Breaking News

Monthly Archives: ಅಕ್ಟೋಬರ್ 2020

ಶಾಲೆಗಳು ನವೆಂಬರ್​ 2ರಿಂದ ರೀ ಓಪನ್​​

ಆಂಧ್ರಪ್ರದೇಶ : ಮಹಾಮಾರಿ ಕೊರೊನಾ ವೈರಸ್​​ನಿಂದಾಗಿ ಬಂದ್​ ಆಗಿದ್ದ ಶಾಲೆಗಳು ಇದೀಗ ಆಂಧ್ರಪ್ರದೇಶದಲ್ಲಿ ನವೆಂಬರ್​ 2ರಿಂದ ರೀ ಓಪನ್​​ ಆಗಲಿದ್ದು, ಅದಕ್ಕಾಗಿ ಮಾರ್ಗಸೂಚಿ ರಿಲೀಸ್​ ಮಾಡಲಾಗಿದೆ. ಇದೇ ವಿಚಾರವಾಗಿ ವಿಡಿಯೋ ಕಾನ್ಫರೆನ್ಸ್​​ನಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ವೈಎಸ್​ ಜಗನ್​ಮೋಹನ್​​ ರೆಡ್ಡಿ, ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯಿಂದ 148 ದಿನಗಳ ಶೈಕ್ಷಣಿಕ ವರ್ಷ ನಡೆಸಲು ನಿರ್ಧರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಎರಡು ದಿನಗಳಿಗೊಮ್ಮೆ ಕ್ಲಾಸ್​ ನಡೆಸಲು ನಿರ್ಧಾರ ಮಾಡಲಾಗಿದೆ. ಅದರಂತೆ 1,3,5,7,9 …

Read More »

ಕಬ್ಬಿಗೆ ಯೋಗ್ಯ ದರ ನೀಡುತ್ತಿಲ್ಲ ಎಂದು ರೈತರ ಆಕ್ರೋಶ

ಅಥಣಿ: ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸಿದ ಕಬ್ಬಿಗೆ 14 ದಿನದಲ್ಲಿ ರೈತನಿಗೆ ಬಿಲ್ ಬಿಡುಗಡೆ ಮಾಡಬೇಕೆಂದು ಕಾನೂನು ಇದ್ದರೂ ಸಕ್ಕರೆ ಕಾರ್ಖಾನೆ ಮಾಲೀಕರು ಯಾರು ಇದನ್ನು ಪಾಲಿಸುತ್ತಿಲ್ಲ, ಯಾವ ಸಕ್ಕರೆ ಕಾರ್ಖಾನೆ ಪಾಲಿಸಿಕೊಂಡು ಬಂದಿದೆ ಎಂದು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಥಣಿ ತಾಲೂಕು ಘಟಕದ ಅಧ್ಯಕ್ಷ ಮಾಹದೇವ ಮಡಿವಾಳ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಕಬ್ಬಿಗೆ ಯೋಗ್ಯ ದರ ನೀಡುತ್ತಿಲ್ಲ …

Read More »

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗರಂ ಆಗಿರುವ ಮೇಯರ್​ ತಸ್ನೀಂ ಬಾನು

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗರಂ ಆಗಿರುವ ಮೇಯರ್​ ತಸ್ನೀಂ ಬಾನು, ರೋಹಿಣಿ ಅವರು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆಂದು ಆರೋಪಿಸಿ, ಶಿಷ್ಟಾಚಾರ ಪಾಲನೆಯ ಪಾಠ ಮಾಡಿದ್ದಾರೆ. ದಸರಾ ಉದ್ಘಾಟನೆಗೆ ಮುಖ್ಯಮಂತ್ರಿಯವರಿಗೆ ಸ್ವಾಗತ ನೀಡುವಾಗ ಮೈಸೂರಿನ ಪ್ರಥಮ ಪ್ರಜೆಗೂ ಅವಕಾಶ ನೀಡಬೇಕು. ಆದರೆ, ಮೇಯರ್ ಅವರನ್ನು ಒಳಗೆ ಬಿಡದಂತೆ ಜಿಲ್ಲಾಧಿಕಾರಿ, ಪೋಲೀಸರಿಗೆ ಹೇಳುತ್ತಾರೆ. ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪಕ್ಕದಲ್ಲಿ ನಮ್ಮ ಆಸನ ಇಡಬೇಕು. ಆದರೆ, ಕೊನೆಯಲ್ಲಿ ನಮಗೆ ನೀಡುತ್ತೀರಿ …

Read More »

ನಮ್ಮನ್ನ ಡ್ರಗ್ಸ್​ ವಿಚಾರವಾಗಿ ಸಿ ಸಿ ಬಿ ಕರೆದಿಲ್ಲ ಸೌಂದರ್ಯ‌ ಜಗದೀಶ್ ಪತ್ನಿ ರೇಖಾ ಸ್ಪೆಷನೆ

ಬೆಂಗಳೂರು: ನಮ್ಮನ್ನ ಡ್ರಗ್ಸ್​ ವಿಚಾರವಾಗಿ ಕರೆದಿಲ್ಲ ಅಂತಾ ನಿರ್ಮಾಪಕ ಸೌಂದರ್ಯ‌ ಜಗದೀಶ್ ಪತ್ನಿ ರೇಖಾ ಹೇಳಿದ್ದಾರೆ. ಸ್ಯಾಂಡಲ್​ವುಡ್​ ಡ್ರಗ್ಸ್​ ಲಿಂಕ್​ ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಸೌಂದರ್ಯ ಜಗದೀಶ್ ದಂಪತಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು ಎನ್ನಲಾಗಿತ್ತು. ಅದರಂತೆ ಇಂದು ಸಿಸಿಬಿ ಅಧಿಕಾರಿಗಳ ವಿಚಾರಣೆಗೆ ಸೌಂದರ್ಯ ದಂಪತಿ ವಿಚಾರಣೆಗೆ ಹಾಜರಾಗಿ ವಾಪಸ್ ಆಗಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿರುವ ಸೌಂದರ್ಯ ಜದಗೀಶ್ ದಂಪತಿ.. ನಮ್ಮನ್ನ ಡ್ರಗ್ಸ್ ವಿಚಾರವಾಗಿ ಕರೆದಿಲ್ಲ. …

Read More »

ಕಾಂಗ್ರೆಸ್ ಬಿಟ್ಟು ಬಿ ಜೆ ಪಿ ಗೆ ಸೇರಿದ ಮಾಜಿ ಸಚಿವರು

ಹುಬ್ಬಳ್ಳಿ : ಮಾಜಿ ಸಚಿವರಾದ ವಿನಯ ಕುಲಕರ್ಣಿ, ಎಂ.ಬಿ. ಪಾಟೀಲ್‌ ಅವರು ಬಿಜೆಪಿ ಸೇರುವ ಬಗ್ಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಬಿಜೆಪಿಗೆ ಯಾವುದೇ ರಾಜಕೀಯ ಅಸ್ಪೃಶ್ಯತೆ ಇಲ್ಲ, ಪಕ್ಷಕ್ಕೆ ಹೊರೆಯಾಗದಿದ್ದರೆ ಹಾಗೂ ಸಿದ್ಧಾಂತ ಒಪ್ಪಿದರೆ ಯಾರನ್ನಾದರೂ ಸೇರಿಸಿಕೊಳ್ಳುತ್ತೇವೆ ಎಂದರು. 3 ವರ್ಷ ಬಿಎಸ್‌ವೈ ರಾಜ್ಯದ ಸಿಎಂ, ಬದಲಾವಣೆ ಮಾತೇ ಇಲ್ಲ: ಗುಡುಗಿದ ಬಿಜೆಪಿ ಸಾರಥಿ! … ಸುದ್ದಿಗೋಷ್ಠಿಯಲ್ಲಿ ಮಾತನಾಡಿ, …

Read More »

ತುಳು ನಟ ಸುರೇಂದ್ರ ಬಂಟ್ವಾಳ್‌ ಬರ್ಬರ ಹತ್ಯೆ

ಮಂಗಳೂರು: ಬುಧವಾರ ಹಾಡಹಗಲೇ ರೌಡಿಶೀಟರ್, ಉದ್ಯಮಿ, ತುಳು ಸಿನಿಮಾ ನಟ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಸುರೇಂದ್ರ ಬಂಟ್ವಾಳ್‌ ಬರ್ಬರ ಹತ್ಯೆಯಾಗಿದೆ. ಬಂಟ್ವಾಳ ತಾಲೂಕಿನ ಬಿಸಿ ರೋಡ್ ಬಳಿಯ ಬಸ್ತಿಪಡ್ಪುವಿನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಹಾಡಹಾಗಲೇ ರೌಡಿಶೀಟರ್ ಸುರೇಂದ್ರ ಬಂಟ್ವಾಳ್‌ರನ್ನು ಹತ್ಯೆ ಗೈಯ್ಯಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಸುರೇಂದ್ರ ಬಂಟ್ವಾಳ್ ಹಣಕಾಸು ವ್ಯವಹಾರ ಮಾಡುತ್ತಿದ್ದರು. ಹಣಕಾಸಿನ ವಿಚಾರಕ್ಕೆ ಜೊತೆಗಿದ್ದ ವ್ಯಕ್ತಿಗಳು ಬಂಟ್ವಾಳ್ ರನ್ನು ಹತ್ಯೆ ಮಾಡಿರಬಹುದು …

Read More »

ಕೊಳವೆಬಾವಿ ಅನುಮತಿ ಇಲ್ಲದೆ ತಗದರೆ ಶಿಕ್ಷೆ

ಬೆಂಗಳೂರು: ಕರ್ನಾಟಕ ಅಂತರ್ಜಲ ಪ್ರಾಧಿಕಾರವು ಬಾವಿ ಅಥವಾ ಕೊಳವೆಬಾವಿ ತೆರೆಯುವುದನ್ನು ನಿರ್ಬಂಧಿಸಲು ರಾಜ್ಯದ 15 ಜಿಲ್ಲೆಗಳ 45 ತಾಲೂಕುಗಳಿಗೆ ಸಂಬಂಧಪಟ್ಟಂತೆ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಅಂತರ್ಜಲ (ಅಭಿವೃದ್ಧಿ ನಿರ್ವಹಣೆ ಮತ್ತು ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012ರ ಅನುಸಾರ ಅಂತರ್ಜಲ ಅತಿ ಬಳಕೆ ತಾಲೂಕುಗಳೆಂದು 45 ತಾಲೂಕುಗಳನ್ನು ಗುರುತಿಸಿದ್ದು, ಅಲ್ಲಿಗೆ ಸೀಮಿತವಾಗಿ ಅಧಿನಿಯಮ ಅನ್ವಯವಾಗಲಿದೆ. ಇಂಥ ಕಡೆಗಳಲ್ಲಿ ಬಾವಿ ಅಥವಾ ಕೊಳಬೆಬಾವಿ ಕೊರೆಯಲು ಜಿಲ್ಲಾ ಮಟ್ಟದ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ …

Read More »

ಲಂಡನ್ ಮೂಲದ ಯುವತಿ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದಾಳೆ

ಹುಬ್ಬಳ್ಳಿ : ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಲಂಡನ್ ಮೂಲದ ಯುವತಿ ಮದುವೆಯಾಗುವುದಾಗಿ ನಂಬಿಸಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ಹಣ ವಂಚಿಸಿದ್ದಾಳೆ. ಹುಬ್ಬಳ್ಳಿಯ ನವನಗರದ ನಿವಾಸಿ ಗುತ್ತಿಗೆದಾರ ಪ್ರಮೋದ್ ಕುಲಕರ್ಣಿ ಮೋಸ ಹೋಗಿದ್ದು ಈಗ ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಧು ಹುಡುಕಾಟದಲ್ಲಿದ್ದ ಪ್ರಮೋದ್‌ಗೆ ‘ಸಂಗಮ’ ಹೆಸರಿನ ಮ್ಯಾಟ್ರಿಮೋನಿಯಲ್ಲಿ ಲಂಡನ್ ಮೂಲದ ಯುವತಿ ಅನ್ನಾ ಮೊಹಮ್ಮದ್‌ ಪರಿಚಯವಾಗಿದ್ದಾಳೆ. ಮೊದ‌ ಮೊದಲು ವಾಟ್ಸಪ್‌ನಲ್ಲಿ ಮೆಸೇಜ್‌ ಮಾಡುತ್ತಿದ್ದ ಯುವತಿ ಬಳಿಕ ಪ್ರತಿನಿತ್ಯ ಚಾಟ್‌ …

Read More »

ಸಿಡಿಲು ಅಬ್ಬರದ ಮಳೆಯಲ್ಲಿ ರೈತರ ಹಿತಾಸಕ್ತಿ ಗೋಸ್ಕರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕೃಷಿಂಗ ಪ್ರಾರಂಭ…

  ಗೋಕಾಕ – ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಇಂದಿನಿಂದ ಪ್ರಾರಂಭ ವಾಗಿದೆ ಇಂದು ಕಾರ್ಖಾನೆ ಸಿಬ್ಬಂದಿಗಳು ಶ್ರೀ ಸಂತೋಷ್ ಜಾರಕಿಹೊಳಿ ಅವರ್ ನೇತೃತ್ವ ದಲ್ಲಿ ಈ ಕಾರ್ಖಾನೆ ಇಂದಿನಿಂದ ಪ್ರಾರಂಭ ವಾಗಿದೆ. ಒಂದು ಕಡೆ ಸಿಡಿಲು  ಅಬ್ಬರಾದ ಮಳೆ,ನಮ್ಮ ಉತ್ತರ ಕರ್ನಾಟಕದ ತುಂಬಾ ಎಲ್ಲ ಕಡೆ ಮಳೆ ಪ್ರಾರಂಭ ವಾಗಿದೆ. ಆದರೂ ರೈತರ ಹಿತಾಸಕ್ತಿ ಗೋಸ್ಕರ ಶ್ರೀ ಸಂತೋಷ್ ಜಾರಕಿಹೊಳಿ ಅವರು ಇಂಥ ಮಳೆಯಲ್ಲಿ ಕೂಡ ತಮ್ಮ ಕಾರ್ಖಾನೆ ಯಲ್ಲಿ …

Read More »

ಉತ್ತರ ಕರ್ನಾಟಕ ನೆರೆ ಪ್ರದೇಶದಲ್ಲಿ ಸಿಎಂ ಬಿಎಸ್ ವೈ ವೈಮಾನಿಕ ಸಮೀಕ್ಷೆ

ಕಲಬುರಗಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ನೆರೆ, ಪ್ರವಾಹ ಪೀಡಿತ ಪ್ರದೇಶಗಳಾದಂತ ಕಲಬುರ್ಗಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆರೆ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದೇನೆ. ಹಾನಿಯ ಬಗ್ಗೆ ಮಾಹಿತಿ ಪಡೆದು, ಹೆಚ್ಚಿನ …

Read More »