Breaking News

ಒಳಗಿನವರಿಂದಲ್ಲ, ಹೊರಗಿನಿಂದ ಬರುತ್ತಿರುವ ಕೈದಿಗಳಿಂದ ಕಾರಾಗೃಹದಲ್ಲಿ ಕೊರೋನಾ ಹೆಚ್ಚುತ್ತಿದೆ!

Spread the love

ಬೆಂಗಳೂರು: ಒಳಗಿರುವವರಿಂದಲ್ಲ, ಹೊರಗಿನಿಂದ ಬರುತ್ತಿರುವ ಕೈದಿಗಳಿಂದ ರಾಜ್ಯದ ಕಾರಾಗೃಹಗಳಲ್ಲಿ ಮಹಾಮಾರಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ ಎಂದು ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಹೇಳಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ಚಿಕಿತ್ಸೆ ನೀಡಲು ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯನ್ನು ನೋಡಲ್ ಕೇಂದ್ರವನ್ನಾಗಿ ಮಾಡಲಾಗಿದೆ. ಕಳೆದ 2 ತಿಂಗಳುಗಳಿಂದ ಆಸ್ಪತ್ರೆ ಒಟ್ಟು 31 ಮಂದಿ ಸೋಂಕಿತ ಕೈದಿಗಳಿಗೆ ಚಿಕಿತ್ಸೆ ನೀಡಿದೆ.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮತ್ತು ಕೇಂದ್ರ ಕಾರಾಗೃಹದ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಅನ್ಸಾರ್ ಅಹ್ಮದ್ ಅವರು ಮಾತನಾಡಿ, ಕಾರಾಗೃಹದಲ್ಲಿ ಕೊರೋನಾ ವ್ಯಾಪಕಗೊಂಡಿಲ್ಲ. ಈ ವರೆಗೂ ಕೊರೋನಾ ಕಾಣಿಸಿಕೊಂಡ ಕೈದಿಗಳೆಲ್ಲರೂ ಹೊರಗಿನಿಂದ ಬಂದವರಾಗಿದ್ದಾರೆಂದು ಹೇಳಿದ್ದಾರೆ.

ಹೊರಗಿನಿಂದ ಬಂದವರಿಗೆ ಹೋಲಿಕೆ ಮಾಡಿದರೆ, ಕಾರಾಗೃಹಗಳ ಒಳಗಿರುವ ಕೈದಿಗಳು ಸುರಕ್ಷಿತವಾಗಿದ್ದಾರೆ. ಕೈದಿಗಳಲ್ಲಿ ಕೊರೋನಾ ಜಾಗೃತಿ ಮೂಡಲಿಸಲು ನಾವು ರೇಡಿಯೋಗಳನ್ನು ಬಳಕೆ ಮಾಡುತ್ತಿದ್ದೇವೆ, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರಸ್ತುತ ಜೈಲಿನ ಒಟ್ಟು 6 ಮಂದಿ ಕೈದಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಕಾಣಿಸಿಕೊಂಡಿರು ಸಾಕಷ್ಟು ಕೈದಿಗಳು ಲಕ್ಷಣ ರಹಿತರಾಗಿದ್ದಾರೆ. ಲಕ್ಷಣ ಇರುವವರಲ್ಲೂ ಸಣ್ಣ ಮಟ್ಟದ ಕೆಮ್ಮು ಹಾಗೂ ಶೀತ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ನಾವು ಇಲ್ಲಿಯವರೆಗೆ ನೋಡಿದ ಕೈದಿಗಳ ಕೊರೋನಾ ಪ್ರಕರಣಗಳು ನ್ಯಾಯಾಲಯದಿಂದ ಶಿಕ್ಷೆಗೊಳಗಾದವರು ಹಾಗೂ ಪೆರೋಲ್ ಮೇಲೆ ಹೊರಗೆ ಹೋಗಿ ಜೈಲಿಗೆ ಮರಳಿ ಬಂದವರೇ ಆಗಿದ್ದಾರೆ. ಜೈಲಿಗೆ ಮರಳಿ ಬರುತ್ತಿರುವ ಕೈದಿಗಳಿಗೆ ಇದೀಗ ಕಡ್ಡಾಯವಾಗಿ ಆರ್’ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಪಾಸಿಟಿವ್ ಬಂದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ, ಲಕ್ಷಣ ರಹಿತ ಕೈದಿಗಳನ್ನು ಪ್ರತ್ಯೇಕ ಕಾರಾಗೃಹದಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಇಂತಹ ಕೈದಿಗಳು ಇತರೆ ಕೈದಿಗಳೊಂದಿಗಿರಲು ಅವಕಾಶ ನೀಡುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಕಾರಾಗೃಹಕ್ಕೆ ಹೊಸದಾಗಿ ಬಂದ ಕೈದಿಗಳನ್ನು ಪರೀಕ್ಷೆಗೊಳಿಸಲಾಗುತ್ತಿದೆ. ಪರೀಕ್ಷೆಯಲ್ಲಿ ಸೋಂಕು ಕಂಡು ಬರದಿದ್ದರೂ ಕೂಡ ವಾರಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತಿದೆ. ಎರಡೂ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಮಾತ್ರ ಇತರೆ ಕೈದಿಗಳೊಂದಿಗಿರಲು ಬಿಡಲಾಗುತ್ತಿದೆ ಎಂದಿದ್ದಾರೆ.

ಕೇಂದ್ರ ಕಾರಾಗೃಹದಲ್ಲಿ 5,000 ಕೈದಿಗಳಿದ್ದು, 45 ವರ್ಷ ಮೇಲ್ಪಟ್ಟ ಕೈದಿಗಳಿಗೆ ಲಸಿಕೆ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. 5,000 ಕೈದಿಗಳ ಪೈಕಿ 400 ಕೈದಿಗಳು 45, 91 ಮತ್ತು 60 ವರ್ಷ ಮೇಲ್ಪಟ್ಟವರಿದ್ದಾರೆಂದು ವರದಿಗಳು ತಿಳಿಸಿವೆ.

ಜೈಲಿಗೆ ಮರಳುವ ಪೆರೋಲಿಗಳು, ಕಡ್ಡಾಯ ಆರ್ಟಿ-ಪಿಸಿಆರ್ ಪರೀಕ್ಷೆಯ ನಂತರ ಧನಾತ್ಮಕ ಪರೀಕ್ಷೆ ನಡೆಸುತ್ತಾರೆ. ಧನಾತ್ಮಕ ಪರೀಕ್ಷೆ ಮಾಡುವವರನ್ನು ನಮ್ಮ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಚೇತರಿಸಿಕೊಂಡ ನಂತರ, ಅವರನ್ನು ಜೈಲಿನಲ್ಲಿ ಪ್ರತ್ಯೇಕ ವಿಭಾಗದಲ್ಲಿ ಬಂಧಿಸಲಾಗುತ್ತದೆ ಮತ್ತು ಸ್ವಲ್ಪ ಸಮಯದವರೆಗೆ ಇತರ ಕೈದಿಗಳೊಂದಿಗೆ ಬೆರೆಯಲು ಅನುಮತಿಸುವುದಿಲ್ಲ ‘ಎಂದು ಡಾ ಅನ್ಸಾರ್ ಹೇಳಿದರು.

ಎರಡು ಅಥವಾ ಮೂರು ದಿನಗಳಲ್ಲಿ ಲಸಿಕೆ ನೀಡುವ ಕಾರ್ಯ ಆರಂಭಿಸಲಾಗುತ್ತದೆ. ಜೈಲು ಅಧಿಕಾರಿಗಳು ಸಿಂಗಸಂದ್ರ ಸರ್ಕಾರಿ ಆಸ್ಪತ್ರೆ ಸೇರಿದಂತೆ ಸುತ್ತಮುತ್ತಲಿನ ಜೈಲು ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆಗಳೊಂದಿಗೆ ಸಹಕಾರ ನೀಡಲಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗಾಗಿ ಒಟ್ಟು 40 ಹಾಗೂ ಕೋವಿಡೇತರ ರೋಗಿಗಳಿಕೆ ಚಿಕಿತ್ಸೆ ನೀಡಲು 60 ಹಾಸಿಗೆಗಳನ್ನು ಹೊಂದಿದೆ. ಕಳೆದ ವರ್ಷದ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಆಸ್ಪತ್ರೆ 438 ಸೋಂಕಿತರಿಗೆ ಚಿಕಿತ್ಸೆ ನೀಡಿತ್ತು.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ