ಬೆಂಗಳೂರು : ಕೊರೋನಾ ಭೀತಿಯಿಂದಾಗಿ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿಲ್ಲ. ಆದ್ರೇ ಕೊರೋನಾ ಭೀತಿಯ ನಡುವೆಯೂ ಪದವಿ ಹಾಗೂ ಸ್ನಾತಕೋತ್ತರ ಪದವಿ, ವೃತ್ತಿಪರ ಪರೀಕ್ಷೆಗಳೂ ನಡೆಸೋದಕ್ಕೆ ನಿರ್ಧರಿಸಲಾಗಿದೆ. ಆದ್ರೆ ಕೆ ಎಸ್ ಆರ್ ಟಿ ಸಿ ವಿದ್ಯಾರ್ಥಿಗಳ ಬಸ್ ಪಾಸ್ ಅವದಿ ಮುಕ್ತಾಯಗೊಂಡಿತ್ತು. ಹೀಗಾಗಿ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮನವಿ ಮಾಡಿದ್ದರ ಹಿನ್ನಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿ ಬಸ್ ಪಾಸ್ ಬಳಸಿಕೊಂಡು ಒಡಾಟಕ್ಕೆ ಅನುಮತಿ …
Read More »Monthly Archives: ಸೆಪ್ಟೆಂಬರ್ 2020
ಸುದೀಪ್ ಹುಟ್ಟುಹಬ್ಬ ಅಭಿಮಾನಿಗಳ ಹಿತಕ್ಕಾಗಿ ಸಾರ್ವಜನಿಕವಾಗಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ
ಬೆಂಗಳೂರು: ಸ್ಯಾಂಡಲ್‍ವುಡ್‍ನ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಕಿಚ್ಚ ಸುದೀಪ್ 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಕೊರೊನಾ ಹಿನ್ನೆಲೆ ಅಭಿಮಾನಿಗಳ ಹಿತಕ್ಕಾಗಿ ಸಾರ್ವಜನಿಕವಾಗಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ಹುಟ್ಟುಹಬ್ಬಕ್ಕೂ ಮುನ್ನವೇ ಅಭಿಮಾನಿಗಳಿಗೆ ಮನೆಯ ಬಳಿ ಬಾರದಂತೆ ಮನವಿ ಮಾಡಿಕೊಂಡಿದ್ದರು. ಆದರೂ ಅಭಿಮಾನಿಗಳು ಅವರ ಮನೆಯ ಬಳಿ ಗುಂಪು ಸೇರಿದ್ದರು.ಮಂಗಳವಾರ ಮಧ್ಯರಾತ್ರಿ ಅಭಿಮಾನಿಗಳು ಕಿಚ್ಚನ ಪುಟ್ಟೇನಹಳ್ಳಿ ನಿವಾಸ ಬಳಿ ಗುಂಪು ಸೇರಿದ್ದರು. ಹೀಗಾಗಿ …
Read More »ರಾಜ್ಯದ ಭಕ್ತರಿಗೆ ಗುಡ್ ನ್ಯೂಸ್: ದೇವಸ್ಥಾನಗಳ ಎಲ್ಲ ಬಗೆಯ ಧಾರ್ಮಿಕ ಸೇವೆಗಳ ಪುನರಾರಂಭಕ್ಕೆ ಅನುಮತಿ
ಬೆಂಗಳೂರು : ರಾಜ್ಯದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಸೆ.1 ರಿಂದಲೇ ಸೇವೆಗಳನ್ನು ಪುನರ್ ಆರಂಭಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೌದು, ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ” ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಪೂಜಾ ವಿಧಿ ವಿಧಾನಗಳು/ಪೂಜಾ ಕೈಂಕರ್ಯಗಳು. ತೀರ್ಥ ವಿತರಣೆ ಹಾಗೂ ಜನಸಂದಣಿ ಸೇರುವ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಇದೀಗ ದೇವಾಲಯಗಳಲ್ಲಿ ಸೇವೆಗಳನ್ನು ಪುನರ್ ಆರಂಭಿಸುವಂತೆ ರಾಜ್ಯ ಸರ್ಕಾರ ಆದೇಶ …
Read More »ಸಾಲ ಮರುಪಾವತಿ 2 ವರ್ಷ ವಿಸ್ತರಣೆ ಸಾಧ್ಯ: ಸುಪ್ರೀಂ ಕೋರ್ಟ್‌ಗೆ ಆರ್‌ಬಿಐ ಹೇಳಿಕೆ
ನವದೆಹಲಿ: ಕೋವಿಡ್ ಪಿಡುಗಿನಿಂದಾದ ಆರ್ಥಿಕ ಹಿನ್ನಡೆಗೆ ಪರಿಹಾರವಾಗಿ ಪ್ರಕಟಿಸಲಾದ ಸಾಲ ಮರುಪಾವತಿ ಮುಂದೂಡಿಕೆಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಲು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿವೆ. ಆದರೆ, ವಿವಿಧ ಕ್ಷೇತ್ರಗಳು ಎದುರಿಸುತ್ತಿರುವ ಸಮಸ್ಯೆಗಳು ಭಿನ್ನವಾಗಿವೆ. ಹಾಗಾಗಿ, ಏಕರೂಪದ ಪರಿಹಾರವೊಂದನ್ನು ಒದಗಿಸುವುದು ಕೇಂದ್ರ ಸರ್ಕಾರಕ್ಕೆ ಸಾಧ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ. ಒಟ್ಟು ಆಂತರಿಕ ಉತ್ಪನ್ನವು ಶೇ 23ರಷ್ಟು ಕುಸಿದಿದೆ. ಯಾವ …
Read More »ಮತ್ತೆ ನೂರು ವಿಶೇಷ ರೈಲುಗಳ ಸಂಚಾರ
ನವದೆಹಲಿ: ಅನ್ಲಾಕ್ನ ನಾಲ್ಕನೇ ಹಂತದಲ್ಲಿ, ಭಾರತೀಯ ರೈಲ್ವೆ ಗೃಹ ಸಚಿವಾಲಯ ರಾಜ್ಯ ಸರ್ಕಾರಗಳ ಒಪ್ಪಿಗೆಯೊಂದಿಗೆ ಹೆಚ್ಚಿನ ವಿಶೇಷ ರೈಲುಗಳನ್ನು ಪರಿಚಯಿಸಲು ಯೋಜಿಸುತ್ತಿದೆ. ಆದರೆ ಸಾಮಾನ್ಯ ಸೇವೆಗಳನ್ನು ಪೂರ್ಣವಾಗಿ ಪುನರಾರಂಭಿಸುವುದು ಇನ್ನೂ ಬಹಳ ದೂರ ಎನ್ನಲಾಗುತ್ತಿದೆ. ಕೆಲವು ರಾಜ್ಯಗಳು, ವಿಶೇಷವಾಗಿ ಬಿಜೆಪಿಯೇತರ ಅಧಿಕಾರದಲ್ಲಿರುವ ಸರ್ಕಾರಗಳು ಅಂತರರಾಜ್ಯ ರೈಲುಗಳ ಪ್ರಯಾಣವನ್ನು ವಿರೋಧ ವ್ಯಕ್ತಪಡಿಸಿದ್ದಾವೆ. ತಮಿಳುನಾಡು, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾದಂತಹ ರಾಜ್ಯಗಳು ಹೆಚ್ಚಿನ ರೈಲುಗಳನ್ನು ಪರಿಚಯಿಸಲು ಹೆಚ್ಚು ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಸಾಂಕ್ರಾಮಿಕ …
Read More »ವೈಜನಾಥ ಪಾಟೀಲ ಸಂಸ್ಮರಣ ಗ್ರಂಥ ಪ್ರಕಟಿಸಲು ನಿರ್ಧಾರ
ಕಲಬುರ್ಗಿ: ‘371 (ಜೆ) ತಿದ್ದುಪಡಿ ಹೋರಾಟದ ರೂವಾರಿ, ಮಾಜಿ ಸಚಿವ ವೈಜನಾಥ ಪಾಟೀಲ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಸಂಸ್ಮರಣ ಗ್ರಂಥ ಹೊರತರಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಂಪಾದಕೀಯ ಸಮಿತಿ ರಚನೆ ಮಾಡಲಾಗಿದೆ’ ಎಂದು ವೈಜನಾಥ ಪಾಟೀಲರ ಸಂಸ್ಮರಣಾ ಸಂಚಿಕೆ ಸಮಿತಿ ಸಂಚಾಲಕ ಎಂ.ಬಿ.ಅಂಬಲಗಿ ಮತ್ತು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗೌತಮ ಪಾಟೀಲ ತಿಳಿಸಿದರು. ನಗರದಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ವೈಜನಾಥ …
Read More »ಅಪಾಯದ ಅಂಚಿನಲ್ಲಿದೆ ಪಣಜಿ – ಕೊಚ್ಚಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಕಿರುಸೇತುವೆ
ಮಂಗಳೂರು : ಪಣಜಿ- ಕೊಚ್ಚಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ಮಂಗಳೂರು ಹೊರವಲಯದ ಕೆ.ಸಿ.ರೋಡ್ ಎಂಬಲ್ಲಿರುವ ಸೇತುವೆಯೊಂದು ಅಪಾಯಕ್ಕೆ ಮುನ್ಸೂಚನೆ ನೀಡುತ್ತಿದೆ. ಇತ್ತೀಚೆಗೆ ಈ ಸೇತುವೆಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸೇತುವೆಯ ತಡೆಗೋಡೆಯು ಸಂಪೂರ್ಣ ಹಾನಿಗೊಳಗಾಗಿದೆ. ಇದರಿಂದಾಗಿ ತಡೆಗೋಡೆ ಇಲ್ಲದ ಪರಿಣಾಮ ಹಾಗೂ ಅತ್ಯಂತ ಇಕ್ಕಟ್ಟಾಗಿರುವ ಸೇತುವೆಯಿಂದಾಗಿ ಇದರ ಮೇಲೆ ಸಂಚರಿಸುವ ವಾಹನಗಳಿಗೆ ಅಪಾಯ ಎದುರಾಗಿದೆ. ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಈ ಸೇತುವೆಯ ಮೂಲಕವೇ ಹಾದು ಹೋಗುತ್ತಿದ್ದು, …
Read More »ಹೆಗ್ಗೋಡಿನ ಚರಕಕ್ಕೆ ಕೋವಿಡ್ 19 ಹೊಡೆತ: ‘ದಿವಾಳಿ’ ಘೋಷಣೆ
ಸಾಗರ: ‘ಆತ್ಮನಿರ್ಭರ ಭಾರತ’, ‘ವೋಕಲ್ ಫಾರ್ ಲೋಕಲ್’ ಘೋಷಣೆ ಮೊಳಗುತ್ತಿರುವ ಬೆನ್ನಲ್ಲೇ ರಾಷ್ಟ್ರವ್ಯಾಪಿ ಹೆಸರುವಾಸಿಯಾಗಿರುವ ಹೆಗ್ಗೋಡಿನ ಚರಕ ಕೈಮಗ್ಗ ನೇಕಾರಿಕೆ ಸಂಸ್ಥೆಯು ಕೋವಿಡ್ 19 ಹೊಡೆತಕ್ಕೆ ಸಿಲುಕಿ ಸದ್ದಿಲ್ಲದೆ ಕಣ್ಣು ಮುಚ್ಚಿದೆ. ಆರ್ಥಿಕ ಹಿಂಜರಿತ, ಕೋವಿಡ್ 19 ಸಂಕಷ್ಟದಲ್ಲೂ ಚಟುವಟಿಕೆ ಮುಂದುವರಿಸಿದ್ದ ಸಂಸ್ಥೆಯು ಕಳೆದ ಒಂದೂವರೆ ವರ್ಷದಲ್ಲಿ ಎರಡೂವರೆ ಲಕ್ಷ ಮೀಟರ್ ಬಟ್ಟೆ ನೇಯ್ದಿತ್ತು. ಸಿದ್ಧ ಉಡುಪು ತಯಾರಿಸುವ ಕಾಯಕವನ್ನೂ ಮುಂದುವರಿಸಿತ್ತು. 800ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಪೂರ್ಣ ವೇತನ ನೀಡಿತ್ತು. …
Read More »ರಾಯಚೂರು ಮಾರುಕಟ್ಟೆಗೆ ದಾಖಲೆ ಪ್ರಮಾಣದಲ್ಲಿ ಬಂದ ಈರುಳ್ಳಿ; ದರ ಕುಸಿತಕ್ಕೆ ಕಂಗಾಲಾದ ರೈತ
ರಾಯಚೂರು : ರೈತನಿಗೆ ಒಂದಿಲ್ಲ ಒಂದು ಸಂಕಷ್ಟ ತಪ್ಪಿದ್ದಲ್ಲ, ಕಳೆದ ಬಾರಿ ದುಬಾರಿ ದರದಲ್ಲಿ ಮಾರಾಟವಾಗಿದ್ದ ಈರುಳ್ಳಿ ಈ ಬಾರಿ ಆರಂಭದಲ್ಲಿಯೇ ಪಾತಾಳಕ್ಕಿಳಿದಿದೆ. ಈರುಳ್ಳಿ ಬೆಳೆದ ರೈತ ಈಗ ದರ ಇಲ್ಲದೆ ಕಂಗಾಲಾಗಿದ್ದಾನೆ. ಒಂದು ಕಡೆ ಈರುಳ್ಳಿ ಇಟ್ಟುಕೊಳ್ಳಲು ಆಗದೆ ಮಾರಾಟ ಮಾಡಲು ಆಗದೆ ದಿಕ್ಕು ತೋಚದಂತಾಗಿದ್ದಾನೆ. ಒಂದು ಕೊರೋನಾದಿಂದ ಉದ್ಯೋಗವಿಲ್ಲದೇ ಕೃಷಿಯತ್ತ ಮುಖ ಮಾಡಿದ ರೈತರ, ಕಷ್ಟ ಪಟ್ಟು ಈರುಳ್ಳಿಯನ್ನು ಬೆಳೆದು ಮಾರುಕಟ್ಟೆಗೆ ತಂದರೆ ಈರುಳ್ಳಿ ದರ ಪಾತಾಳಕ್ಕಿಳಿದಿದೆ. …
Read More »ಬೆಂಗಳೂರು ಗಲಭೆ ಕೇಸ್: ಎಸ್‌ಡಿಪಿಐ ಕಚೇರಿಯಲ್ಲಿ ಮತ್ತೆ ಮಾರಕಾಸ್ತ್ರ ವಶ
ಬೆಂಗಳೂರು : ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಎಸ್‌ಡಿಪಿಐ ಪಕ್ಷದ 3 ಕಚೇರಿಗಳ ಮೇಲೆ ಮಂಗಳವಾರ ಸಿಸಿಬಿ ಪೊಲೀಸರು ದಾಳಿ ನಡೆಸಿ, ಮಹತ್ವದ ದಾಖಲೆಗಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ. ಮಾರಕಾಸ್ತ್ರ ಜಪ್ತಿ ಆಗುತ್ತಿರುವುದು 2ನೇ ಸಲ. ಹಲಸೂರು ಗೇಟ್, ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಹಾಗೂ ಕೆ.ಜಿ.ಹಳ್ಳಿಯಲ್ಲಿರುವ ಎಸ್‌ಡಿಪಿಐ ಕಚೇರಿಗಳಲ್ಲಿ ಶೋಧ ನಡೆದಿದೆ. ಈ ವೇಳೆ ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್‌ಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಕೆ.ಜಿ.ಹಳ್ಳಿ …
Read More »