Breaking News

ಸೋಮವಾರ ರಾಜ್ಯ ಬಜೆಟ್, ಏನೇನು ನಿರೀಕ್ಷಿಸಬಹುದು..?

Spread the love

ಬೆಂಗಳೂರು,ಮಾ.6-ಯಾವುದೇ ಹೊಸ ತೆರಿಗೆ ವಿಸದೆ, ಪೆಟ್ರೋಲ್, ಡೀಸೆಲ್ ಮಾರಾಟದ ಮೇಲಿನ ತೆರಿಗೆಯನ್ನೂ ಇಳಿಸದೆ, ಹೆಚ್ಚು ಹೊಸ ಯೋಜನೆಗಳನ್ನು ಘೋಷಣೆ ಮಾಡದೆ ದಶಕಗಳ ನಂತರ ಇದೇ ಮೊದಲ ಬಾರಿಗೆ ವಿತ್ತೀಯ ಕೊರತೆ ಬಜೆಟ್ ಸೋಮವಾರ ಮಂಡನೆಯಾಗಲಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಸೋಮವಾರ ವಿಧಾನಸೌದಧಲ್ಲಿ ಮಧ್ಯಾಹ್ನ 12 ಗಂಟೆ 5 ನಿಮಿಷಕ್ಕೆ 2021-22ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಯಡಿಯೂರಪ್ಪ ಅವರ 8ನೇ ಬಜೆಟ್ ಮಂಡನೆಯಾಗಲಿದ್ದು, ಕಳೆದ ಸಾಲಿಗಿಂತ ಬಜೆಟ್ ಗಾತ್ರ ಈ ಬಾರಿ ಕಡಿಮೆಯಾಗುವ ಸಾಧ್ಯತೆ ಇದೆ.

ಕಳೆದ ವರ್ಷ 2.37 ಲಕ್ಷ ಕೋಟಿಯ ಬಜೆಟ್ ಮಂಡನೆ ಮಾಡಿದ್ದರು. ಈ ಬಾರಿಯ ಬಜೆಟ್ ಅದಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ. ಆರ್ಥಿಕ ಹಿಂಜರಿಕೆ ಹಾಗೂ ಸಂಪನ್ಮೂಲ ಸಂಗ್ರಹ ಕೊರತೆ ಎದುರಿಸುತ್ತಿರುವ ಹಿನ್ನೆಲೆ ಬಜೆಟ್ ಗಾತ್ರ ಸಹಜವಾಗಿಯೇ ಕುಗ್ಗಲಿದೆ ಎಂದು ಹೇಳಿದ್ದಾರೆ. ಕೇಂದ್ರದ ಜಿಎಸ್‍ಟಿ ಪಾಲಿನ ಮೇಲೆ ಎಲ್ಲವೂ ನಿಂತಿದೆ. ಆದರೆ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಈ ಬಾರಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿಎಸ್ಟಿ ಪಾಲು ಕೂಡ ಕಡಿಮೆಯಾಗಲಿದೆ.

ಹೀಗಾಗಿ ಈ ಬಾರಿಯ ಬಜೆಟ್ ಗಾತ್ರವನ್ನು ಕುಗ್ಗಿಸುವುದು ಅನಿವಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಗಳ ಹಂಚಿಕೆಯಲ್ಲಿ, ಕೇಂದ್ರದಿಂದ ಬರುವ ಅನುದಾನದಲ್ಲಿ ಕಡಿತದಿಂದ ಜಿಎಸ್ ಟಿ ಅನುದಾನದಲ್ಲಿ ಇಳಿಕೆ ಮತ್ತು ಪ್ರಗತಿ ದರದಲ್ಲಿ ಕುಂಠಿತವಾಗಿ ತೀವ್ರ ಹಣಕಾಸಿನ ದುಸ್ಥಿತಿ ಎದುರಿಸುತ್ತಿದ್ದರೂ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಕಳೆದ ವರ್ಷ ಆದಾಯದಲ್ಲಿ ಹೆಚ್ಚುವರಿ ಬಜೆಟ್‍ನ್ನು ಮಂಡಿಸಿದ್ದರು.

ಕೋವಿಡ್-19 ಲಾಕ್‍ಡೌನ್ ಕಾರಣದಿಂದ ರಾಷ್ಟ್ರದ ಆರ್ಥಿಕ ಸ್ಥಿತಿ ಕಳೆದ ವರ್ಷ ತೀವ್ರ ಕುಸಿಯಿತು. ಜಿಎಸ್‍ಟಿ ಪರಿಹಾರದ ನಷ್ಟದಿಂದ ಉಂಟಾಗುವ ನಷ್ಟ ಸರಿದೂಗಿಸಲು ಹೆಚ್ಚುವರಿ ಸಾಲಗಳ ಕಾರಣದಿಂದಾಗಿ ಕರ್ನಾಟಕವನ್ನು ಶೇ.25ಕ್ಕಿಂತ ಹೆಚ್ಚಿನ ಹೊಣೆಗಾರಿಕೆಗಳು ಮತ್ತು ಹಣಕಾಸಿನ ಕೊರತೆಯು ಜಿಡಿಪಿಯ ಶೇ.5 ರಷ್ಟು ನಷ್ಟ ಎದುರಿಸಬೇಕಾಗಿದೆ.

ಈ ವರ್ಷದಲ್ಲಿ ರಾಜ್ಯದ ಆರ್ಥಿಕತೆ ಹದಗೆಟ್ಟಿದ್ದು, 2020-2021ರ ವಿನಿಯೋಗಕ್ಕೆ ಹೋಲಿಸಿದರೆ 2021-2022ರ ಬಜೆಟ್ ವಿನಿಯೋಗದಲ್ಲಿನ ವ್ಯತ್ಯಾಸವು ಕಡಿಮೆಯಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ನಿಧಾನಗತಿಯ ಚೇತರಿಕೆ ಮತ್ತು ರಾಜ್ಯದ ಸ್ವಂತ ತೆರಿಗೆ ಸಂಗ್ರಹದಲ್ಲಿ ಅಂದಾಜು ಕೊರತೆಯು ಹಣಕಾಸಿನ ಹೊರೆಗೆ ಕಾರಣವಾಗಿದೆ.

2020-2021ರ ಹಣಕಾಸು ವರ್ಷದಲ್ಲಿ ಹೆಚ್ಚಿನ ಸಾಲವನ್ನು ಪಡೆಯಲು ಕರ್ನಾಟಕ ಹಣಕಾಸಿನ ಜವಾಬ್ದಾರಿ ಕಾಯ್ದೆಗೆ ¾ಒಂದು ಬಾರಿ ತಿದ್ದುಪಡಿ ಮಾಡಲಾಗಿದ್ದರೆ, ಅಗತ್ಯವಿದ್ದರೆ ಮುಂದಿನ ಹಣಕಾಸು ವರ್ಷಕ್ಕೆ ಮತ್ತೊಮ್ಮೆ ತಿದ್ದುಪಡಿ ತರಬಹುದು ಎಂದು ಹಣಕಾಸು ಇಲಾಖೆ ಸೂಚಿಸುತ್ತದೆ. ಹಣಕಾಸಿನ ಕೊರತೆಯು ಶೇಕಡಾ 5 ರವರೆಗೆ ಇರುತ್ತದೆ, ಹೊಣೆಗಾರಿಕೆಗಳು ಶೇ.25 ಕ್ಕಿಂತ ಹೆಚ್ಚಿರುತ್ತವೆ.

ಕೇಂದ್ರ ಸರ್ಕಾರ, 2021-2022ರ ತನ್ನ ಬಜೆಟ್‍ನಲ್ಲಿ, ಜಿಎಸ್ಡಿಪಿಯ ಶೇ.3 ಕ್ಕಿಂತ ಹೆಚ್ಚಿನ ಮತ್ತು ಅದಕ್ಕಿಂತ ಹೆಚ್ಚಿನ ಸಾಲವನ್ನು ಪಡೆಯಲು ರಾಜ್ಯಗಳಿಗೆ ಅವಕಾಶ ನೀಡಿದೆ. ಅವಶ್ಯಕತೆಯ ಆಧಾರದ ಮೇಲೆ, ನಾವು ಮತ್ತೆ ತಿದ್ದುಪಡಿಯನ್ನು ತರಬೇಕಾಗಿದೆಎಂದು ಅಕಾರಿಯೊಬ್ಬರು ವಿವರಿಸಿದರು. ರಾಜ್ಯದ ಆರ್ಥಿಕ ಸ್ಥಿತಿಗತಿ ಹೇಗಿದೆ? : ಈ ಆರ್ಥಿಕ ವರ್ಷದಲ್ಲಿ ರಾಜ್ಯದ ಆರ್ಥಿಕ ಸ್ಥಿತಿಗತಿ ಬಹುತೇಕ ಬಿಗಡಾಯಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರದ ತೆರಿಗೆ ಪಾಲು ಶೇ.38.8ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಏಪ್ರಿಲ್‍ನಿಂದ ನವೆಂಬರ್‍ಗೆ 19,914 ಕೋಟಿ ರೂ. ತೆರಿಗೆ ಹಂಚಿಕೆಯಾಗಿದ್ದರೆ, ಈ ವರ್ಷ 12,192 ಕೋಟಿ ರೂ. ಮಾತ್ರ ಹಂಚಿಕೆಯಾಗಿದೆ.

ಅದೇ ರೀತಿ ಏಪ್ರಿಲ್ ನಿಂದ ಫೆಬ್ರವರಿವರೆಗೆ ಕೇಂದ್ರದಿಂದ ನಮಗೆ ಸಿಗುತ್ತಿದ್ದ ಸಹಾಯಾನುದಾನ ಶೇ.19.3ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ 22,667 ಕೋಟಿ ರೂ. ಸಹಾಯಾನುದಾನ ದೊರಕಿದರೆ ಈ ವರ್ಷ ನವೆಂಬರ್‍ಗೆ ಕೇವಲ 18,299 ಕೋಟಿ ಮಾತ್ರ ಸಿಕ್ಕಿದೆ. ಆರ್ಥಿಕ ಸಂಕಷ್ಟದ ಹಿನ್ನೆಲೆ ಮುಂದಿನ ವರ್ಷವೂ ಕೇಂದ್ರದ ತೆರಿಗೆ ಪಾಲು ಹಾಗೂ ಅನುದಾನ ಕಡಿತವಾಗಲಿದೆ. ನವೆಂಬವರ್‍ವರೆಗೆ ಮೋಟಾರು ವಾಹನ ತೆರಿಗೆ ಸಂಗ್ರಹದಲ್ಲಿ ಸುಮಾರು 1,298 ರೂ. ಕಡಿಮೆಯಾಗಿದೆ.

ಮುದ್ರಾಂಕ ಮತ್ತು ನೋಂದಣಿ ಶುಲ್ಕ 1,628 ಕೋಟಿ ರೂ. ಕಡಿಮೆಯಾಗಿದೆ. ವಾಣಿಜ್ಯ ತೆರಿಗೆಯಲ್ಲಿ ಸುಮಾರು 5,789 ಕೋಟಿ ರೂ. ಆದಾಯ ಕಡಿಮೆಯಾಗಿರುವುದು ಆರ್ಥಿಕ ಇಲಾಖೆ ಅಂಕಿ-ಅಂಶದಲ್ಲಿ ಗೊತ್ತಾಗಿದೆ. ಆರ್ಥಿಕ ಸಂಕಷ್ಟದ ಮಧ್ಯೆ ಆಯವ್ಯಯಕ್ಕಾಗಿ ಹಣ ಹೊಂದಿಸುವುದು ಅಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸದ್ಯದ ರೀತಿಯಲ್ಲೇ ಆರ್ಥಿಕ ಚೇತರಿಕೆ ಕಾಣುತ್ತಿದ್ದರೆ ಸಂಪನ್ಮೂಲ ಕ್ರೋಢೀಕರಣ ಕಷ್ಟ ಸಾಧ್ಯ ಎಂಬುದು ಆರ್ಥಿಕ ಇಲಾಖೆ ಅಕಾರಿಗಳ ಆತಂಕ. ಆದರೆ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕ ಚಟುವಟಿಕೆ ಈ ಹಿಂದಿನ ಸ್ಥಿತಿಗೆ ಬರಲಿದೆ ಎಂಬ ಆಶಾಭಾವನೆ ಅಕಾರಿಗಳದ್ದಾಗಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ