ಬೆಂಗಳೂರು: ಮಾಜಿ ಸಚಿವರ CD ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ಪಿನ್ಗಳಿಗಾಗಿ ಎಸ್ಐಟಿ ಅಧಿಕಾರಿಗಳು ಶೋಧಕಾರ್ಯ ಆರಂಭಿಸಿದ್ದಾರೆ.
ಸದ್ಯ ಆರೋಪಿಗಳು ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಇಬ್ಬರು ಕಿಂಗ್ಪಿನ್ಗಳು ಒಟ್ಟಿಗೆ ಇರುವ ಬಗ್ಗೆ ಅಧಿಕಾರಿಗಳ ತನಿಖೆ ವೇಳೆ ಗೊತ್ತಾಗಿದೆ. ಸಿಡಿ ಲೀಕ್ ಮಾಡಿದ ಪ್ರಮುಖ ಕಿಂಗ್ಪಿನ್ ಹಾಗೂ ರಷ್ಯಾ ವೆಬ್ ಸೈಟ್ ಮೂಲಕ ವಿಡಿಯೋ ಅಪ್ಲೋಡ್ ಮಾಡಿದ್ದ ಹ್ಯಾಕರ್ ಇಬ್ಬರು, ಸಿಡಿ ರಿಲೀಸ್ ಆದ ಬೆನ್ನಲ್ಲೇ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಎಥಿಕಲ್ ಹ್ಯಾಕರ್ ಕೋರ್ಸ್ ಮುಗಿಸಿರುವ ಆರೋಪಿಗಳು, ಟೆಕ್ನಿಕಲ್ ಆಗಿ ಪೊಲೀಸರ ಕೈಗೆ ಸಿಗದಂತೆ ಮುನ್ನೆಚ್ಚರಿಯಿಂದ ಓಡಾಡುತ್ತಿದ್ದಾರೆ. ಆರೋಪಿಗಳು ಮೊಬೈಲ್ ಆನ್ ಮಾಡಿ ನಂತರ ಸ್ವಿಚ್ಆಫ್ ಮಾಡಿ ಪ್ರಯಾಣ ಮಾಡ್ತಿದ್ದು, ನೆರೆಯ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗೋವಾದಲ್ಲಿ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ.
ಪೊಲೀಸರು ಸ್ವಿಚ್ಆಫ್ ಆದ ಟವರ್ ಲೊಕೇಷನ್ ಜಾಗಕ್ಕೆ ಹೋಗಿ ಹುಡುಕಾಟ ನಡೆಸಿದ್ದಾರೆ. ಹೀಗೆ ಇಬ್ಬರು ಆರೋಪಿಗಳು ನಾಲ್ಕು ಬಾರಿ ಪೊಲೀಸರನ್ನು ಆಟಾಡಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಇಂಚಿಚು ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು, ಯಾವ ಕ್ಷಣದಲ್ಲಾದರೂ ಆರೋಪಿಗಳನ್ನು ಬಂಧಿಸುವ ಸಾಧ್ಯತೆಯಿದೆ. ಈಗಾಗಲೇ ಪ್ರಕರಣದ ಮುಖ್ಯ ಕಿಂಗ್ಪಿನ್ ಮನೆ ಶೋಧ ನಡೆಸಿರುವ ಅಧಿಕಾರಿಗಳು ಮನೆಯಲ್ಲಿ ದೊರೆತ ಮಹತ್ವದ ಸಾಕ್ಷ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.