Breaking News

Monthly Archives: ಜೂನ್ 2020

ರಾಜ್ಯದಲ್ಲಿ ಶುಕ್ರವಾರ ಒಂದೇ ದಿನಕ್ಕೆ 271 ಜನರಿಗೆ ಕೊರೊನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಒಂದೇ ದಿನಕ್ಕೆ 271 ಜನರಿಗೆ ಕೊರೊನಾ  ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 6,516ಕ್ಕೆ ಏರಿಕೆಯಾಗಿದೆ. 7 ಜನರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಕಡುನಾಡಲ್ಲಿ ಕೊರೊನಾ ರಣಕೇಕೆ ಮುಂದುವರೆಸಿದೆ. ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 24 ಗಂಟೆಯಲ್ಲಿ 271 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೆ 6516 ಸೋಂಕಿತರ ಪೈಕಿ 3,440 ಜನರು ಸಂಪೂರ್ಣ ಗುಣಮುಖರಾಗಿ, ಬಿಡುಗಡೆಯಾಗಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ 79 ಜನರು ಮೃತಪಟ್ಟಿದ್ದಾರೆ. ಜಿಲ್ಲಾವಾರು …

Read More »

ಹುಚ್ಚ ವೆಂಕಟ್‌ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಂಡ್ಯ: ಹುಚ್ಚ ವೆಂಕಟ್‌ಗೆ ನಡು ಬೀದಿಯಲ್ಲಿ ಯುವಕರು ಥಳಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಇದೀಗ ಹುಚ್ಚ ವೆಂಕಟ್‌ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವೆಂಕಟ್‌ ಮೇಲೆ ಹಲ್ಲೆ ಮಾಡಿದ್ದ ಕಿಡಿಗೇಡಿಗಳು ಜೂ 10 ರಂದು ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್‌ ಬಳಿ ಹುಚ್ಚ ವೆಂಕಟ್‌ ಟೀ ಕುಡಿಯಲು ಹೋಗಿದ್ದರು. ಟೀ ಕುಡಿಯುವ ವೇಳೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ವೆಂಕಟ್‌ರನ್ನು ಯುವಕರ ಗುಂಪೊಂದು …

Read More »

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಪ್ರಯುಕ್ತ ಜಾಗೃತಿ ರಥಕ್ಕೆ ಚಾಲನೆ

ಬೆಳಗಾವಿ: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಪ್ರಯುಕ್ತ ಜಾಗೃತಿ ರಥಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಜೆ.ಸತೀಶ ಸಿಂಗ್ ಹಾಗೂ ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ಹಸಿರು ನಿಶಾನೆ ತೋರಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ, ವಿವಿಧ ಇಲಾಖೆಗಳು, ಕಾರ್ಮಿಕ ಸಂಘಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ (ಜೂನ್ 12) ಜಿಲ್ಲಾಧಿಕಾರಿಗಳ ಕಚೇರಿ …

Read More »

ಲಾಕ್ ಡೌನ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ ತಾಲೂಕಿನ ರೈತರ ತರಕಾರಿ ಹಾಗೂ ಹಣ್ಣು ಬೆಳೆಗಳ ಕುರಿತು ಮರು ಸಮೀಕ್ಷೆ ಮಾಡಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಘಟಕದ ರೈತರು ಒತ್ತಾಯಿಸಿದ್ದಾರೆ.

ಸವಣೂರ: ಲಾಕ್ ಡೌನ್ ಸಂದರ್ಭದಲ್ಲಿ ನಷ್ಟ ಅನುಭವಿಸಿದ ತಾಲೂಕಿನ ರೈತರ ತರಕಾರಿ ಹಾಗೂ ಹಣ್ಣು ಬೆಳೆಗಳ ಕುರಿತು ಮರು ಸಮೀಕ್ಷೆ ಮಾಡಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾ ಘಟಕದ ರೈತರು ಒತ್ತಾಯಿಸಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಸಮಯದಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ರೈತರು ಸಾಕಷ್ಟು ನಷ್ಟಕ್ಕೊಳಗಾಗಿದ್ದಾರೆ. ಕಂದಾಯ ಇಲಾಖೆಯ ವತಿಯಿಂದ …

Read More »

ರಾಜ್ಯಸಭಾ ಸದಸ್ಯರಾಗಿ ಈರಣ್ಣ ಕಡಾಡಿ ಅವರು ಅವಿರೋಧವಾಗಿ ಆಯ್ಕೆ, ಚುನಾವಣಾ ಅಧಿಕಾರಿಯಿಂದ ಪ್ರಮಾಣಪತ್ರ ಸ್ವೀಕರಿಸಿದರು.

ಬೆಂಗಳೂರು : ರಾಜ್ಯಸಭಾ ಸದಸ್ಯರಾಗಿ ಈರಣ್ಣ ಕಡಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಶುಕ್ರವಾರ ಬೆಂಗಳೂರಿನಲ್ಲಿ ಚುನಾವಣಾ ಅಧಿಕಾರಿಯಿಂದ ಪ್ರಮಾಣಪತ್ರ ಚುನಾವಣಾ ಅಧಿಕಾರಿಯಿಂದ ಪ್ರಮಾಣಪತ್ರ ಸ್ವೀಕರಿಸಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಮಾಜಿ ಸಚಿವ ಶಶಿಕಾಂತ ನಾಯಕ ಸೇರಿದಂತೆ ಇತರರು ಇದ್ದರು. ಈರಣ್ಣಾ ಕಡಾಡಿ ಅವರು ಶನಿವಾರ ಬೆಳಗಾವಿಗೆ ಬೆಳಿಗ್ಗೆ 10 ಗಂಟೆಗೆ ಆಮಿಸಿ, ನೇರ ಚನ್ನಮ್ಮ ವೃತ್ತದಲ್ಲಿರುವ ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ.

Read More »

ಕೊರೊನಾದಿಂದ ಸಂಕಷ್ಟದಲ್ಲಿರುವ ಗೋವಿನ ಜೋಳ ಬೆಳೆದಿರುವ ಬೆಳೆಗಾರರಿಗೆ ಸರಕಾರ 5000ರೂ.ಗಳ ಪರಿಹಾರದ ನೆರವು ಘೋಷಣೆ:ಸಚೇತಕ ಮಹಾಂತೇಶ ಕವಟಗಿಮಠ

ಚಿಕ್ಕೋಡಿ : ಕೊರೊನಾದಿಂದ ಸಂಕಷ್ಟದಲ್ಲಿರುವ ಗೋವಿನ ಜೋಳ ಬೆಳೆದಿರುವ ಬೆಳೆಗಾರರಿಗೆ ಸರಕಾರ 5000ರೂ.ಗಳ ಪರಿಹಾರದ ನೆರವು ಘೋಷಣೆ ಮಾಡಲಾಗಿದೆ ಎಂದು ವಿಧಾನ ಪರಿಷತ್‍ನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ  ಹೇಳಿದರು. ಪಟ್ಟಣದಲ್ಲಿರುವ ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ಶುಕ್ರವಾರ ನಡೆದ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ನಂತರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ 17000 ಗೋವಿನ ಜೋಳ ಬೆಳೆದ್ದಿದ್ದಾರೆ. ಕೃಷಿ ಇಲಾಖೆ ಗೋವಿನ ಜೋಳ ಬೆಳೆಗಾರರ ಯಾದಿ ತಯಾರಿಸಿದೆ. ಆ …

Read More »

ಲಾಕ್ ಡೌನ್: ಊರಿಗೆ ಹೊಗಲಾರದಕ್ಕೆ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಚಾಮರಾಜನಗರ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಊರಿಗೆ ಹೋಗಲಾಗದೆ ಹತಾಶೆಗೊಂಡಿದ್ದ ಕೇರಳದ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ. ಅಂಜುಂ (35) ಆತ್ಮಹತ್ಯೆ ಶರಣಾದ ವ್ಯಕ್ತಿ. ಕೇರಳದ ಮಲ್ಲಪ್ಪುರಂನ ನಿವಾಸಿ ಅಂಜುಂ ಇಲ್ಲಿನ ಕೆಎಸ್‍ಆರ್ ಟಿಸಿ ಬಳಿ ಇರುವ ಮಯೂರು ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದನು. ಆದ್ರೆ ಕೊರೊನಾದಿಂದ ಲಾಕ್ ಡೌನ್ ಘೋಷಣೆಯಾದ ಬಳಿಕ ಊರಿಗೆ ತೆರಳಲು ಆಗಲಿಲ್ಲ. ಇದರಿಂದ ಹತಾಶೆಗೊಂಡಿದ್ದ ವ್ಯಕ್ತಿಗುರುವಾರ ರಾತ್ರಿ ಹೋಟೆಲ್ ರೂಮ್ ನಲ್ಲಿ …

Read More »

ದುಷ್ಕರ್ಮಿಗಳು ಬೀದಿ ನಾಯಿಗಳಿಗೆ ವಿಷ ಹಾಕಿದ ಘಟನೆ: ಮೈಸೂರು

ಮೈಸೂರು: ದುಷ್ಕರ್ಮಿಗಳು ಬೀದಿ ನಾಯಿಗಳಿಗೆ ವಿಷ ಹಾಕಿದ ಘಟನೆ ದಾರುಣ ನಗರದಲ್ಲಿ ನಡೆದಿದ್ದು, ವಿಷ ಆಹಾರ ಸೇವಿಸಿದ 13 ನಾಯಿಗಳ ಪೈಕಿ 5 ನಾಯಿಗಳು ಸಾವನ್ನಪ್ಪಿ, 8 ನಾಯಿಗಳ ಸ್ಥಿತಿ ಗಂಭೀರವಾಗಿದೆ. ಇಲ್ಲಿನ ಕೆ. ಲೇಔಟ್ ನಲ್ಲಿ ರಾತ್ರಿ ಘಟನೆ ನಡೆದಿದೆ. ಸ್ಥಳೀಯ ಪ್ರಾಣಿದಯಾ ಸಂಘದ ಹೋರಾಟಗಾರರು ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳಿಗೆ ಆಗಾಗ ಚುಚ್ಚುಮದ್ದುಗಳನ್ನು ನೀಡಲಾಗುತ್ತಿತ್ತು. ಎಲ್ಲಾ ನಾಯಿಗಳು ಆರೋಗ್ಯಕರ ಹಾಗೂ ಸ್ನೇಹಯುತವಾಗಿದ್ದವು. ಮಕ್ಕಳನ್ನಾಗಲೀ, ವಾಹನಗಳ ಹಿಂದೆಯಾಗಲೀ …

Read More »

ಎಲ್ಲ ದಾಖಲೆ ಮುರಿದ ಕೊರೋನಾ ಪ್ರಕರಣಗಳು: ಜಾಗತಿಕ ಮಟ್ಟದಲ್ಲಿ 4 ನೇ ಸ್ಥಾನಕ್ಕೇರಿದ ಭಾರತ

ಹೊಸದಿಲ್ಲಿ: ಕೊರೋನಾ ಸೋಂಕು ಹರಡುವಿಕೆ ಬಹಳ‌ ಕಡಿಮೆ ಇದ್ದಾಗ ಲಾಕ್​ಡೌನ್​​ ಜಾರಿ ಮಾಡಿ, ಸೋಂಕು ಹರಡುವಿಕೆ ಹೆಚ್ಚಾದಾಗ ನಾಮಕಾವಸ್ಥೆಗೆ ಮಾತ್ರ ಲಾಕ್ ​ಡೌನ್​ ಜಾರಿಗೊಳಿಸಿದ ಪರಿಣಾಮ ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಿದೆ. ನಿನ್ನೆಯಷ್ಟೇ ಒಂದೇ ದಿನ ಎರಡು ದೇಶಗಳನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದ್ದ ಭಾರತದ ಕೊರೊನಾ ಪೀಡಿತರ ಸಂಖ್ಯೆ ಈಗ 3 ಲಕ್ಷದ ಗಡಿ ಬಳಿ ಬಂದಿದೆ. ಭಾರತದಲ್ಲಿ ಮೇ 30 ರಿಂದ ಪ್ರತಿನಿತ್ಯ 8 …

Read More »

ಧರಣಿ ನಿರತ ಬೀದಿ ವ್ಯಾಪಾರಾಸ್ಥರಿಗೆ ನಗರಸಭೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ ಅವರಿಂದ ಭರವಸೆ

ಗೋಕಾಕ: ಧರಣಿ ನಿರತ ಬೀದಿ ವ್ಯಾಪಾರಾಸ್ಥರಿಗೆ ನಗರಸಭೆ ಮುಖ್ಯಾಧಿಕಾರಿ ಶಿವಾನಂದ ಹಿರೇಮಠ ಸೂಕ್ತ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ನಗರಸಭೆ ಕಚೇರಿಯಲ್ಲಿ ಪ್ರತಿಭಟನಾನಿರತ ವ್ಯಾಪಾರಸ್ಥರ ಮನವೊಲಿಸಿದ ಮುಖ್ಯಾಧಿಕಾರಿ, ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ನಿಮ್ಮ ವ್ಯಾಪಾರ ಸುಗಮವಾಗಿ ನಡೆಸಲು ಅವಕಾಶ ಮಾಡಿಕೊಡುತ್ತೇನೆ ಸೂಕ್ತ ಭರವಸೆ ನೀಡಿದರು. ಪಾರ್ಕಿಂಗ್ ವ್ಯವಸ್ಥೆಯಿಂದ ಹೀಗಾಗಿರಬೇಕು ಎಂದು ಸಮಜಾಯಷಿ ಹೇಳಿದ ಇನ್ನೆರಡು ದಿನಗಳಲ್ಲಿ ಎಲ್ಲ ಸರಿಪಡುತ್ತೇನೆ ಎಂದರು. ಕೊರೋನಾ ವಿರುದ್ಧ ಹೋರಾಟಕ್ಕೆ ನಿಮ್ಮ ಸಹಕಾರವು ಅಗತ್ಯವಿದೆ. …

Read More »