ಬೆಂಗಳೂರು: ರಾಜ್ಯ ಸರ್ಕಾರ ಭಾರತ ಕ್ರಿಕೆಟ್ ತಂಡದ ಆಟಗಾರ, ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್‍ಗೆ ಏಕಲವ್ಯ ಪ್ರಶಸ್ತಿಯನ್ನು ನೀಡಿದ್ದು, ಇದಕ್ಕೆ ಕೆ.ಎಲ್.ರಾಹುಲ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಕ್ರಿಕೆಟ್‍ನಲ್ಲಿ ಅವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿದೆ. ಇದಕ್ಕೆ ಕೆ.ಎಲ್.ರಾಹುಲ್ ಭಾವನಾತ್ಮಕ ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. ಪ್ರಶಸ್ತಿ ಕುರಿತು ಟ್ವೀಟ್ ಮಾಡಿರುವ ಅವರು, ನನಗೆ ಏಕಲವ್ಯ ಪ್ರಶಸ್ತಿ ಕೊಡಮಾಡಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು. ಕೋಚ್, ತಂಡದ …
Read More »Daily Archives: ನವೆಂಬರ್ 3, 2020
ಕಾರಿನಲ್ಲಿ ಒಬ್ಬರೇ ಇದ್ದಾಗ ಮಾಸ್ಕ್ ಧರಿಸಬೇಕಿಲ್ಲ
ಬೆಂಗಳೂರು: ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವಾಗ ಮಾಸ್ಕ್ ಧರಿಸಬೇಕು ಎಂಬ ಆದೇಶವನ್ನು ಬಿಬಿಎಂಪಿ ವಾಪಸ್ ಪಡೆದಿದೆ. ಈ ಹಿಂದೆ ಕಿಟಿಕಿ ಮುಚ್ಚಿದ ಕಾರಿನಲ್ಲಿ ಒಬ್ಬರೆ ಪ್ರಯಾಣಿಸುತ್ತಿದ್ದಾಗ ಮಾಸ್ಕ್ ಧರಿಸಬೇಕು ಎಂದು ಬಿಬಿಎಂಪಿ ಆದೇಶ ಪ್ರಕಟಿಸಿತ್ತು. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.ಸಾರ್ವಜನಿಕರ ಆಕ್ರೋಶದ ನಂತರ ತಜ್ಞರ ಸಲಹೆ ಕೋರಿ ಆರೋಗ್ಯ ಇಲಾಖೆಗೆ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದರು. ತಜ್ಞರ ಸಲಹೆಯಂತೆ ಕಾರಿನಲ್ಲಿ ಮುಚ್ಚಲ್ಪಟ್ಟ ಕಿಟಕಿಯೊಂದಿಗೆ …
Read More »ರಾಜ್ಯದಲ್ಲಿ ಬಹುತೇಕ ಜಲಾಶಯಗಳು ಭರ್ತಿ
ಬೆಂಗಳೂರು,ನ.2- ಈ ಬಾರಿ ಮುಂಗಾರು ಬೆಳೆ ವಾಡಿಕೆಗಿಂತ ಹೆಚ್ಚಾದ ಪರಿಣಾಮ ರಾಜ್ಯದ ಬಹುತೇಕ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದ್ದಲ್ಲದೆ ನೆರೆಯ ರಾಜ್ಯಗಳಿಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ನೀರಿನ ಹರಿಸಲಾಗಿದೆ. ಕೃಷ್ಣ ಕೊಳ್ಳದ ಜಲಾಶಯಗಳು ಭರ್ತಿ ಯಾಗಿದ್ದು, ನೆರೆಯ ಆಂಧ್ರಪ್ರದೇಶಕ್ಕೆ ಬಿಡಬೇಕಾದ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಬಿಡಲಾಗಿದೆ. ಅದೇ ರೀತಿ ಕಾವೇರಿ ಕೊಳ್ಳದಿಂದಲೂ ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನೇ ಬಿಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಾವೇರಿ ಜಲಾನಯನ ಭಾಗದಿಂದ …
Read More »ಪ್ರಿಯಾಂಕಾ ರಾಧಾಕೃಷ್ಣನ್ (41) ನ್ಯೂಜಿಲೆಂಡ್‍ನ ಭಾರತೀಯ ಮೂಲದ ಪ್ರಥಮ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
ಮೆಲ್ಬೋರ್ನ್, ನ.2- ಪ್ರಿಯಾಂಕಾ ರಾಧಾಕೃಷ್ಣನ್ (41) ನ್ಯೂಜಿಲೆಂಡ್‍ನ ಭಾರತೀಯ ಮೂಲದ ಪ್ರಥಮ ಸಚಿವೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಸ್ಸಿಂಡಾ ಅಡ್ರ್ರೆನ್ ಅವರು ತಮ್ಮ ಸಂಪುಟಕ್ಕೆ ಐವರು ಸಚಿವರನ್ನು ಸೇರ್ಪಡೆ ಮಾಡಿಕೊಂಡಿದ್ದು , ಇವರಲ್ಲಿ ಪ್ರಿಯಾಂಕಾ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.ಪ್ರಿಯಾಂಕಾ ಭಾರತದಲ್ಲಿ ಜನಿಸಿ ನಂತರ ಸಿಂಗಾಪೂರ್‍ನಲ್ಲಿ ಶಿಕ್ಷಣ ಪಡೆದರು. ತರುವಾಯ ನ್ಯೂಜಿಲೆಂಡ್‍ನಲ್ಲಿ ಕಾನೂನು ಶಿಕ್ಷಣದಲ್ಲಿ ಉನ್ನತ ಪದವಿ ಪಡೆದರು. ಶೋಷಿತ ಮಹಿಳೆಯರು, ದುರ್ಬಲರು, ವಲಸಿಗರು, ಮೊದಲಾದ ಸೂಕ್ಷ್ಮ ವರ್ಗಗಳ ಪರ …
Read More »ಈಗಾಗಲೇ 10 ತಿಂಗಳಿನಿಂದ ಮಕ್ಕಳಿಗೆ ಶಾಲೆ ಇಲ್ಲದೇ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ
ಬೆಂಗಳೂರು, – ಶಾಲಾ ಕಾಲೇಜುಗಳ ಆರಂಭದ ಬಗ್ಗೆ ಮೂರು ದಿನಗಳ ಕಾಲ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಲಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್‍ರವರು ವಾರಾಂತ್ಯದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ನವೆಂಬರ್ 17ರಂದು ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ಈಗಾಗಲೇ ನಿರ್ಧರಿಸಲಾಗಿದೆ. ಶಾಲೆಗಳನ್ನು ಪ್ರಾರಂಭಿಸುವ ಸಂಬಂಧ ಇಂದು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ಕರೆಯಲಾಗಿತ್ತು. ತಾಂತ್ರಿಕ ಕಾರಣಗಳಿಂದ ಸಭೆ ರದ್ದಾಗಿದ್ದು, ಇದೇ ನಾಲ್ಕರಿಂದ ಸತತ …
Read More »ಬಿಹಾರದಲ್ಲಿ ಎರಡನೇ ಹಂತದ ಮತದಾನ,ಕೊರೊನಾ ಸೋಂಕಿತರು ಹಕ್ಕು ಚಲಾಯಿಸಬಹುದು.
ನವದೆಹಲಿ : ಬಿಹಾರ ವಿಧಾನಸಭೆ ಚುನಾವಣೆ ನಿರ್ಣಾಯಕ ಘಟ್ಟ ತಲುಪಿದ್ದು ಇಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ದೇಶದ 10 ರಾಜ್ಯಗಳ 54 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಆರಂಭಗೊಂಡಿದ್ದು, ಮತದಾರರು ಮತಗಟ್ಟೆಯತ್ತ ಆಗಮಿಸುತ್ತಿದ್ದಾರೆ. ಬಿಹಾರದ 17 ಜಿಲ್ಲೆಯ 94 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಬಿಹಾರದಲ್ಲಿ ಮುಂದಿನ ಸರ್ಕಾರ ಯಾರದ್ದು ಅನ್ನೋದನ್ನ ಬಹುತೇಕ ಈ ಹಂತ ನಿರ್ಧರಿಸಲಿದ್ದು 2.86 ಕೋಟಿ ಮತದಾರರು 1463 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಬೆಳಗ್ಗೆ …
Read More »ಸಿಎಂ ಅಸಹಾಯಕ ಸ್ಥಿತಿಗೆ ತಂದ ಶಕ್ತಿ ಹೆಸರನ್ನು ಸಮಯ ಬಂದಾಗ ತಿಳಿಸುತ್ತೇನೆ: ಶಾಸಕ ಶಿವಲಿಂಗೇಗೌಡ
ಹಾಸನ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಹಾಯಕ ಸ್ಥಿತಿ ತಲುಪಿದ್ದು, ಅವರನ್ನು ಈ ಸ್ಥಿತಿಗೆ ತಂದ ಶಕ್ತಿ ಹೆಸರನ್ನು ಸಮಯ ಬಂದಾಗ ತಿಳಿಸುತ್ತೇನೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ. ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಬಳಿಕ ಮಾತನಾಡಿದ ಅವರು, ಅರಸೀಕೆರೆ ನಗರದ ಅಭಿವೃದ್ಧಿ ಕುಲಗೆಡಿಸಲು ಮಾಡಿದ ಅನೈತಿಕ ಮೀಸಲಾತಿಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದೆ. ಅವರು ರಾಜಕೀಯದ ಒತ್ತಡದಿಂದ ಇದೆಲ್ಲ ಆಗುತ್ತಿದೆ ಎಂದು ಅಸಹಾಯಕತೆ ತೋಡಿಕೊಂಡರು. ಅವರನ್ನು ಅಸಹಾಯಕ ಸ್ಥಿತಿಗೆ …
Read More »ಗಾಂಜಾ ಮತ್ತಿನಲ್ಲಿ ಅಪ್ರಾಪ್ತ ಬಾಲಕ ಚಾಕುವಿನಿಂದ ತನ್ನ ಚಿಕ್ಕಪ್ಪನನ್ನೇ ಇರಿದು ಕೊಲೆ ..
ಕೋಲಾರ: ಗಾಂಜಾ ಮತ್ತಿನಲ್ಲಿ ಅಪ್ರಾಪ್ತ ಬಾಲಕ ಚಾಕುವಿನಿಂದ ತನ್ನ ಚಿಕ್ಕಪ್ಪನನ್ನೇ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಜಿಲ್ಲೆಯ ಮಾಲೂರು ತಾಲೂಕಿನ ಬೆನ್ನಘಟ್ಟ ಗ್ರಾಮದಲ್ಲಿ ಘಟನೆ ನಡೆದಿದ್ದು, ತಮಿಳುನಾಡು ಗಡಿಯಲ್ಲಿ ಹೆಚ್ಚು ಸಿಗುವ ಗಾಂಜಾವನ್ನ ಅಪ್ಪ-ಮಗ ಹೊಡೆದಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದು, ಕುಡಿದ ಅಮಲಿನಲ್ಲಿ ಅಪ್ರಾಪ್ತ ಚಿಕ್ಕಪ್ಪ ವಿಜಯ್ ಕುಮಾರ್ ನನ್ನೇ ಕೊಲೆ ಮಾಡಿದ್ದಾನೆ.
Read More »ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು, ಪತ್ನಿ ಆತ್ಮಹತ್ಯೆ
ಚಿಕ್ಕಮಗಳೂರು: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು, ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರೆ, ಪತಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವಿನಿಂದ ಪಾರಾದ ಘಟನೆ ನಗರದ ಕೆಂಪನಹಳ್ಳಿಯಲ್ಲಿ ನಡೆದಿದೆ. ಮೃತಳನ್ನು 23 ವರ್ಷದ ರಂಜಿತಾ ಎಂದು ಗುರುತಿಸಲಾಗಿದ್ದು, ವಿಷ ಸೇವಿಸಿದ್ದ ಪತಿ ಅರುಣ್ ಸಾವಿನಿಂದ ಪಾರಾಗಿದ್ದಾನೆ. ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ಹೊಗರೆಹಳ್ಳಿಯ ರಂಜಿತಾಳನ್ನು ಮೂರು ವರ್ಷದ ಹಿಂದೆ ಚಿಕ್ಕಮಗಳೂರು ನಗರದ ಅರುಣ್ ವಿವಾಹವಾಗಿದ್ದ. ಮದುವೆ ಮುಂಚೆಯಿಂದಲೂ ಅರುಣ್ ಪರ ಸ್ತ್ರೀಯೊಂದಿಗೆ …
Read More »ಆರ್.ಆರ್.ನಗರ, ಶಿರಾ ಉಪ ಕದನಗಳಿಗೆ ಇವತ್ತು ಮತದಾನ, ಕೊರೊನಾ ಸೋಂಕಿತರು ಮತದಾನ ಮಾಡಬಹುದಾಗಿದೆ.
ಬೆಂಗಳೂರು: ಪ್ರತಿಷ್ಠೆಯ, ಜಿದ್ದಾಜಿದ್ದಿನ ಕ್ಷೇತ್ರ ಎನಿಸಿಕೊಂಡಿರುವ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣಾ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಎರಡೂ ಕ್ಷೇತ್ರಗಳಲ್ಲಿ ಮತದಾನ ಶುರು ಆಗಿದೆ. ಕೊರೊನಾ ಹೊತ್ತಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಉಪ ಚುನಾವಣೆ ಇದಾಗಿದೆ. ಕೊರೊನಾಗೆ ಆತಂಕಗೊಳ್ಳದೇ ಮತಗಟ್ಟೆಗೆ ಬಂದು ನಿಮ್ಮ ಹಕ್ಕು ಚಲಾಯಿಸಿ ಎಂದು ಚುನಾವಣಾ ಆಯೋಗ ಮನವಿ ಮಾಡಿದೆ. ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ …
Read More »