Breaking News

ಮುಸ್ಲಿಂ ಸಮಾಜ ಬಾಂಧವರು ಸರಕಾರದ ನಿರ್ದೇಶನಗಳನ್ನು ಪಾಲಿಸಬೇಕು : ಸಚಿವ ರಮೇಶ ಜಾರಕಿಹೊಳಿ

Spread the love

ಗೋಕಾಕ :ಮುಸ್ಲಿಂ ಸಮಾಜ ಬಾಂಧವರು ಸರಕಾರದ ನಿರ್ದೇಶನಗಳನ್ನು ಪಾಲಿಸುವದರೊಂದಿಗೆ ಶಾಂತಿಯುತವಾಗಿ ರಂಜಾನ್ ಹಬ್ಬವನ್ನು ಆಚರಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು

ರವಿವಾರದಂದು ನಗರದ ತಮ್ಮ ಗೃಹ ಕಛೇರಿಯಲ್ಲಿ ಮುಸ್ಲಿಂ ಸಮಾಜದ ಮುಖಂಡರೊಂದಿಗೆ ಮತನಾಡುತ್ತಾ ಸಮಾಜಿಕ ಅಂತರವನ್ನು ಕಾಯ್ದುಕೊಂಡು ಕೊರೋನಾ ವೈರಸ ಹರಡದಂತೆ ಮುಂಜಾಗೃತ ಕ್ರಮವನ್ನು ಪಾಲಿಸುವಂತೆ ಕೋರಿದರು
ಇದೇ ಸಂದರ್ಭದಲ್ಲಿ ರಂಜಾನ ತಿಂಗಳಲ್ಲಿ ಮಸೀದಿಯಲ್ಲಿ ಆಜಾನ ಮತ್ತು ರೋಜಾ ನಿಯತಗಳನ್ನು ಹೇಳಲು ಅನುಮತಿ ನೀಡುವಂತೆ ಮುಸ್ಲಿಂ ಮುಖಂಡರು ಸಚಿವ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಿದರು . ಮನವಿ ಸ್ವೀಕರಿಸಿದ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ತಿಳಿಸುವದಾಗಿ ಹೇಳಿದರು .

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಎಸ್.ಎ ಕೊತವಾಲ , ಅಮೀರಸಾಬ ಹಾಜಿ ಕುತಬುದ್ದೀನ ಬಸ್ಸಾಪುರ , ಅಬ್ಬಾಸ ದೇಸಾಯಿ, ಮೋಸಿನ ಖೋಜಾ , ಜಾವೇದ ಗೋಕಾಕ, ಜಾಕೀರ ನಾಯಿಕ ಸೇರಿದಂತೆ ಇತರರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಮೂಡಲಗಿ , ಗೋಕಾಕ ತಾಲ್ಲೂಕು ಸೇರಿ ೫೧೯.೭೨ ಕೋಟಿ ರೂಪಾಯಿಗಳನ್ನು ಶೂನ್ಯ ಬಡ್ಡಿದರದಲ್ಲಿ ರೈತರಿಗೆ ವಿತರಿಸಿದ DCCBANK: ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ – ರೈತರ ಶ್ರೆಯೋಭಿವೃದ್ಧಿಗಾಗಿ ರೈತಮಿತ್ರನಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಮೂಡಲಗಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ