ವಿಜಯಪುರ: ಜಿಲ್ಲೆಯ ಆಲಮೇಲದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಆಯಂಬ್ಯುಲೆನ್ಸ್ ಸಿಗದೇ ಒಂದೂವರೆ ಗಂಟೆ ಕಾಲ ಬೀದಿಯಲ್ಲೇ ಜ್ವರದಿಂದ ತೀವ್ರವಾಗಿ ನರಳಿದ ಘಟನೆ ನಡೆದಿದೆ. ಶಂಕರ್ ಜಂಬಗಿ(50) ಜ್ವರದಿಂದ ನರಳಾಡಿದ ರೋಗಿ.
ಸ್ಥಳೀಯವಾಗಿ ಚಿಕಿತ್ಸೆ ಸಿಗದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಲು ಆಯಂಬ್ಯುಲೆನ್ಸ್ಗಾಗಿ ಕಾದರೂ ಒಂದೂವರೆ ಗಂಟೆಗಳ ಕಾಲ ಆಯಂಬುಲೆನ್ಸ್ ಬಂದಿಲ್ಲ. ನಂತರ ಸ್ಥಳೀಯ ಯುವಕರು ಕರೆಮಾಡಿ ಆಯಂಬುಲೆನ್ಸ್ ಕರೆಸಿ ಪತ್ನಿ ಶೋಭಾ ಜೊತೆ ರೋಗಿಯನ್ನ ಸಿಂದಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.