ಹೊಸದಿಲ್ಲಿ: ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನದ ಭವ್ಯ ಅಡಿಪಾಯ ಹಾಕುವ ಸಮಾರಂಭ ನಡೆಯುತ್ತಿರುವ ದಿನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಭು ಶ್ರೀ ರಾಮನ ಅನೇಕ ಶ್ರೇಷ್ಠ ಗುಣಗಳನ್ನು ಒಳಗೊಂಡ ಟ್ವೀಟ್ ವೊಂದನ್ನು ಮಾಡಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ, ಪ್ರಭು ರಾಮ್ ಅತ್ಯುತ್ತಮ ಮಾನವೀಯ ಮೌಲ್ಯಗಳ ಸಾಕಾರ ಮೂರ್ತಿಯಾಗಿದ್ದಾರೆ, “ಅವರು ನಮ್ಮ ಹೃದಯದ ಆಳದಲ್ಲಿ ನೆಲೆಸಿರುವ ಮಾನವೀಯತೆಯ ಚೈತನ್ಯ” ಎಂದು ಹೇಳಿದ್ದಾರೆ.
“ರಾಮ್ ಎಂದರೆ ಪ್ರೀತಿ, ಅವನು ಎಂದಿಗೂ ದ್ವೇಷದಲ್ಲಿ ಇರಲು ಸಾಧ್ಯವಿಲ್ಲ. ರಾಮ್ ಎಂದರೆ ಸಹಾನುಭೂತಿ, ಅವನು ಎಂದಿಗೂ ಕ್ರೌರ್ಯದ ಪಾತ್ರನಾಗಲು ಸಾಧ್ಯವಿಲ್ಲ. ರಾಮ್ ಎಂದರೆ ನ್ಯಾಯ, ಅವನು ಎಂದಿಗೂ ಅನ್ಯಾಯಕ್ಕೆ ಸಾಕ್ಷಿಯಾಗಲು ಸಾಧ್ಯವಿಲ್ಲ” ಎಂಬ ರಾಹುಲ್ ಟ್ವಿಟ್ ಈಗ ವೈರಲ್ ಆಗುತ್ತಿದೆ.
ಮಂಗಳವಾರ ರಾಹುಲ್ ಅವರ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಮ್ ದೇವಸ್ಥಾನಕ್ಕೆ ‘ಭೂಮಿ-ಪೂಜನ್’ “ರಾಷ್ಟ್ರೀಯ ಏಕತೆ, ಸಹೋದರತ್ವ ಮತ್ತು ಸಾಂಸ್ಕೃತಿಕ ಸಾಮರಸ್ಯವನ್ನು ಹೆಚ್ಚಿಸುವ ಸಂದರ್ಭವಾಗಿರಬೇಕು” ಎಂದು ಹೇಳಿದ್ದಾರೆ.
Tags :