು ಸುತ್ತಮುತ್ತಲಿನ ಗ್ರಾಮಗಳಿಗೆ ಕೇಂದ್ರ ಬಿಂದುವಾಗಿದೆ. ಇಲ್ಲಿಂದ ದಿನನಿತ್ಯ ಬೇರೆ ಬೇರೆ ಗ್ರಾಮಗಳಿಗೆ  ಪ್ರಯಾಣಿಕರು ತೆರಳುತ್ತಾರೆ ಆದರೆ ಇಲ್ಲಿಯ ಬಸ್ ನಿಲ್ದಾಣದಲ್ಲಿ ಶೌಚಾಲಯವಿದ್ದರು ಅವು ಅಸ್ವಚ್ಛತೆಯಿಂದ ಕೊಡಿ ಗಬ್ಬುನಾರುತ್ತಿವೆ. ಕೊರೊನಾ ಸೋಂಕಿನಿಂದ ಭಯಗೊಂಡ ಜನರು ಮತ್ತೆ ಅಸ್ವಚ್ಛತೆಯಿಂದ ರೋಗ ತಗುಲುವು ಭಯದಲ್ಲಿಯೇ …

Read More »

ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಳನ್ನು ಮಂಜೂರಾತಿ ಪಡೆದು ರೈತರಿಗೆ ನೀರಾವರಿ ಸೌಲಭ್:ಮಹಾಂತೇಶ ಕವಟಗಿಮಠ

ಚಿಕ್ಕೋಡಿ : ಕೃಷ್ಣಾ ನದಿಯ ಲಕ್ಷಾಂತರ ಕ್ಯೂಸೆಕ್ ಹರಿದು ಹೋಗುವ ನೀರನ್ನು ಬಳಕೆ ಮಾಡಿಕೊಂಡು ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಳನ್ನು ಮಂಜೂರಾತಿ ಪಡೆದು ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ರಾಜ್ಯ ಬಿಜೆಪಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು. ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಪಾಂಗೀರೆ ಗ್ರಾಮದಲ್ಲಿ ಸೋಮವಾರ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ …

Read More »

ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುವುದು ಖಚಿತ

ಬೆಂಗಳೂರು,ನ.24- ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುವುದು ಖಚಿತವಾಗಿದ್ದು, ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ ಎದುರಾಗಿದೆ. ಈ ತಿಂಗಳಾಂತ್ಯಕ್ಕೆ ಕೇಂದ್ರ ಚುನಾವಣಾ ಆಯೋಗ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದೆ. ಇದರ ಜೊತೆಗೆ ರಾಜ್ಯ ಚುನಾವಣಾ ಆಯೋಗ ಗ್ರಾಮಪಂಚಯತ್ ಚುನಾವಣೆಗೆ ಮೂಹೂರ್ತ ನಿಗಧಿ ಮಾಡುವುದು ಖಚಿತವಾಗಿದೆ. ಒಂದು ವೇಳೆ ಚುನಾವಣೆ ಘೋಷಣೆಯಾದರೆ, ಅಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದ್ದು, …

Read More »

ಶಿವಸೇನೆ ಶಾಸಕನ ಮನೆ ಮೇಲೆ ಇಡಿ ಅಧಿಕಾರಿಗಳ ದಾಳಿ

ನವದೆಹಲಿ, ನ.24- ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಶಿವಸೇನೆ ಶಾಸಕರೊಬ್ಬರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಅವರ ವಿರುದ್ಧ ಅಕ್ರಮ ವಗಾರ್ವಣೆ ನಿರ್ಬಂಧಕ ಕಾಯ್ದೆಯನ್ವಯ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಸರ್ನಾಯಕ್ ಅವರಿಗೆ ಸೇರಿದ ಕಟ್ಟಡಗಳು , ವಾಣಿಜ್ಯ ಉದ್ಯಮಗಳು, ಬಿಲ್ಡರ್‍ಗಳು, ಅವರೊಂದಿಗೆ ಸಂಪರ್ಕವಿರಿಸಿಕೊಂಡಿರುವ ಪ್ರಮುಖರು ಹಾಗೂ ಕೆಲ ರಾಜಕೀಯ ಮುಖಂಡರುಗಳ ನಿವಾಸಗಳ ಮೇಲೂ ಇಡಿ ಅಧಿಕಾರಿಗಳು …

Read More »

ವರ ನಟ ಡಾ.ರಾಜ್‍ಕುಮಾರ್ ಕುರಿತ 209 ಪಂಚಪದಿ ಕೃತಿ ಲೋಕಾರ್ಪಣೆ

ಬೆಂಗಳೂರು, ನ.22- ವರನಟ ಡಾ.ರಾಜ್‍ಕುಮಾರ್‍ರವರ ಚಿತ್ರ ಜೀವನಕ್ಕೆ ಸಂಬಂಸಿದಂತೆ, ಅವರು ನಟಿಸಿರುವ ಮೊದಲನೇ ಚಿತ್ರ ಬೇಡರ ಕಣ್ಣಪ್ಪದಿಂದ ಹಿಡಿದು ಕೊನೆಯ ಚಿತ್ರ ಶಬ್ದವೇದಿವರೆಗಿನ 209 ಚಲನಚಿತ್ರಗಳಿಗೆ ಸಂಬಂಸಿದ 209 ಪಂಚಪದಿ ಕೃತಿ ಲೋಕಾರ್ಪಣೆಗೊಂಡಿದೆ. ಹಾಲುವಾಗಿಲು ಮಂಜುನಾಥ್ ವಿರಚಿತ ರಾಜ್ ಕುರಿತ 209 ಪಂಚಪದಿ ಕೃತಿಯನ್ನು ರಾಜ್ ಕುಟುಂಬ ವರ್ಗದವರು ಸೇರಿದಂತೆ ನೂರು ಮಹನೀಯರು, 100 ಸ್ಥಳಗಳಲ್ಲಿ ಏಕ ಕಾಲಕ್ಕೆ ಲೋಕಾರ್ಪಣೆ ಮಾಡಿದರು. ವಿಶ್ವದ ಯಾವುದೇ ಕಲಾವಿದನ ಬಗ್ಗೆ ಇದುವರೆಗೂ ಬರೆಯಲಾಗದಂತಹ …

Read More »

ಕೊರೊನಾ ಪರೀಕ್ಷೆಗೆ 400 ರೂ. ದರ ನಿಗದಿ ಪಡಿಸಲು ಸುಪ್ರೀಂ ಸೂಚನೆ

ನವದೆಹಲಿ,ನ.24- ದೇಶಾದ್ಯಂತ ಕೊರೊನಾ ಪರೀಕ್ಷೆಗಾಗಿ ಕೇವಲ 400 ರೂ. ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಅಂಗೀಕರಿಸಿದ್ದು, ಕೇಂದ್ರ ಆರೋಗ್ಯ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ. ವಕೀಲ ಅಜಯ್ ಅಗರ್‍ವಾಲ್‍ಎಂಬುವರು ಸುಪ್ರೀಂಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ದೇಶಾದ್ಯಂತ ಕೊರೊನಾ ಪರೀಕ್ಷೆಗಾಗಿ ಏಕರೂಪದ ಕನಿಷ್ಟ ದರವನ್ನು ನಿಗದಿಮಾಡಬೇಕೆಂದು ಮನವಿ ಮಾಡಿದ್ದಾರೆ. ಅರ್ಜಿ ವಿಚಾರಣೆಗೆ ಅಂಗೀಕರಿಸುವುದಾಗಿ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಹ್ಮಣ್ಯ …

Read More »

COVID ಲಸಿಕೆ: ಸರಕಾರಕ್ಕೆ 250 ರೂ, ಖಾಸಗಿಗೆ 1000 ರೂ.ಗೆ ಮಾರಾಟ: ಸೆರಂ ಇನ್ಸ್ಟಿಟ್ಯೂಟ್ Nov, 24 2020

ನವದೆಹಲಿ: ಮಾರಕ ಕೊರೋನಾ ವೈರಸ್ ಲಸಿಕೆ ಸರಬರಾಜು ಕುರಿತಂತೆ ಭಾರತಕ್ಕೇ ತಮ್ಮ ಮೊದಲ ಆದ್ಯತೆ ಎಂದು ಸೆರಂ ಸಂಸ್ಥೆಯ ಮುಖ್ಯಸ್ಥ ಅದಾರ್ ಪೂನಾವಾಲ ಭಾರತಕ್ಕೆ ಲಸಿಕೆ ಪೂರೈಕೆ ಕುರಿತು ಖಾಸಗಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಸೆರಂ ಸಂಸ್ಥೆಯ ಮುಖ್ಯಸ್ಥ ಅದಾರ್ ಪೂನಾವಾಲ, ಬ್ರಿಟನ್ ಮೂಲದ ಆಕ್ಸ್‍ಫರ್ಡ್ ಯುನಿವರ್ಸಿಟಿ ಸಹಭಾಗಿತ್ವದಲ್ಲಿ ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್-19 ‘ಕೋವಿಶೀಲ್ಡ್’ ಲಸಿಕೆಯು ಭರವಸೆದಾಯಕ ಫಲಿತಾಂಶ ನೀಡಿರುವುದಾಗಿ ಪ್ರಕಟಿಸಲಾಗಿದ್ದು, …

Read More »