Breaking News

ಮೀನುಗಾರರ ಹೋರಾಟಕ್ಕೆ ಬೆಲೆ ಇಲ್ವಾ?

Spread the love

ಕಾರವಾರ: ಇತ್ತೀಚಿಗೆ ಕೇಂದ್ರ ಸರಕಾರದ ಖಾಸಗೀಕರಣ ನೀತಿ ವಿರುದ್ದ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬೆನ್ನಲ್ಲೆ ಎಲ್ಲವೂ ಗೊತ್ತು ಗೊತ್ತಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮೀನುಗಾರಿಕೆಗೆ ತೊಂದರೆ ಆಗುವ ಹಾಗೆ ಖಾಸಗಿ ಕಂಪನಿಯವರು ಪೋರ್ಟ್ ನಿರ್ಮಾಣ ಮಾಡಲು ಹೊರಟಿದ್ದು ಮೀನುಗಾರರ ಆಕ್ರೋಶದ ಕಟ್ಟೆ ಒಡೆದಿದ್ದು ಮೀನುಗಾರರ ಸಮಸ್ಯೆ ಕೇಳುವವರು ಯಾರು ಇಲ್ಲದಂತಾಗಿದೆ.

ಹೊನ್ನಾವರದ ಕಾಸರಕೋಡಿನಲ್ಲಿ ಎಚ್.ಪಿ.ಪಿ.ಎಲ್ ಖಾಸಗಿ ಕಂಪನಿಯವರು ವಾಣಿಜ್ಯ ಬಂದರು ನಿರ್ಮಾಣ ಮಾಡಲು ಹೊರಟಿದ್ದಾರೆ. ಈಗಾಗಲೇ ಕೇಂದ್ರ ಸರಕಾರದ ಅನುಮತಿಯೊಂದಿಗೆ ಕಾಮಗಾರಿ ಕೂಡಾ ಆರಂಭವಾಗಿದೆ. ಈ ನಡುವೆ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿರುವ ಇಲ್ಲಿನ ಸ್ಥಳೀಯ ಸಾವಿರಾರು ಮೀನುಗಾರರ ಗೋಳಿಗೆ ಕಿವಿಗೊಡದೆ ಕಾಮಗಾರಿ ಆರಂಭಿಸಿದ್ದು ಮೀನುಗಾರರ ಆಕ್ರೋಷದ ಕಟ್ಟೆ ಒಡೆದಿದೆ. ಇದರ ಜತೆಗೆ ಯಾವೊಬ್ಬ ಶಾಸಕ ಆಗಿರಲಿ, ಜನಪ್ರತಿನಿಧಿ ಕೂಡ ಮೀನುಗಾರರ ಪರವಾಗಿ ನಿಲ್ಲದಿರೋದು ದುರಂತವಾಗಿದೆ. ಇನ್ನೂ ಈಗ ಆರಂಭಿಸಲಾದ ಪೋರ್ಟ್ ಕಾಮಗಾರಿ ಪಕ್ಕದಲ್ಲೇ ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ಬ್ಲೂ ಪ್ಲಾಗ್ ಕಡಲತೀರ ಇದೆ. ಇದಕ್ಕೆ ದಕ್ಕೆ ಆಗುವ ಎಲ್ಲ ಲಕ್ಷಣವೂ ಇದೆ. ಹೀಗೆ ಹತ್ತು ಹಲವು ಸಮಸ್ಯೆ ಇದ್ದರೂ ಕೂಡಾ ಖಾಸಗಿ ಕಂಪನಿಯವರಾಗಲಿ ಅಥವಾ ಬಂದರು ಇಲಾಖೆಯಾಗಲಿ ಮೀನುಗಾರರ ಸಂಕಷ್ಟ ಆಲಿಸದೆ ಪರಿಹಾರದ ಬಗ್ಗೆಯೂ ಮಾತನಾಡದೆ ಏಕಾಏಕಿ ಕಾಮಗಾರಿ ಆರಂಭಿಸಿದ್ದು ಮೀನುಗಾರರ ಜತೆ ಚೆಲ್ಲಾಟವಾಡುವಂತಿದೆ.ಕಳೆದ ಹತ್ತಾರು ದಿನದಿಂದ ನಿರಂತರವಾಗಿ ಹೊನ್ನಾವರ ಮೀನುಗಾರರು ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಹೋರಾಟ ನಡೆಸುತ್ತಲೇ ಬರುತ್ತಿದ್ದಾರೆ. ಆದರೆ ಇವರಿಗೆ ದಿಕ್ಕು ತಪ್ಪಿಸುವ ಕೆಲಸ ಸಂಬಂಧಿಸಿದ ಬಂದರು ಇಲಾಖೆಯಿಂದ ನಡೆಯುತ್ತಿದೆಯಂತೆ. ಬಂದರು ನಿರ್ಮಾಣವಾದರೆ ಉದ್ಯೋಗ ಸೃಷ್ಟಿ ಆಗುತ್ತೆ, ಸ್ಥಳೀಯ ಮೀನುಗಾರರಿಗೆ ಉದ್ಯೋಗ ನೀಡುವ ಭರವಸೆ  ಆದ್ರೆ ಬಂದರು ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ನೈಪುಣ್ಯತೆ ಸ್ಥಳೀಯ ಮೀನುಗಾರಿಗಿಲ್ಲ. ತಮ್ಮ ಕಸುಬಿಗೆ ಕತ್ತರಿ ಹಾಕಿ ಬೇರೆ ಉದ್ಯೋಗದ ಆಸೆ ತೋರಿಸಿ ಮೀನುಗಾರರ ದಿಕ್ಕು ತಪ್ಪಿಸಿ ಸರಕಾರ ಖಾಸಗಿ ಕಂಪನಿಯವರಿಗೆ ಬಂದರು ನಿರ್ಮಾಣ ಮಾಡಲು ಅನುಮತಿ ನೀಡಿದ್ದು ಖಂಡನೀಯ ಅಂತಾರೆ ಸ್ಥಳೀಯ ಮೀನುಗಾರರು.


Spread the love

About Laxminews 24x7

Check Also

ನವಿಲು ತೀರ್ಥ ಅಣೆಕಟ್ಟು ಸಂತ್ರಸ್ತರಿಗೆ ಪರಿಹಾರ ನೀಡಲಿ – ಸವದತ್ತಿ ರೈತರ ಪ್ರತಿಭಟನೆ |

Spread the love ನವಿಲು ತೀರ್ಥ ಅಣೆಕಟ್ಟು ಸಂತ್ರಸ್ತರಿಗೆ ಪರಿಹಾರ ನೀಡಲಿ – ಸವದತ್ತಿ ರೈತರ ಪ್ರತಿಭಟನೆ | ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ