Breaking News
Home / Madikeri / 1984 ಅಮೃತಸರ ಬ್ಲೂ ಸ್ಟಾರ್ ಆಪರೇಷನ್ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್ ಜನರಲ್ ಸೋಮಣ್ಣ ವಿಧಿವಶ

1984 ಅಮೃತಸರ ಬ್ಲೂ ಸ್ಟಾರ್ ಆಪರೇಷನ್ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್ ಜನರಲ್ ಸೋಮಣ್ಣ ವಿಧಿವಶ

Spread the love

ಮಡಿಕೇರಿ: 1984 ಅಮೃತಸರ ಬ್ಲೂ ಸ್ಟಾರ್ ಆಪರೇಷನ್ ನೇತೃತ್ವ ವಹಿಸಿದ್ದ ಅಂದಿನ ಭಾರತೀಯ ಸೇನಾ ಪಡೆಯ ಉಪ ಮುಖ್ಯಸ್ಥರಾಗಿದ್ದ ಕೊಡಗಿನ ಹೆಮ್ಮೆಯ ಕೋದಂಡ ಲೆ.ಜ. ಸೋಮಣ್ಣ (92) ವಿರಾಜಪೇಟೆಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಭಾರತೀಯ ಸೇನೆಯಲ್ಲಿ ಉತ್ತಮ ಹೆಸರು ಪಡೆದಿದ್ದ ಸೋಮಣ್ಣ ಅವರು ತಮ್ಮ ನಿವಾಸದಲ್ಲಿ ಇಂದು ವಿಧಿವಶರಾಗಿದ್ದಾರೆ.

ಮೃತ ಸೋಮಣ್ಣ ಅವರು ಪತ್ನಿ ಸೇರಿದಂತೆ ಅಮೇರಿಕಾದಲ್ಲಿರುವ ಪುತ್ರ ಡಾ.ನಿವೇದ್ ಹಾಗೂ ಪುತ್ರಿ ಮುಕ್ಕಾಟಿರ ಶರನ್ ಅವರನ್ನು ಅಗಲಿದ್ದಾರೆ. ಡೆಪ್ಯುಟಿ ಚೀಫ್ ಆಫ್ ಇಂಡಿಯನ್ ಆರ್ಮಿ ಆಗಿ ನಿವೃತ್ತರಾಗಿದ್ದರು. ಸೋಮಣ್ಣ ಅವರ ಅಂತ್ಯಕ್ರಿಯೆ ಜೂನ್ 14 ರಂದು ವಿರಾಜಪೇಟೆಯಲ್ಲಿ ನಡೆಯಲಿದೆ.


ಕೋವಿಡ್-19 ಸಮಸ್ಯೆ ಇಲ್ಲದಿದ್ದಲ್ಲಿ ಇವರಿಗೆ ಸೇನಾ ಗನ್ ಕ್ಯಾರೇಜ್‍ನೊಂದಿಗೆ ಆರ್ಮಿ ಕಮಾಂಡರ್ ಅವರು ಆಗಮಿಸಿ ಗೌರವ ಸೂಚಿಸಬೇಕಿತ್ತು. ಆದರೆ ಕೋವಿಡ್-19 ಕಾರಣದಿಂದಾಗಿ ಓರ್ವ ಆರ್ಮಿ ಆಫೀಸರ್, ಇಬ್ಬರು ಜೆಸಿಒ ಹಾಗೂ ಇನ್ನಿತರ ಕೆಲವು ಅಧಿಕಾರಿಗಳಷ್ಟೇ ಆಗಮಿಸಿ ಗೌರವ ಸೂಚಿಸುವುದಾಗಿ ಜಿಲ್ಲೆಯ ನಿವೃತ್ತ ಸೇನಾಧಿಕಾರಿ ಮೇಜರ್ ನಂದಾ ನಂಜಪ್ಪ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ