Breaking News

ಚಲಿಸುತ್ತಿರುವ ರೈಲಿನಡಿ ಸಿಲುಕಿದ ಹರಿಯಾಣದ ಮಹಿಳೆ ಮುಂದೇನಾಯ್ತು..?

Spread the love

ನೋಡುಗರಿಗೆ ಎದೆ ಝಲ್​ ಎನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಹಿಳೆಯೊಬ್ಬರು ಚಲಿಸುತ್ತಿರುವ ರೈಲಿನ ಕೆಳಗಿದ್ದು, ಉಪಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಲಿಸುತ್ತಿರುವ ರೈಲಿನ ಕೆಳಗೆ ಮಹಿಳೆ ಇರುವುದನ್ನು ನೋಡಿ ಸುತ್ತಲಿನ ಜನ ದಂಗಾಗಿದ್ದಾರೆ.

ಹರಿಯಾಣದ ರಥಕ್​ನಲ್ಲಿ ಈ ಘಟನೆ ಸಂಭವಿಸಿದೆ. ರೈಲು ಸಿಗ್ನಲ್​ಗಾಗಿ ಕಾಯುತ್ತಿರುವಾಗ ಮಹಿಳೆ ಟ್ರೈನ್​ ಕೆಳಗಿನಿಂದ ಪಕ್ಕದ ರಸ್ತೆಗೆ ಪಾಸಾಗಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ರೈಲು ಕೂಡಲೇ ಚಲಿಸಿದ್ದು, ಮಹಿಳೆ ಪ್ರಾಣ ರಕ್ಷಣೆಗಾಗಿ ರೈಲು ಹಳಿಯ ಮಧ್ಯದಲ್ಲಿ ಮಲಗಿದ್ದಾರೆ. ರೈಲು ಸಂಪೂರ್ಣವಾಗಿ ಪಾಸಾಗುವವರೆಗೂ ಮಹಿಳೆ ಅಲ್ಲೇ ಇದ್ದು, ಬಳಿಕ ಸ್ಥಳೀಯರ ಸಹಾಯದಿಂದ ಮಹಿಳೆ ಸುರಕ್ಷಿತವಾಗಿ ಎದ್ದು ಹೋಗಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೋಡುಗರು ಮಹಿಳೆ ನಿರ್ಲಕ್ಷ್ಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ