ಬಾಗಲಕೋಟೆ : ಬಾದಾಮಿ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಕೊರೊನಾ ಸೋಂಕಿತರ ಅನುಕೂಲಕ್ಕಾಗಿ ಮೂರು ಆಂಬುಲೆನ್ಸ್ ಗಳನ್ನು ನೀಡಿದ್ದಾರೆ.
ಇಂದು ಮೂರು ವಾಹನಗಳನ್ನು ತಾಲೂಕು ಆಡಳಿತಕ್ಕೆ ಆಧಿಕಾರಿಗಳ ಮೂಲಕ ಹಸ್ತಾಂತರಿಸಲಾಯಿತು. ಈ ಆಂಬ್ಯುಲೆನ್ಸ್ ಗಳು ಬಾದಾಮಿ ಕ್ಷೇತ್ರದಲ್ಲಿ ಸಂಚರಿಸಲಿದ್ದು, ಕೋವಿಡ್ ಸೋಂಕಿತರಿಗೆ ನೆರವಾಗಲಿವೆ. ಇದೇ ವೇಳೆ ವೈದ್ಯರಿಗೆ N95 ಮಾಸ್ಕ್ ಗಳು, ಪಿಪಿಇ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಇನ್ನು ಕೊರೊನಾ ಸೋಂಕಿತರ ಅನುಕೂಲಕ್ಕಾಗಿ ಪಕ್ಷದ ವತಿಯಿಂದ ಸಹಾಯವಾಣಿ ಆರಂಭಿಸಲು ಸಿದ್ದರಾಮಯ್ಯ ಅವರು ಮುಖಂಡರಿಗೆ ಸೂಚನೆ ನೋಡಿದ್ದಾರೆ. ಕೋವಿಡ್ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಳ್ಳುವವರಿಗೆ ಹೆಲ್ಫ್ ಡೆಸ್ಕ್ ಆರಂಭಿಸಲು ತಿಳಿಸಿದ್ದಾರೆ.
Laxmi News 24×7