Breaking News

ಸರ್ಕಾರಕ್ಕೆ 4,416 ಕೋಟಿ ರೂ. ಅಬಕಾರಿ ರಾಜಸ್ವ ಸಂಗ್ರಹ: ಕಳ್ಳಭಟ್ಟಿ ಮುಕ್ತ ಕಲಬುರಗಿ ಜಿಲ್ಲೆಗೆ ಪಣ, ಗಡಿಯಲ್ಲಿ ಕಟ್ಟೆಚ್ಚರ

Spread the love

ಕಲಬುರಗಿ: ಜಿಲ್ಲೆಯಲ್ಲಿ ಅಕ್ರಮ ಕಳ್ಳಭಟ್ಟಿ ಮತ್ತು ಕಲಬೆರೆಕೆ ಸೇಂದಿ ಹಾಗೂ ಮಾದಕ ವಸ್ತುಗಳ (ಗಾಂಜಾ ಮತ್ತು ಇತರೆ ವಿಷಪೂರಿತ) ತಯಾರಿಕೆ, ಸಾಗಾಣಿಕೆ, ಸಂಗ್ರಹಣೆ ಮತ್ತು ಮಾರಾಟಗಳಂತಹ ಕೃತ್ಯಗಳ ನಿಯಂತ್ರಣಕ್ಕೆ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಿ ಕಳ್ಳಭಟ್ಟಿ ಮುಕ್ತ ಕಲಬುರಗಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಗಸ್ತು, ದಾಳಿ ತೀವ್ರಗೊಳಿಸಿದೆ.

ಕಳ್ಳಭಟ್ಟಿ ನಿಯಂತ್ರಣಕ್ಕೆ ಪ್ರತಿ ತಿಂಗಳು ಪರೇಡ್ ಮಾಡಲಾಗುತ್ತಿದ್ದು, ಇಲ್ಲಿ ಗೌಪ್ಯ ದಾಳಿಗೆ ರೂಪುರೇಷೆ ಹಾಕಿಕೊಂಡು ನಿರಂತರ ದಾಳಿ ಮಾಡಲಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಕಳ್ಳಭಟ್ಟಿ ಸರಾಯಿಗೆ ಸಂಬಂಧಿಸಿದಂತೆ 46 ಮತ್ತು ಅಕ್ರಮ ಸೇಂದಿ ಮಾರಾಟದ 94 ಪ್ರಕರಣಗಳನ್ನು ದಾಖಲಿಸಿ ಅನಧಿಕೃತ ಕಾನೂನು ಬಾಹಿರ ಚಟುವಟಿಕೆಯಲ್ಲಿ ನಿರತರಾದವರಿಗೆ ಬಿಸಿ ಮುಟ್ಟಿಸಲಾಗಿದೆ. ಅಬಕಾರಿ ಇಲಾಖೆಯು ರಾಜಸ್ವ ಸಂಗ್ರಹಿಸುವುದರ ಜೊತೆಗೆ ಅಬಕಾರಿ ಅಕ್ರಮ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುತ್ತಿದೆ. ವಿಶೇಷವಾಗಿ ಗಾಂಜಾ ಮತ್ತು ಇತರೆ ಮಾದಕ ವಸ್ತುಗಳನ್ನು ಮಾರಾಟ ಹಾಗೂ ಸೇವನೆ ಪ್ರಕರಣ ಪತ್ತೆ ಹಚ್ಚಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಕೇಸ್ ದಾಖಲಿಸುತ್ತಿದೆ.

ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಾಲಾ-ಕಾಲೇಜುಗಳಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ಕಾನೂನಿನ ಅರಿವು ಮೂಡಿಸಲು ಸಂವಾದ, ವಿಚಾರ ಸಂಕಿರಣ, ಜಾಥಾದಂತಹ ಕಾರ್ಯಕ್ರಮಗಳನ್ನು ನಿರಂತರ ಹಮ್ಮಿಕೊಳ್ಳುವ ಮೂಲಕ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಪೊಲೀಸ್, ಅಬಕಾರಿ, ಕಂದಾಯ, ಶಿಕ್ಷಣ ಇಲಾಖೆ ಒಳಗೊಂಡ ಸ್ಥಾಯಿ ಸಮಿತಿ ಸಭೆ ನಡೆಸಿ ಜಿಲ್ಲೆಯಲ್ಲಿ ಅಕ್ರಮ ಅಬಕಾರಿ ಚಟುವಟಿಕೆಗೆ ಕಡಿವಾಣ ಹಾಕಲು ಸೂಚನೆ ನೀಡಿದ್ದಾರೆ. ಇದಲ್ಲದೆ ಖುದ್ದು ಚಿಣಮಗೇರಾ ಗ್ರಾಮ ಹಾಗೂ ಹವಳಗಾ ಗ್ರಾಮದಲ್ಲಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗೌಪ್ಯ ಮಾಹಿತಿ ಆಧರಿಸಿ ದಾಳಿ: ಕಳೆದ 2023-24 ಮತ್ತು 2024-25ನೇ (ಜೂನ್​ – ಜುಲೈ) ಸಾಲಿನಲ್ಲಿ ಗೌಪ್ಯ ಮಾಹಿತಿ ಆಧರಿಸಿ ದಾಳಿ ನಡೆಸಿ 382 ಘೋರ ಪ್ರಕರಣಗಳು, 9 ಎನ್.ಡಿ.ಪಿ.ಎಸ್., 846 ಸೌಮ್ಯ (ಬಿ.ಎಲ್.ಎಸ್) ಹಾಗೂ 936 ಕಲಂ –ಎ ಪ್ರಕರಣಗಳು ದಾಖಲಿಸಿ 10,363 ಲೀ. ಮದ್ಯ, 963 ಲೀ. ಹೊರ ರಾಜ್ಯದ ಮದ್ಯ, 38,182 ಲೀ. ಬೀಯರ್, 197 ಲೀ. ಕಳ್ಳಭಟ್ಟಿ, 4,646 ಲೀ. ಕಲಬೆರೆಕೆ ಸೇಂದಿ, 1,872 ಲೀ. ಬೆಲ್ಲದ ಕೊಳೆ, 8.08 ಕೆ.ಜಿ. ಗಾಂಜಾ ಮುದ್ದೆಮಾಲು ವಶಪಡಿಸಿಕೊಂಡಿದ್ದು, ಈ ಅಕ್ರಮಗಳ ಸಾಗಾಟಕ್ಕೆ ನೆರವಾದ 131 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇನ್ನು ಕಲಂ 43ರಡಿ ಕಳೆದ ಎರಡು ವರ್ಷದಲ್ಲಿ 135 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.


Spread the love

About Laxminews 24x7

Check Also

ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಆನಂದ್ ನಗರದಲ್ಲಿ ೩೦ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎನ್.ಸಿ.ಡಿ.ಎಫ್.ಐ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿದ ಕೇಂದ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ