Breaking News

ಕ್ಷೇತ್ರದ ಸುಮಾರು ಪ್ರತಿಶತ ೯೦ ರಷ್ಟು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಅಹವಾಲುಗಳನ್ನು ಸ್ವೀಕರಿಸಿದ್ದೇನೆ: ಅಣ್ಣಾಸಾಹೇಬ ಜೊಲ್ಲೆ

Spread the love

ಚಿಕ್ಕೋಡಿ – ಚಿಕ್ಕೋಡಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ಸುಮಾರು ಪ್ರತಿಶತ ೯೦ ರಷ್ಟು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಅಹವಾಲುಗಳನ್ನು ಸ್ವೀಕರಿಸಿದ್ದೇನೆ ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಸ್ತೆ ಸುಧಾರಣೆ, ಸಮುದಾಯ ಭವನಗಳ ನಿರ್ಮಾಣ, ಶುದ್ದ ಕುಡಿಯುವ ನೀರಿನ ಘಟಕ, ನೂತನ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಪ.ಜಾತಿ.ಪ.ಪಂ ವಸಾಹತುಗಳಲ್ಲಿ ಚರಂಡಿ ಸಿಸಿ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಅನುಷ್ಠಾಕ್ಕೆ ೧೧೨ ಕೋಟಿ ರೂಗಳಿಗೂ ಹೆಚ್ಚಿನ ಅನುದಾನ ಮಂಜೂರಾತಿ ಪಡೆದು ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸದಸ್ಯನಾದ ಬಳಿಕ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೪೯೦ ಗ್ರಾಮಗಳ ಪೈಕಿ ಈಗಾಗಲೇ ಪ್ರತಿಶತ ೯೦ ರಷ್ಟು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದು ಇನ್ನುಳಿದ ಗ್ರಾಮಗಳಿಗೆ ಪ್ರವಾಸ ಕೈಗೊಳ್ಳಲು ನಿರ್ದರಿಸಲಾಗಿದೆ ಎಂದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ೧೨ ಕೋಟಿ ೫೧ ಲಕ್ಷ, ನಿಪ್ಪಾಣಿ ವಿಧಾನಸಭೆ ಕ್ಷೇತ್ರಕ್ಕೆ ೧೬.೪೧ ಕೋಟಿ ಹುಕ್ಕೇರಿ ವಿಧಾನಸಭೆ ಕ್ಷೇತ್ರಕ್ಕೆ ೧೨.೪೨ ಕೋಟಿ,ರಾಯಬಾಗ ವಿಧಾನಸಭೆ ಕ್ಷೇತ್ರಕ್ಕೆ ೧೫.೮೩ ಕೋಟಿ,ಕುಡಚಿ ಕ್ಷೇತ್ರಕ್ಕೆ ೧೨.೩೫ ಕೋಟಿ,ಕಾಗವಾಡ ಕ್ಷೇತ್ರಕ್ಕೆ ೬ ಕೋಟಿ.ಯಮಕನಮರಡಿ ಕ್ಷೇತ್ರಕ್ಕೆ ೧೪.೭೧ ಕೋಟಿ ಹಾಗೂ ಅಥಣಿ ವಿಧಾನಸಭೆ ಕ್ಷೇತ್ರದಲ್ಲಿ ೨೨.೦೨ ಕೋಟಿ ರೂಗಳ ಅಂದಾಜಿನಲ್ಲಿ ಅಭಿವೃದ್ಧಿ ಕೈಗೊಳ್ಳಲಾಗಿದೆ ಎಂದರು.
ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ
ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ೧೩ ಜನರಿಗೆ ೨೬ ಲಕ್ಷ ಹಾಗೂ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ೪೧ ಜನರಿಗೆ ರೂ. ೧೩.೫೦ ಲಕ್ಷ ಹಾಗೂ ಸಂಸದದ ಶಿಫಾರಸ್ಸಿನ ಮೂಲಕ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡತನ ರೇಖೆಗಿಂತ ಕೆಳಗೆ ಇರುವ ಜನರಿಗೆ ಆಸ್ಪತ್ರೆ ವೈದ್ಯಕೀಯ ಚಿಕಿತ್ಸೆಗಾಗಿ ಅನುದಾನ ಮಂಜೂರು ಪಡೆದು ಅನುಕೂಲ ಕಲ್ಪಿಸಲಾಗಿದೆ.
ಪರಿಹಾರ ನಿಧಿಯಿಂದ ಜ್ಯೋತಿ ಬಡಿಗೇರ, ಎಕ್ಸಂಬಾ ರೂ. ೩ ಲಕ್ಷ, ದಯಾನಂದ ಕಮತೆ, ನಿಡಸೋಸಿ ರೂ. ೫೦ ಸಾವಿರ, ಮೇಘಾ ಶೇನವೆ, ನಿಪ್ಪಾಣಿ ರೂ. ೩ ಲಕ್ಷ, ಪ್ರಜ್ವಲ ಚೌಗಲೆ, ಅಥಣಿ ರೂ.೩ ಲಕ್ಷ, ದೀಪಾ ಖೋತ, ಎಕ್ಸಂಬಾ ರೂ. ೧ ಲಕ್ಷ, ರಾಜಶೇಖರ ಸನಾಲ, ಸವದಿ ರೂ. ೩ ಲಕ್ಷ, ಸಾಯಿ ಪಾಟೀಲ, ವಾಳಕಿ ರೂ. ೫೦ ಸಾವಿರ, ಶಿವಕುಮಾರ ಮಹಾಜನ, ಗೋಟಾಲ ರೂ. ೩ ಲಕ್ಷ, ರೇಖಾ ಕೋಳಿ, ಕೊಂಗನೊಳ್ಳಿ ರೂ.೫೦ ಸಾವಿರ, ಯಲ್ಲಪ್ಪಾ ತಂಗಡಿ, ಬಸ್ತವಾಡ ರೂ. ೩ ಲಕ್ಷ, ಶಿತಲಕುಮಾರ ಅಲತಗೆ, ಮಾಂಜರಿ ರೂ. ೩ ಲಕ್ಷ, ಶೃಷ್ಠಿ ಐನಾಪೂರೆ, ದಿಗ್ಗೆವಾಡಿ ರೂ.೨ ಲಕ್ಷ, ಪ್ರಜ್ವಲ ನಾಯಿಕ ಕೆಂಪಟ್ಟಿ ರೂ.೫೦ ಸಾವಿರಗಳನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಲ್ಲಿ ಹಾಗೂ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ೪೧ ಜನರಿಗೆ ರೂ.೧೩.೫೦ ಲಕ್ಷ ಗಳು ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಚಿಕ್ಕೋಡಿ ಲೋಕಸಭಾ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರ ಶಿಪಾರಸ್ಸಿನ ಮೇರಿಗೆ ಆಸ್ಪತ್ರೆ ವ್ಯಧ್ಯಕೀಯ ಚಿಕ್ಸಿತೆಗಾಗಿ ಪರಿಹಾರ ಧನವನ್ನು ಮಂಜೂರು ಮಾಡಿಸಲಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ