ಮುಂಬೈ: ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಮಹಿಳೆಯೋರ್ವಳ ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ್ ಸಿಂಗ್ (39) ಬಂಧಿತ ಆರೋಪಿ. ಮುಂಬೈನ ಅಗ್ರಿಪಾಡಾ ಪ್ರದೇಶದ ಸಾರ್ವಜನಿಕ ಶೌಚಾಲಯದಲ್ಲಿ ಬುಧವಾರ ಘಟನೆ ನಡೆದಿದ್ದು, ಗುರುವಾರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಹಿಳೆ ಬುಧವಾರ ಮಧ್ಯಾಹ್ನ ಸಾರ್ವಜನಿಕ ಶೌಚಾಲಯಕ್ಕೆ ಹೋಗಿದ್ದರು. ಈ ವೇಳೆ ಪಕ್ಕದ ಶೌಚಾಲಯದಲ್ಲಿದ್ದ ಪ್ರಶಾಂತ್ ಸಿಂಗ್ ತನ್ನ ಮೊಬೈಲ್ ಅನ್ನು ಶೌಚಾಲಯದ ಕಿಟಕಿಯ ಬಳಿ ಇಟ್ಟಿದ್ದ. ಆದರೆ ಮಹಿಳೆ ಮೊಬೈಲ್ ಅನ್ನು ಗುರುತಿಸಿ ಗಾಬರಿಗೊಂಡಿದ್ದರು. ತಕ್ಷಣವೇ ಮೊಬೈಲ್ ಕಿತ್ತುಕೊಂಡು ಅಲ್ಲಿಂದ ಹೊರ ಬಂದರು.
ಮೊಬೈಲ್ ಕಿತ್ತುಕೊಳ್ಳುತ್ತಿದ್ದಂತೆ ಪಕ್ಕದ ಶೌಚಾಲಯದಲ್ಲಿ ಅಡಗಿಕೊಂಡಿದ್ದ ಪ್ರಶಾಂತ್ ಸಿಂಗ್ ಹೊರಗೆ ಬಂದು ಮೊಬೈಲ್ ಕೊಡುವಂತೆ ಮಹಿಳೆಗೆ ಒತ್ತಾಯಿಸಿದ್ದ. ಆದರೆ ಅವರು ಘಟನೆ ಬಗ್ಗೆ ತನ್ನ ಸಹೋದರ ಮತ್ತು ಪ್ರದೇಶದ ಇತರ ನಿವಾಸಿಗಳಿಗೆ ತಿಳಿಸಿದ್ದರು. ಈ ವೇಳೆ ಫೋನ್‍ನಲ್ಲಿ ಮಹಿಳೆ ವಿಡಿಯೋ ಕೂಡ ಸಿಕ್ಕಿದೆ. ತಕ್ಷಣವೇ ಮೊಬೈಲ್ ಪೊಲೀಸರಿಗೆ ಒಪ್ಪಿಸಿ ದೂರು ನೀಡಿದ್ದರು.