Breaking News

Monthly Archives: ಸೆಪ್ಟೆಂಬರ್ 2020

ಅನುರಾಗ್ ಕಶ್ಯಪ್ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ: ನಟಿ ಪಾಯಲ್ ಘೋಷ್ ಆರೋಪ

ಮುಂಬೈ: ಬಾಲಿವುಡ್ ನಿರ್ಮಾಪಕ ಅನುರಾಗ್ ಕಶ್ಯಪ್ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ ಪಾಯಲ್ ಘೋಷ್ ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ನಟಿ, ಅನುರಾಗ್ ಕಶ್ಯಪ್ ನನ್ನೊಂದಿಗೆ ಬಲವಂತವಾಗಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ದಯವಿಟ್ಟು ಬೇಗ ಕ್ರಮ ಕೈಗೊಳ್ಳಿ ಸೃಜನಶೀಲ ವ್ಯಕ್ತಿಯ ಹಿಂದಿನ ರಾಕ್ಷಸ ಗುಣವನ್ನು ದೇಶ ನೋಡಲಿ. ಇದರಿಂದ ನನಗೆ ಹಾನಿಯಾಗಬಹುದು ಎಂಬುದರ ಅರಿವು ನನಗಿದೆ. ನನ್ನ ಸುರಕ್ಷತೆಗೆ …

Read More »

ಕೆಟ್ಟು ಹೋದ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಪಂಚಾಯಿತಿಗೆ ಬೀಗ ಮುತ್ತಿಗೆ ಹಿರಿಯರ ಮಧ್ಯಸ್ಥಿಕೆ ನಡುವೆ ಬೀಗ ತೆರವು

  ಅಥಣಿ : ತಾಲೂಕಿನ ಪಾರ್ಥನಹಳ್ಳಿ ಗ್ರಾಮದ ಮಾಯನಟ್ಟಿಯಿಂದ   ಶಿವನೂರು ಗ್ರಾಮದವರೆಗೆ  6 ಕಿಲೋ ಮೀಟರ್  ರಸ್ತೆ ಕೆಟ್ಟು ಗಿಡಗಂಟಿ ಮುಳ್ಳುಗಳು ಬೆಳೆದು ರಸ್ತೆ ಸಂಚಾರಕ್ಕೆ ಅವಕಾಶವಿಲ್ಲದಂತೆ ತುಂಬಾ ಕೆಟ್ಟು ಹೋಗಿದೆ ಎಂದು ಆರೋಪಿಸಿ ರಿಪೆರಿಗೆ ಒತ್ತಾಯಿಸಿ ಪಾರ್ಥನಹಳ್ಳಿ ಗ್ರಾಮ ಪಂಚಾಯಿತಿಗೆ ಶ್ರೀಶೈಲ್  ಕೆಂಪವಾಡ ನೇತೃತ್ವದಲ್ಲಿ  ಗ್ರಾಮಸ್ಥರು  ಬೀಗ ಜಡಿದು ಪ್ರತಿಭಟನೆ ವ್ಯಕ್ತಪಡಿಸಿದರು . ಗ್ರಾಮಸ್ಥ ಶ್ರೀಶೈಲ್  ಕೆಂಪವಾಡ ಮಾತನಾಡುತ್ತಾ  ಕಳೆದ ಎರಡು ಮೂರು ವರ್ಷಗಳಿಂದ ಮಾಯನಟ್ಟಿಯಿಂದ ಶಿವನೂರು ವರೆಗೆ ರಸ್ತೆ ತುಂಬಾ …

Read More »

ಆಪರೇಷನ್ ಕಮಲ ಮಾಡುವುದಕ್ಕೆ ದೆಹಲಿಗೆ ತೆರಳಿದ್ದೆನೆ ಎಂಬುವುದು ಸುಳ್ಳು. ನಾನು ಮಹಾದಾಯಿ ವಿಚಾರವಾಗಿ ಚರ್ಚಿಸಲು ಹೋಗಿದ್ದೆ

ಗೋಕಾಕ್: ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಮಾಡುವುದಕ್ಕೆ ದೆಹಲಿಗೆ ತೆರಳಿದ್ದೆನೆ ಎಂಬುವುದು ಸುಳ್ಳು. ನಾನು ಮಹಾದಾಯಿ ವಿಚಾರವಾಗಿ ಚರ್ಚಿಸಲು ಹೋಗಿದ್ದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ನಗರದ ಅಡಿಬಟ್ಟಿ ಕಾಲೋನಿಯಲ್ಲಿ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ ಯಡಿಯಲ್ಲಿ ನಿರ್ಮಿಸಿದ ಪೌರಕಾರ್ಮಿಕರ ವಸತಿ ಸಮುಚ್ಛಯ ಕಟ್ಟಡಗಳನ್ನು ಇಂದು ಉದ್ಘಾಟಿಸಿ, ಮಾತನಾಡಿದರು. ಪೌರ ಕಾರ್ಮಿಕರಿಗಾಗಿ ಜಿ+2ಮಾದರಿಯಲ್ಲಿ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ. ಮುಂದಿನ ಹಂತದಲ್ಲಿ 10 ಎಕರೆ ಜಾಗದಲ್ಲಿ ಇನ್ನಷ್ಟು ಮನೆಗಳನ್ನು …

Read More »

130.00 ಲಕ್ಷಗಳಡಿ ಇಂದು ಗೋಕಾಕ ನಗರದಲ್ಲಿ ಪೌರಕಾರ್ಮಿಕರ ವಸತಿ ಸಮುಚ್ಚಯ ಕಟ್ಟಡಗಳ ಉದ್ಘಾಟನೆ.

ಗೋಕಾಕ : ಇಲ್ಲಿಯ ನಗರಸಭೆ ಅನುದಾನದಡಿ ಪೌರಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆ ಯಡಿಯಲ್ಲಿ ಅಂದಾಜು ರೂ.130.00 ಲಕ್ಷಗಳಡಿ G+2ಮಾದರಿಯಲ್ಲಿ ನಿರ್ಮಿಸಿದ ಪೌರಕಾರ್ಮಿಕರ ವಸತಿ ಸಮುಚ್ಛಯ ಕಟ್ಟಡಗಳನ್ನು ಜುಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಉದ್ಘಾಟಿಸಿದರು. ರವಿವಾರದಂದು ನಗರದ ಮೆಳವಂಕಿ ರಸ್ತೆ, ಅಡಿಬಟ್ಟಿ ಕಾಲೋನಿಯ ನಾಕಾ ನಂಬರ್ 01ರಲ್ಲಿ ನಿರ್ಮಾಣವಾದ ಪೌರಕಾರ್ಮಿಕರ ವಸತಿ ಸಮುಚ್ಛಯ ಉದ್ಘಾಟಿಸಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪೌರ ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು …

Read More »

ನಾಳೆಯಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ಅರಂಭ

ಬೆಂಗಳೂರು,ಸೆ.20-ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ನಾಳೆಯಿಂದ ವಿಧಾನಮಂಡಲದ ಮಳೆಗಾಲದ ಅಧಿವೇಶನ ಅರಂಭವಾಗುತ್ತಿದ್ದು, ಬಹುತೇಕ ಎಲ್ಲ ಪಕ್ಷಗಳ ಶಾಸಕರು ಆತಂಕಗೊಂಡಿದ್ದಾರೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಕೇಂದ್ರ ಸರ್ಕಾರ ಬುಧವಾರವೇ ಕಲಾಪವನ್ನು ಮೊಟಕುಗೊಳಿಸಲು ಮುಂದಾಗಿರುವಾಗ, ರಾಜ್ಯದಲ್ಲಿ ಕಲಾಪವನ್ನು ನಡೆಸುವ ಔಚಿತ್ಯವಾದರೂ ಏನು? ಎಂದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಪ್ರಶ್ನಿಸುತ್ತಿದ್ದಾರೆ. ಜನಪ್ರತಿನಿಧಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವೇ ಅಧಿವೇಶನವನ್ನು ಅರ್ಧಕ್ಕೆ ನಿಲ್ಲಿಸುತ್ತಿರುವಾಗ, ರಾಜ್ಯದಲ್ಲಿ ಕಲಾಪ ನಡೆಸುವ ಅಗತ್ಯವಾದರೂ ಏನಿತ್ತ್ತು ಎಂಬುದು …

Read More »

ಜೇಡವೊಂದು ಪಕ್ಷಿಯನ್ನು ನುಂಗಿರುವ ವಿಡಿಯೋ

ಈ ಪ್ರಕೃತಿ ಎಷ್ಟೋ ವಿಸ್ಮಯವೋ ಅಷ್ಟೇ ಭಯಾನಕ. ಇದಕ್ಕೆ ಸಾಕ್ಷಿ ಎಂಬಂತೆ ಅರಣ್ಯ ಪ್ರದೇಶವೊಂದರಲ್ಲಿ ಜೇಡವೊಂದು ಪಕ್ಷಿಯನ್ನು ನುಂಗಿರುವ ವಿಡಿಯೋ ಬಹಿರಂಗಗೊಂಡಿದೆ. ಭಯ ಹುಟ್ಟಿಸುವ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಪ್ರತಿಕ್ರಿಯಿಸಿದ್ದಾರೆ. ನೇಚರ್ ಇಸ್ ಸ್ಕೇರಿ(ಪ್ರಕೃತಿ ಭಯಾನಕ) ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್ 54 ಸೆಕೆಂಡ್‍ಗಳ ಈ ವಿಡಿಯೋದಲ್ಲಿ ಕಡುಕಪ್ಪು ಬಣ್ಣದ ಜೇಡವೊಂದು ಸಾಮಾನ್ಯ ಗಾತ್ರದ ಪಕ್ಷಿಯನ್ನು ನುಂಗುತ್ತಿರುವ ದೃಶ್ಯವಿದೆ. ತನಗಿಂತಲೂ ಹಲವು ಪಟ್ಟು ದೊಡ್ಡದಾದ ಈ ಪಕ್ಷಿಯನ್ನು …

Read More »

ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಿನ್ನೆಲೆ ವಿಜಯಪುರದಲ್ಲಿ ಪ್ರವಾಹ ಭೀತಿ

ವಿಜಯಪುರ,  ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಸವನಾಡಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಉಗಮವಾಗುವ ಮೂರು ನದಿಗಳು ವಿಜಯಪುರ ಜಿಲ್ಲೆಯಲ್ಲಿ ಹರಿಯುತ್ತಿದ್ದೂ, ಮೂರೂ ನದಿಗಳು ಉಕ್ಕಿ ಹರಿಯುತ್ತಿವೆ. ಭೀಮಾ ನದಿಗೆ ಮಹಾರಾಷ್ಟ್ರ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದ ಸಮಾನಾಂತರ ನಿರ್ಮಿಸಿರುವ ಎಲ್ಲ 8 ಬ್ಯಾರೇಜುಗಳೂ ಮುಳುಗಡೆಯಾಗಿವೆ. ಭೀಮಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅಪಾರ ಪ್ರಮಾಮದ …

Read More »

ಎಡಬಿಡಂಗಿ, ಅವಕಾಶವಾದಿಯಿಂದ ನಾವು ಸ್ವಾಭಿಮಾನದ ಪಾಠ ಕಲಿಯಬೇಕಾಗಿಲ್ಲ; ಸಿದ್ದರಾಮಯ್ಯಗೆ ಕುಮಾರಸ್ವಾಮಿ ತಿರುಗೇಟು

ಬೆಂಗಳೂರು : ಆತ್ಮವಂಚನೆಯ ರಾಜಕಾರಣಿಯಾದ ನಿಮ್ಮಿಂದ ಜೆಡಿಎಸ್​ ಪಕ್ಷದವರು ಕಲಿಯಬೇಕಾಗಿದ್ದು ಏನೂ ಇಲ್ಲ. ಅಧಿಕಾರದ ಆಸೆಗಾಗಿ ಬೇರೆ ಪಕ್ಷಕ್ಕೆ ಜಿಗಿದವರು ನೀವು. ನಿಮ್ಮಿಂದ ನಾವು ಕಲಿಯಬೇಕಾಗಿಲ್ಲ. ಈಗ ನಮ್ಮನ್ನು ಅವಕಾಶವಾದಿ ಪಕ್ಷ ಎಂದು ಹೇಳುತ್ತಿದ್ದೀರಿ. ಈ ಮೂಲಕ ನಿಮ್ಮ ಊಸರವಳ್ಳಿ ರಾಜಕಾರಣದ ಬಣ್ಣ ಬಯಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಸರಣಿ ಟ್ವೀಟ್​ಗಳನ್ನು ಮಾಡಿರುವ ಮಾಜಿ ಸಿಎಂ …

Read More »

ಮಕ್ಕಳಿಗೆ ಸಿಗಬೇಕಾದ ಪೌಷ್ಟಿಕ ಆಹಾರ ಅಂಗನವಾಡಿ ಕಾರ್ಯಕರ್ತೆಯರ ಮನೆಗೆ

ಬೀದರ್ : ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಮುಖಾಂತರ ಸರ್ಕಾರ‌ ಅಂಗನವಾಡಿಗಳ ಮೂಲಕ ಪೌಷ್ಠಿಕ ಆಹಾರ ನೀಡುತ್ತಿದೆ. ಆದರೆ ಗಡಿ ಜಿಲ್ಲೆ ಬೀದರನಲ್ಲಿ ಗರ್ಭಿಣಿಯರು, ಮಕ್ಕಳ ಹೊಟ್ಟೆ ಸೇರಬೇಕಾದ ಪೌಷ್ಠಿಕ ಆಹಾರ ಧಾನ್ಯ ಅಂಗನವಾಡಿ ಕಾರ್ಯಕರ್ತೆಯರ ಹೊಟ್ಟೆ ಪಾಲಾಗುತ್ತಿದೆ. ಪಾಲಕರ ತಿಳುವಳಿಕೆ ಕೊರತೆಯಿಂದ ಬೀದರ್ ಜಿಲ್ಲೆಯಲ್ಲಿ ಅಪೌಷ್ಟಿಕತೆ ಮಕ್ಕಳ ಪ್ರಮಾಣ ಗಣನೀಯವಾಗಿದೆ. ಈ ಸಮಸ್ಯೆಯನ್ನು ಕೇಂದ್ರ …

Read More »

ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಕೊಲೆ : ಆರು ಮಂದಿ ಆರೋಪಿಗಳ ಸೆರೆ

ಟಿ.ನರಸೀಪುರ, -ತಾಲೂಕಿನ ಕೇತುಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಬನ್ನೂರು ಪೋಲೀಸರು ಯಶಸ್ವಿಯಾಗಿದ್ದು ಘಟನೆಯ ಸಂಬಂಧ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೇತುಪುರ ಗ್ರಾಮದ ಕೆ.ಆರ್.ಸುಭಾಷ್ (23),ಚಂದನ್(22),ಸಂಜಯ (24),ಪುನೀತ್ (22), ವಿನಯ (30),ರವಿ(24) ಹಾಗು ಚಂದ್ರು(25) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ಸೆ.12 ರಂದು ಬನ್ನೂರು ಪೋಲೀಸ್ ಠಾಣಾ ವ್ಯಾಪ್ತಿಯ ಕೇತುಪುರ ಗ್ರಾಮದಲ್ಲಿ ಕೃಷ್ಣೇಗೌಡ ಎಂಬುವರ ಪುತ್ರ ಸಿದ್ದರಾಜು ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. …

Read More »