Breaking News

ಭಿಕ್ಷುಕರ ಹಸಿವು ನೀಗಿಸಿದ ಆರಕ್ಷಕ

Spread the love

ಕನಕಪುರ:ಲಾಕ್‌ಡೌನ್‌ನಿಂದ ಊಟಸಿಗದೆ ಹವಿನಿಂದ ಬಳಲುತ್ತಿದ್ದ ಬಡವರಿಗೆ ಭಿಕ್ಷುಕರಿಗೆ ನಿರ್ಗತಿಕರಿಗೆ ವೃತ್ತ ನಿರೀಕ್ಷಕ ಟಿ.ಟಿ.ಕೃಷ್ಣ ಆಹಾರ ನೀರು ನೀಡಿಮಾನವೀಯತೆ ಮೇರೆದಿದ್ದಾರೆ.ಸರ್ಕಾರದ ಕರ್ಫ್ಯೂ ಜಾರಿ ಬಿಕ್ಷುಕರು ನಿರ್ಗತಿಕರಿಗೆ ತೊಡಕಾಗಿ ಪರಿಣಮಿಸಿದೆ.

ಅನೇಕ ಕಾರಣದಿಂದ ಜನರುಭಿಕ್ಷುಕರಾಗಿ ಬೀದಿ ಬದಿಗಳಲ್ಲಿ ಬಸ್‌ನಿಲ್ದಾಣದಲ್ಲಿ ದೇವಸ್ಥಾನಗಳ ಬಳಿಸಾರ್ವಜನಿಕರು ಕೊಡುವ ಸಹಾಯದಿಂದ ಹೊಟ್ಟೆ ತುಂಬಿಸಿಕೊಂಡು ಜೀವನಸಾಗಿಸುತ್ತಿದ್ದರು. ಆದರೆ, ಕೊರೊನಾದಿಂದ ಬಿಕ್ಷುಕರನ್ನು ಹಸಿವಿನಿಂದಬಳಲುವಂತೆ ಮಾಡಿದೆ.

ಇಂಥ ಸ್ಥಿತಿಯಲ್ಲಿ ಕೊರೊನಾ ತಡೆಗೆ ವಾರಿಯರ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಆರಕ್ಷಕವೃತ್ತನಿರೀಕ್ಷಕ ಟಿ.ಟಿ.ಕೃಷ್ಣ ತಾಲೂಕಾದ್ಯಂತಗಸ್ತುತಿರುಗುವಾಗ ಬೀದಿ ಬದಿಯಲ್ಲಿಊಟ ಸಿಗದೆ ಹಸಿವಿನಿಂದ ಕಂಗಲಾಗಿದ್ದಬಿಕ್ಷುಕರು ನಿರ್ಗತಿಕರ ಪರಿಸ್ಥಿತಿಯನ್ನು ಕಂಡು ಅವರ ಹಸಿವು ನೀಗಿಸಲು ಮನಸ್ಸು ಮಾಡಿದ್ದಾರೆ. ಕೆವಲ ಒಂದೇರಡು ದಿನಗಳಿಗೆ ಸೀಮಿತ ಮಾಡದೆ ಲಾಕ್‌ಡೌನ್‌ ಮುಗಿಯುವ ವರೆಗೂಭಿಕ್ಷುಕರ ಹಸಿವನ್ನು ದೂರಮಾಡಲು ಮುಂದಾಗಿರುವ ಅವರು ತಾವೇ ಮನೆಯಲ್ಲೆ ತಯಾರಿಸಿದ ಆಹಾರದ ಪೊಟ್ಟಣಗಳನ್ನು ಬಸ್‌ ನಿಲ್ದಾಣಗಳಲ್ಲಿ ಬೀದಿ ಬದಿಗಳಲ್ಲಿ ಪುಟ್‌ಬಾತ್‌ಗಳಲ್ಲಿ ಕಾಲ ಕಳೆಯುತ್ತಿರುವ ಬಿಕ್ಷುಕರಿಗೆ ನಿರ್ಗ ತಿಕರಿಗೆ ನೀಡಿ ನೆರವಾಗಿದ್ದಾರೆ.

ಮಾಸ್ಕ್ ಇಲ್ಲದೆ ಓಡಾಡುತ್ತಿದ್ದ ವೃದ ರೊಬ್ಬರಿಗೆ ತಾವೇ ಮಾಸ್ಕ್ ಹಾಕಿ ಎಚ್ಚರಿಕೆಯಿಂದ ಇರುವಂತೆ ತಿಳುವಳಿಕೆ ನೀಡಿದ್ದಾರೆ. ವೃತ್ತ ನಿರೀಕ್ಷಕ ಟಿ.ಟಿ.ಕೃಷ್ಣ ಪ್ರತಿ ಕ್ರಿಯಿಸಿ. ಲಾಕ್‌ಡೌನ್‌ ನಿಂದ ಬಿಕ್ಷುಕರ ಪರಿಸ್ಥಿತಿ ಚಿಂತಜನಕವಾಗಿದೆ. ದೇವಾಲಯಗಳಮುಂದೆ ಹೋಟೆಲ್‌ಗ‌ಳ ಬಳಿ ಸಾರ್ವಜನಿಕರಿಂದ ಹೊಟ್ಟೆ ತುಂಬಿಸಿಕೊಳ್ಳತ್ತಿದ್ದರು ಆದರೆ ಲಾಕ್‌ಡೌನ್‌ನಿಂದ ಎಲ್ಲವು ಸ್ತಬ್ಧಗೊಂಡಿದೆ ಹಾಗಾಗಿ ಲಾಕ್‌ಡೌನ್‌ ಮುಗಿಯುವವರೆಗೂ ಬಿಕ್ಷುಕರಿಗೆ ನಿರ್ಗತಿಕರಿಗೆ ಕೈಲಾದ ಸಹಾಯ ಮಾಡುವದೃಷ್ಟಿಯಿಂದ ಮನೆಯಲ್ಲೇ ಊಟತಯಾರಿಸಿ ನೀಡುತ್ತಿದ್ದೇವೆ ಎಂದರು.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ