Breaking News

ಕರ್ನಾಟಕಕ್ಕೆ ಇಂದು ಕರಾಳ ಸೋಮವಾರ: ರಾಜ್ಯದ 4 ಜಿಲ್ಲೆಗಳಲ್ಲಿ ಅವಘಡ, ಅಪಘಾತ, ದುರಂತ..

Spread the love

ಮನೆಗೆ ಬೆಂಕಿ ಹಚ್ಚಿ ದಂಪತಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಇಂದು ಹುಬ್ಬಳ್ಳಿಯ KIMS ಆಸ್ಪತ್ರೆಯಲ್ಲಿ ಪತಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಫೆ.10ರಂದು ನಡೆದಿದ್ದ ಘಟನೆ ಬಳಿಕ ಫೆ.12ರಂದು ಚಿಕಿತ್ಸೆ ಫಲಿಸದೆ ಪತ್ನಿ ರೇಖಾ ಮೃತಪಟ್ಟಿದ್ದರು. ಇದೀಗ, ಇಂದು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಆಕೆಯ ಪತಿಯೂ ಕೊನೆಯುಸಿರೆಳೆದಿದ್ದಾರೆ. ಕುಟುಂಬಸ್ಥರೆಲ್ಲರೂ ಜಾತ್ರೆಗೆ ತೆರಳಿದ್ದ ವೇಳೆ ದಂಪತಿ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಕುರಿತು, ಐಗಳಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಟಿಪ್ಪರ್​ ಲಾರಿ ಮಗುಚಿ ಕಾರ್ಮಿಕ ದುರ್ಮರಣ
ಇತ್ತ, ಕ್ವಾರಿಯಲ್ಲಿ ಟಿಪ್ಪರ್​ ಲಾರಿ ಮಗುಚಿ ಕಾರ್ಮಿಕ ದುರ್ಮರಣ ಹೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ಜಿಲ್ಲೆಯ ಜ್ಯೋತಿಗೌಡನಪುರದ ಶಿವಕುಮಾರ್(32) ಎಂದು ಗುರುತಿಸಲಾಗಿದೆ.
ಕಲ್ಲು ಕ್ವಾರಿಯ ತ್ಯಾಜ್ಯ ಸಾಗಿಸುತ್ತಿದ್ದಾಗ ಟಿಪ್ಪರ್ ಮಗುಚಿ ಅಪಘಾತ ಸಂಭವಿಸಿದೆ. ಈ ನಡುವೆ, ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಚಾಮರಾಜನಗರ ಜಿಲ್ಲಾಸ್ಪತ್ರೆ ಮುಂದೆ ಮೃತನ ಕುಟುಂಬಸ್ಥರು ಧರಣಿ ನಡೆಸಿದರು.

ಕಾರ್ಯಕ್ರಮವೊಂದಕ್ಕೆ ತೆರಳ್ತಿದ್ದ ಕುಟುಂಬಸ್ಥರು ತಲುಪಿದ್ದು ಮಾತ್ರ ಮಸಣಕ್ಕೆ
ಲಾರಿ ಡಿಕ್ಕಿಯಾಗಿ ಟ್ರ್ಯಾಕ್ಟರ್​ನಲ್ಲಿದ್ದ ಮೂವರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಹೊರವಲಯದ ಅಡವಿಹಳ್ಳಿ ಕ್ರಾಸ್ ಸಮೀಪ ಸಂಭವಿಸಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹೊಟ್ಟಿಗೇರನಹಳ್ಳಿಯ ದೊಡ್ಡಹಾಳ್ ಹನುಮಂತಪ್ಪ(46), ಹೊಳಿಯಮ್ಮ(32), ಲಕ್ಷ್ಮವ್ವ (42) ಮೃತ ದುರ್ದೈವಿಗಳು.

ಕುಟುಂಬಸ್ಥರು ಕಾರ್ಯಕ್ರಮವೊಂದಕ್ಕೆ ಟ್ರ್ಯಾಕ್ಟರ್​ನಲ್ಲಿ ತೆರಳ್ತಿದ್ದ ವೇಳೆ ರಸ್ತೆ ಬದಿ ಟ್ರ್ಯಾಕ್ಟರ್ ನಿಲ್ಲಿಸಿದ್ದಾಗ ಲಾರಿ ಡಿಕ್ಕಿಯಾಗಿದೆ. ಇನ್ನು, ಅಪಘಾತದ ನಂತರ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಹರಿದು ಯುವಕ ಸಾವು
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗೌಡೂರಲ್ಲಿ ವಿದ್ಯುತ್ ಹರಿದು ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಗುರಗುಂಟಾ ಗ್ರಾಮದ ಮಹೇಶ್‌(21) ಮೃತ ಯುವಕ. ಮಹೇಶ್​ ಮನೆಯ ಮೇಲೆ ವಿದ್ಯುತ್ ಲೈನ್‌ ದುರಸ್ತಿ ಮಾಡುತ್ತಿದ ವೇಳೆ ಅಪಘಡ ನಡೆದಿದೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ