ವ್ಯಕ್ತಿಯೊಬ್ಬ ತನ್ನ ಬೊಜ್ಜು ಹೊಟ್ಟೆಯಿಂದಾಗಿ ಚಿಕ್ಕ ಕೊಳವೆ ಬಾವಿಯಲ್ಲಿ ಮುಳುಗಿ ಸಾವಪ್ಪುವುದನ್ನು ತಪ್ಪಿಸಿಕೊಂಡ ಘಟನೆ ಚೀನಾದಲ್ಲಿ ನಡೆದಿದೆ. 28 ವರ್ಷದ ಲಿಯು ಎಂಬ ವ್ಯಕ್ತಿ ಚೀನಾದ ಹೆನಾನ್ ಪ್ರಾಂತದ ಫುಲಿಯುಡಿಯನ್ ಗ್ರಾಮದಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿದ್ದಾನೆ. ಮನೆಯ ಮುಂದೆ ಇದ್ದ ಬಾವಿಯ ಮೇಲೆ ಹೊದಿಸಲಾಗಿದ್ದ ಸಣ್ಣ ಮರದ ಹಲಗೆ ಮುರಿದ ಕಾರಣದಿಂದಾಗಿ ಆ ಯುವಕ ಬಾವಿಯೊಳಗೆ ಸಿಲುಕಿಕೊಂಡಿದ್ದಾನೆ. ಅದೃಷ್ಟವಶಾತ್ ಬಾವಿಯ ಅಗಲ ಚಿಕ್ಕದಿದ್ದು ಯುವಕನ ಹೊಟ್ಟೆ ಬಾವಿ ಅಗಲಕ್ಕಿಂತ ದೊಡ್ಡದಾಗಿದ್ದರಿಂದ …
Read More »Monthly Archives: ಆಗಷ್ಟ್ 2020
ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆ ಮತ್ತು ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ:ಬಿ.ಆರ್.ಸಂಗಪ್ಪಗೋಳ
ಚಿಕ್ಕೋಡಿ: ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆ ಮತ್ತು ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಆರೋಪಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶಾಸಕರ ಮೇಲೆ ಮತ್ತು ಪೊಲೀಸ ಅಧಿಕಾರಿಗಳ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡರೇ ಬೆಂಗಳೂರು ಬಿಹಾರ ಆಗಿದಂತೆ ಕಾಣುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೀಳಿಸುವ ಹುನ್ನಾದ ಬಿಜೆಪಿ ಪಕ್ಷದಲ್ಲಿರುವ ಕೆಲವು …
Read More »ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಕೊನೆಗೆ ಎಚ್ಚತ್ತ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.
ಕಿತ್ತೂರು: ನಿರಂತರ ಮಳೆಯಿಂದಾಗಿ ತೆಗ್ಗು, ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದ್ದ ನೇಗಿನಾಳ- ಬೈಲಹೊಂಗಲ ರಸ್ತೆ ದುರಸ್ತಿ ಮಾಡುವಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಕೊನೆಗೆ ಎಚ್ಚತ್ತ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಎಂ.ಕೆ ಹುಬ್ಬಳ್ಳಿಯಿಂದ ನೇಗಿನಾಳ ಮಾರ್ಗವಾಗಿ ಬೈಲಹೊಂಗಲ ತಲುಪುವ ರಸ್ತೆ ಸಂಪೂರ್ಣ ನಾಶವಾಗಿತ್ತು. 1 ಕೀಮಿ ವರೆಗೂ ರಸ್ತೆ ಸಂಪೂರ್ಣ ಹಾಳಾಗಿದ್ದು, ತಗ್ಗು , ಗುಂಡಿಯಲ್ಲಿ ಮಳೆ ನೀರು ತುಂಬಿದ್ದರಿಂದ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿ ವಾಹನ ಸವಾರರು …
Read More »ಕೊರೊನಾ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಅದ್ದೂರಿಯಾಗಿ ಸ್ವಾಗತಿ
ಹುಬ್ಬಳ್ಳಿ: ಕೊರೊನಾ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಪೂರ್ವ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗೆ ಇತ್ತೀಚಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊರೊನಾ ವರದಿ ನೆಗಟಿವ್ ಬಂದ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸುದ್ದಿ ತಿಳಿದು ಠಾಣೆಯ ಇತರ ಸಿಬ್ಬಂದಿ, ಪೇದೆಗೆ ಶಾಲು, ಹೂವಿನ ಮಾಲೆ ಹಾಕಿ ಸನ್ಮಾನ ಮಾಡಿದರು.
Read More »74 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಶುಭ ಕೋರಿದ್ದಾರೆ.: ಸಚಿವ ರಮೇಶ ಜಾರಕಿಹೊಳಿ
ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು 74 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಶುಭ ಕೋರಿದ್ದಾರೆ. ನಾಳೆ ದೇಶದಾದ್ಯಂತ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸುತ್ತಿದ್ದು, ಬ್ರಿಟಿಷ್ ರ ದಾಸ್ಯದ ಸಂಕೋಲೆಯಿಂದ ಭಾರತ ಮುಕ್ತಗೊಂಡ ಈ ದಿನದಂದು ಸ್ವಾತಂತ್ರ್ಯ ಪಡೆಯಲು ಹೋರಾಡಿದ ಎಲ್ಲ ಮಹಾನುಭಾವರ ತ್ಯಾಗ, ಬಲಿದಾನವನ್ನು ಸ್ಮರಿಸೋಣ; ಕೋವಿಡ್ ಯೋಧರನ್ನು ಗೌರವಿಸೋಣ. ನಾಡಿನ ಜನತೆಗೆ 74ನೇ ಸ್ವಾತಂತ್ರ್ಯ ದಿನೋತ್ಸವ ದ ಶುಭಾಶಯಗಳು-ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಸಚಿವರು.
Read More »ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ,
ಬೆಂಗಳೂರು,ಆ.14- ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿಗಳು ನೀಡುವ ಶೌರ್ಯ ಪ್ರಶಸ್ತಿ ಈ ಬಾರಿ ರಾಜ್ಯದ 19 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಇಗೆ ಲಭಿಸಿದೆ. ಅತ್ಯುತ್ತಮ ಸೇವೆ ಸಲ್ಲಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತಿದೆಪ್ರಶಸ್ತಿ ಪುರಸ್ಕೃತರು : 1. ಹೇಮಂತ್ಕುಮಾರ್- ಉಪಪೊಲೀಸ್ ವರಿಷ್ಠಾಧಿಕಾರಿ, ಲೋಕಾಯುಕ್ತ, ಬೆಂಗಳೂರು 2. ಪರಮೇಶ್ವರ್ ಹೆಗ್ಡೆ -ಉಪಪೊಲೀಸ್ ವರಿಷ್ಠಾಧಿಕಾರಿ, ಆರ್ಥಿಕ ಅಪರಾಧ ವಿಭಾಗ, ಸಿಐಡಿ, ಬೆಂಗಳೂರು 3. …
Read More »5ನೇ ದಿನಕ್ಕೆ ಕಾಲಿಟ್ಟ ಕಿಮ್ಸ್ ವೈದ್ಯಕೀಯ ಸಿಬ್ಬಂದಿಯ ಪ್ರತಿಭಟನೆ
ಹುಬ್ಬಳ್ಳಿ: ಎನ್.ಪಿ.ಎಸ್ ಸೌಲಭ್ಯ ಸೇರಿದಂತೆ ಜ್ಯೋತಿ ಸಂಜೀವಿನಿ ಒದಗಿಸುವಂತೆ ಆಗ್ರಹಿಸಿ ಕಿಮ್ಸ್ ಶುಶ್ರೂಷಾ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಯಾವುದೇ ದಕ್ಕೆ ಉಂಟಾಗದಂತೆ ಪ್ರತಿಭಟನೆ ನಡೆಸಿದರು.ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಹುಬ್ಬಳ್ಳಿಯ ಕಿಮ್ಸ್ ಆವರಣದ ಎದುರು ಕಪ್ಪು ಪಟ್ಟಿ ಧರಿಸಿ ಕೋವಿಡ್ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದೆ ಕಾರ್ಯ ಮಾಡಿದ್ದೇವೆ. ಪಿಂಚಣಿ ಸೌಲಭ್ಯ ಕುಟುಂಬ ಕಲ್ಯಾಣ …
Read More »ನಾನು ಹುಟ್ಟಿ ಬೆಳೆದಂತಹ ಮನೆ ಸಂಪೂರ್ಣವಾಗಿ ನಾಶವಾಗಿದೆ.3 ಕೋಟಿ ನಷ್ಟ ಆಗಿದೆ: ಶ್ರೀನಿವಾಸ ಮೂರ್ತಿ
ಬೆಂಗಳೂರು: ನಾವು ಯಾರ ಮೇಲೂ ದ್ವೇಷಕ್ಕೆ ಹೋಗಿಲ್ಲ. ಎಲ್ಲರೂ ಅಣ್ಣ-ತಮ್ಮಂದಿರ ರೀತಿ ಇದ್ದೇವೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಟ್ಟಾಗಿ ಇದ್ದೇವೆ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದರು.ಮಾಧ್ಯಮಗಳ ಜೊತೆ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ, ಯಾರು ಈ ಕೃತ್ಯಗಳನ್ನು ಮಾಡಿದ್ದಾರೆ ಎಂಬುದನ್ನು ಪೊಲೀಸ್ ಇಲಾಖೆ ತನಿಖೆ ಮಾಡಿ, ನ್ಯಾಯ ಒದಗಿಸಿಕೊಡಬೇಕು ಎಂದು ದೂರನ್ನು ಕೊಟ್ಟಿದ್ದೇವೆ. ಈ ಗಲಭೆಯಿಂದ ಏನೇನು ನಷ್ಟ ಆಗಿದೆ ಎಂದು ಒಂದು ಪಟ್ಟಿ ಮಾಡಿ ಮಾಡಿಕೊಡುತ್ತೇನೆ. …
Read More »ಬೆಂಗಳೂರು ಗಲಭೆ ರಾಜಕೀಯ ಲಾಭಕ್ಕಾಗಿ ನಡೆದಿರುವ ಘಟನೆ: ಲಕ್ಷ್ಮಣ ಸವದಿ
ರಾಯಚೂರು: ಬೆಂಗಳೂರಿನ ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯ ಘಟನೆ ಪೂರ್ವ ನಿಯೋಜಿತ, ಇದು ರಾಜಕೀಯ ಲಾಭಕ್ಕಾಗಿ ನಡೆದಿರುವ ಘಟನೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಯಚೂರಿನಲ್ಲಿ ಹೇಳಿದ್ದಾರೆ. ನಗರದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಬೆಂಗಳೂರು ಗಲಭೆಗೆ ಕಾರಣವಾದ ನವೀನ್ ಅನ್ನೋ ವ್ಯಕ್ತಿ ಕಟ್ಟಾ ಕಾಂಗ್ರೆಸ್ ಬೆಂಬಲಿಗ. ನವೀನ್‍ಗೂ ಬಿಜೆಪಿಗೂ ಯಾವುದೇ …
Read More »ಚಾಲೆಜಿಂಗ್ ಸ್ಟಾರ್ ದರ್ಶನ ಇಂದು ಧಾರವಾಡದಲ್ಲಿ
ಧಾರವಾಡ: ಚಾಲೆಜಿಂಗ್ ಸ್ಟಾರ್ ದರ್ಶನ ಇಂದು ಧಾರವಾಡದಲ್ಲಿದ್ದಾರೆ. ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆ ಬೆಂಗಳೂರಿನಲ್ಲಿನ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವುದೇ ಚಿತ್ರಿಕರಣ ಇಲ್ಲದ ಕಾರಣ ದರ್ಶನ್ ಧಾರವಾಡ ಟೂರ್ ಹಮ್ಮಿಕೊಂಡಿದ್ದಾರೆ.ಮಾಜಿ ಸಚಿವ ವಿನಯ ಕುಲಕರ್ಣಿ ಜೊತೆ ಹಲವು ವರ್ಷಗಳಿಂದ ದರ್ಶನ್ ಸ್ನೇಹ ಇದೆ. ಈ ಹಿನ್ನೆಲೆಯಲ್ಲಿ ಆಗಾಗ ದರ್ಶನ್ ಇಲ್ಲಿಗೆ ಭೇಟಿ ನೀಡುತ್ತಾ ಇರುತ್ತಾರೆ. ಧಾರವಾಡ ನಗರದ ಹೊರ ವಲಯದಲ್ಲಿರುವ ವಿನಯ ಕುಲಕರ್ಣಿ ಹಾಲಿನ ಡೈರಿಯಲ್ಲಿ ಇಳಿದುಕೊಂಡಿರುವ ದರ್ಶನ್, ಅಲ್ಲಿ ಚಕ್ಕಡಿ …
Read More »