Breaking News

Daily Archives: ಜೂನ್ 25, 2020

10ನೇ ತರಗತಿ ಪರಿಕ್ಷೆಗೆ ಬರುವ ಸುಮಾರು 450 ವಿಧ್ಯಾರ್ಥಿ ಗಳಿಗೆ ಸ್ಯಾನಿಟೆಜರ ಮತ್ತು ನೀರು ಕೊಡುವ ಮುಕಾಂತರ ಚಾಲನೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಗೋಕಾಕ ತಾಲೂಕಾ ಅಧ್ಯಕ್ಷರು ಸಂತೋಷ ಕಂಡ್ರಿ ಇವರ ನೇತೃತ್ವದಲ್ಲಿ 25/06/2020 ರಂದು10ನೇ ತರಗತಿ ಪರಿಕ್ಷೆಗೆ ಬರುವ ಸುಮಾರು 450 ವಿಧ್ಯಾರ್ಥಿ ಗಳಿಗೆ ಸ್ಯಾನಿಟೆಜರ ಮತ್ತು ನೀರು ಕೊಡುವ ಮುಕಾಂತರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅಧಿಕ್ಷಕರಾದ ಶ್ರೀ ಬಿ.ಬಿ.ಕಾರಗಿ, ವೈದ್ಯಾಧಿಕಾರಿ ಶ್ರೀ ಸಿ.ಕೆ.ಪಾಟೀಲ ಹಾಗೂ ಶಿಕ್ಷಕಿಯರು.ಗೈಡ್ಸ್ ಪದಾಧಿಕಾರಿ ಶ್ರೀ ಮತಿ ಎಸ್.ಎಸ್.ಪೂಜೇರಿ ಈ ಸಂದರ್ಭ ಕರಿತು ಮಾತ ನಾಡಿದರು. ಆಶಾಕಾರ್ಯಕರ್ತೆಯರು,ಆರೋಗ್ಯ ಇಲಾಖೆಯವರು …

Read More »

ಆಶಾ ಕಾರ್ಯಕರ್ತೆಯಿಂದ ಸ್ಟಾಫ್ ನರ್ಸ್ ಗೂ ತಗುಲಿದ ಕೊರೊನಾ

ಹಾವೇರಿ: ಜಿಲ್ಲೆಯಲ್ಲಿ ಇವತ್ತು 10 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 54ಕ್ಕೇರಿಕೆಯಾಗಿದೆ. ಸವಣೂರು ಪಟ್ಟಣದಲ್ಲಿ ಸ್ಟಾಫ್ ನರ್ಸ್ ಸೇರಿದಂತೆ ಏಳು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸವಣೂರು ಪಟ್ಟಣದ 23 ವರ್ಷದ ಗರ್ಭಿಣಿಗೆ ರೋಗಿ 8699 ಪ್ರಾಥಮಿಕ ಸಂಪರ್ಕದಿಂದ ಏಳು ಜನರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಇನ್ನು ಸವಣೂರು ತಾಲೂಕಿನ ಕಾರಡಗಿ ಗ್ರಾಮದ 38 ವರ್ಷದ ಆಶಾ ಕಾರ್ಯಕರ್ತೆ (ರೋಗಿ-8700)ಯ ಸಂಪರ್ಕದಿಂದ ಸ್ಟಾಫ್ ನರ್ಸ್ ಗೆ ಕೊರೊನಾ ವಕ್ಕರಿಸಿದೆ. …

Read More »

ಹೋಟೆಲ್, ಹಜ್ ಭವನದಲ್ಲಿ ಚಿಕಿತ್ಸೆ – ಸಿಎಂ ಸಭೆಯ ಮುಖ್ಯಾಂಶಗಳು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ನೇತೃತ್ವದಲ್ಲಿ ಇಂದು ಬೆಂಗಳೂರು ನಗರದಲ್ಲಿ ಕೊರೊನಾ ಪರಿಸ್ಥಿತಿ ಪರಿಶೀಲನೆ ಕುರಿತು ಸಭೆ ಮಾಡಲಾಯ್ತು. ಬೆಂಗಳೂರಿನಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಸೋಂಕು ಹೆಚ್ಚುತ್ತಿದೆ. ಮಹಾಮಾರಿ ಕೊರೊನಾ ಬೆಂಗಳೂರಿನಲ್ಲಿ ಸಮುದಾಯದ ಮಟ್ಟದಲ್ಲಿ ಸ್ಫೋಟಗೊಂಡಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಹೊಸ ಹೊಸ ಏರಿಯಾಗಳಿಗೆ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತಿದೆ. ಹೀಗಾಗಿ ಇಂದು ನಡೆದ ಸಭೆಯಲ್ಲಿ ಕೋವಿಡ್ 19 …

Read More »

ಸುಲಲಿತ ವ್ಯವಹಾರಕ್ಕೆ ನೆರವಾಗಲಿದೆ ಈ ತಿದ್ದುಪಡಿ ಕಾಯ್ದೆ

ಬೆಂಗಳೂರು: ಉದ್ಯಮ ಸ್ಥಾಪನೆಗೆ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ‌ ಸರ್ಕಾರ, “ಮೊದಲು ಉದ್ದಿಮೆ ಆರಂಭಿಸಿ, 3 ವರ್ಷದ ಬಳಿಕ ಪರವಾನಗಿ ಪಡೆಯುವ ವಿಧಾನ” ಜಾರಿಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ ‘ಕರ್ನಾಟಕ ಕೈಗಾರಿಕಾ ಸೌಲಭ್ಯ ಕಾಯ್ದೆ- 2002’ಕ್ಕೆ ತಿದ್ದುಪಡಿ ತರಲು ಗುರುವಾರ ಸಚಿವ ಸಂಪುಟ‌ ಒಪ್ಪಿಗೆ ನೀಡಿದೆ. ಉದ್ಯಮಗಳಿಗೆ ಅನುಕೂಲ ಒದಗಿಸುವ ಜತೆಗೆ ಹೊಸ ಹೂಡಿಕೆಗಳಿಗೆ ಅನುಕೂಲವಾಗುವಂತೆ ನಿಯಂತ್ರಕ ಚೌಕಟ್ಟನ್ನು ಸರಳಗೊಳಿಸಲು ರಾಜ್ಯ ಸರ್ಕಾರ, ಕರ್ನಾಟ ಕೈಗಾರಿಕ …

Read More »

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 2446 ವಿದ್ಯಾರ್ಥಿಗಳು ಗೈರಾಗಿದ್ದರು‌.

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ SSLC ಪರೀಕ್ಷೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಸುಗಮವಾಗಿ ನಡೆಯಿತು. ಬೆಳಗಾವಿ ,ಹಾಗು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 2446 ವಿದ್ಯಾರ್ಥಿಗಳು ಗೈರಾಗಿದ್ದರು‌. ಬೆಳಗಾವಿ ಶೀಕ್ಷಣಿಕ ಜಿಲ್ಲೆಯಲ್ಲಿ 32,356 ವಿದ್ಯಾರ್ಥಿಗಳ ಹೆಸರು ನೊಂದಣಿಯಾಗಿತ್ತು,ಆದರೆ 31,568 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು,788 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ,40,436 ವಿದ್ಯಾರ್ಥಿಗಳ ಹೆಸರು ನೊಂದಣಿಯಾಗಿತ್ತು,ಅದರಲ್ಲಿ 38,778 ವಿದ್ಯಾರ್ಥಿಗಳು ಪರೀಕ್ಷೆ ಬರೆದರು,1658 ವಿದ್ಯಾರ್ಥಿಗಳು ಗೈರಾಗಿದ್ದರು . ಬೆಳಗಾವಿ,ಹಾಗೂ ಚಿಕ್ಕೋಡಿ ಶೈಕ್ಷಣಿಕ …

Read More »

S.S.L.C.  ಪರೀಕ್ಷೆ ಮುಗಿಸಿ‌ ಬೈಕ್​ನಲ್ಲಿ ತಮ್ಮೂರಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಲಾರಿ ಡಿಕ್ಕಿ

ಗದಗ: ಎಸ್ಎಸ್ಎಲ್ ಸಿ  ಪರೀಕ್ಷೆ ಮುಗಿಸಿ‌ ಬೈಕ್​ನಲ್ಲಿ ತಮ್ಮೂರಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಲಾರಿ ಡಿಕ್ಕಿಯಾಗಿ ಮೂವರು ಗಂಭೀರ ಗಾಯವಾಗಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಬಳಿ  ಸಂಭವಿಸಿದೆ. ಸಿದ್ದಪ್ಪ ತಳವಾರ, ಈರಣ್ಣ ಬಡಿಗೇರ ಹಾಗೂ ಮೈಲಾರಿ ಯಳವತ್ತಿ ಎಂಬ  ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು, ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಎಸ್ಎಸ್ಎಲ್ ಸಿ  ಪರೀಕ್ಷೆ ನಿಮಿತ್ತ ಪಕ್ಕದ ಕಲಕೇರಿ‌ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮುಗಿಸಿದ ಮೂವರು ವಿದ್ಯಾರ್ಥಿಗಳು ಬೈಕ್​ನಲ್ಲಿ …

Read More »

ತಬ್ಬಲಿಗಳಿಗಾಗಿ ಹಿಕೆ ಹಳ್ಳಿ ಹಿರಿಯರು ಹಿರಿತನ,ಕೂಡ್ಲಿಗಿ ಪೊಲೀಸರು ರಕ್ಷಣೆ ತೋರಬೇಕು

-ಬಳ್ಳಾರಿ :ಜಿಲ್ಲೆ ಸಂಡೂರು ತಾಲೂಕು ಕೂಡ್ಲಿಗಿ ಪೊಲೀಸ್ ಠಾಣೆವ್ಯಾಪ್ತಿಯ ಹಿರೀಕೆರಿಯಾಗಿನಹಳ್ಳಿಯಲ್ಲಿ, ಕೆಲ ತಂಗಳ ಹಿಂದೆ ಜರುಗಿದೆ ಎನ್ನಲಾದ ಕೊಲೆಗೆ ಮೂರುಮಕ್ಕಳ ತಾಯಿ ಬಲಿಯಾಗಿದ್ದಾಳೆ.ಅವಳನ್ನು ಕೊಲೆಗೈದ ಪ್ರಮುಖ ಆರೋಪಿಯಂದು ಹೇಳಲಾಗುವ,ಅವಳ ಗಂಡ ಜೈಲುಪಾಲಾಗಿದ್ದಾನೆ ಹೀಗಾಹಿ ಅವಳ ಮೂವರು ಮಕ್ಕಳು ಅಕ್ಷರಸಃ ತಬ್ಬಲಿಯಾಗಿವೆ.ಸಧ್ಯ ಅವರನ್ನು ಮೃತಳ ತವರು ಮನೆಯವರೇ ಮೂವರು ಕಂರಮ್ಮಗಳನ್ನು ಲಾಲನೆ ಪಾಲನೆ ಮಾಡುತ್ತಿದ್ದಾರೆ.ಮೃತಳ ತಾಯಿಯೇ ಮಕ್ಕಳಿಗೆ ತಾಯಿಯಂತೆ ಪೋಷಣೆ ನೀಡುತ್ತಿದ್ದಾಳೆ.   ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ತಂದೆ ರಂಗಪ್ಪ,ತಾಯಿರತ್ನಮ್ಮ,ಸಹೋದರ ನಾಗರಾಜ …

Read More »

ಮಾಜಿ ಪ್ರಧಾನಿ ದೇವೇಗೌಡ ಹೊರಡಿಸಿರುವ ಪತ್ರಿಕಾ ಪ್ರಕಟಣೆ.

ಬೆಂಗಳೂರು (ಜೂನ್‌ 25); ರಾಜ್ಯದಲ್ಲಿ ಜೆಡಿಎಸ್‌ ಕಾರ್ಯಕರ್ತರಿಗೆ ಬಿಜೆಪಿ ಸಚಿವರುಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಮನೆಯ ಎದುರು ಧರಣಿ ನಡೆಸಲು ಮುಂದಾಗಿದ್ದಾರೆ. ಜೂನ್‌.29 ರಂದು ಧರಣಿ ನಡೆಸಲಿರುವುದಾಗಿ ಸ್ವತಃ ಸಿಎಂ ಗೆ ಎಚ್ಚರಿಕೆ ಪತ್ರ ರವಾನಿಸಿದ್ದಾರೆ.ಸಿಎಂ ಗೆ ಪತ್ರ ಬರೆದಿರುವ ದೇವೇಗೌಡ, “ಸಚಿವ ಕೆ.ಸಿ. ನಾರಾಯಣಗೌಡ ಚುನಾವಣಾ ವೈಷಮ್ಯದ ಹಿನ್ನೆಲೆ ಕೆ.ಆರ್ ಪೇಟೆಯ ಜೆಡಿಎಸ್ ಕಾರ್ಯಕರ್ತ ಹೆಚ್.ಟಿ. …

Read More »

ಕಳೆದ ತಿಂಗಳು ಪಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ‘ಕೊರೋನಾ ವೈರಸ್‌’ ಕಾರಣ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ.

ಇಸ್ಲಾಮಾಬಾದ್(ಜೂ.25): ಕಳೆದ ತಿಂಗಳು ಪಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ‘ಕೊರೋನಾ ವೈರಸ್‌’ ಕಾರಣ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ. ಪಾಕ್‌ ವಿಮಾನ ದುರಂತದಿಂದ ಅನೇಕರನ್ನು ಕಾಪಾಡಿದ ನಮಾಜ್‌! ಹೌದು, ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ (ಪಿಐಎ)ಗೆ ಸೇರಿದ ವಿಮಾನ ಚಲಾಯಿಸುತ್ತಿದ್ದ ಪೈಲಟ್‌ಗಳು ಅತಿಯಾದ ವಿಶ್ವಾಸದಲ್ಲಿ ವಿಮಾನ ಚಲಾಯಿಸುತ್ತಲೇ ಕೆಲಸದ ಬಗ್ಗೆ ಗಮನ ಕೊಡದೆ ಕೊರೋನಾ ಬಗ್ಗೆ ಚರ್ಚೆಯಲ್ಲಿ ಮುಳುಗಿದ್ದರಿಂದಲೇ ಈ ವಿಮಾನ ದುರಂತ ಸಂಭವಿಸಿದೆ ಎಂದು ಪಾಕಿಸ್ತಾನ ವಿಮಾನಯಾನ ಸಚಿವ …

Read More »

ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಾಷ್ ತನ್ನದೇ ಆದ ವಿಶಿಷ್ಟ ರೀತಿಯ ಮಾಸ್ಕ್(ರಕ್ಷಣಾ ಮುಖಗವಸು) ವಿನ್ಯಾಸಗೊಳಿಸಿದೆ..?

ಬೆಂಗಳೂರು(ಜೂ.25): ಕೊರೋನಾವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಾಷ್ ತನ್ನದೇ ಆದ ವಿಶಿಷ್ಟ ರೀತಿಯ ಮಾಸ್ಕ್(ರಕ್ಷಣಾ ಮುಖಗವಸು) ವಿನ್ಯಾಸಗೊಳಿಸಿದೆ. ಸಂಪೂರ್ಣ ಸ್ವಯಂಚಾಲಿತ ರಕ್ಷಣಾ ಮಾಸ್ಕ್ ಉತ್ಪಾದನಾ ವ್ಯವಸ್ಥೆಯನ್ನು ಬಾಷ್ ತನ್ನ ಬೆಂಗಳೂರಿನ ನಾಗನಾಥಪುರದಲ್ಲಿರುವ ಘಟಕದಲ್ಲಿ ಆರಂಭಿಸಿದೆ. ಇದರೊಂದಿಗೆ ದಿನಕ್ಕೆ 1,00,000 ದಷ್ಟು ಮಾಸ್ಕ್ ಗಳನ್ನು ಉತ್ಪಾದಿಸುವ ಗುರಿಯನ್ನು ಬಾಷ್ ಹೊಂದಿದೆ. ಈ ಮೂಲಕ ಭಾರತದಲ್ಲಿ ದೊಡ್ಡ ಮಟ್ಟದ ಸಮುದಾಯಕ್ಕೆ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಈ ಮಾಸ್ಕ್ ತಯಾರಿಕೆಯಿಂದ ಮಾರುಕಟ್ಟೆಯಲ್ಲಿ ಮಾಸ್ಕ್ …

Read More »