Breaking News

ಬಿಜೆಪಿಯಲ್ಲಿ 20ವರ್ಷ ಡಿಂದ ದುಡಿದರು ನಮಗೆ ಕವಡೆ ಕಾಸಿನಿ ಕಿಮ್ಮತ್ತು ಇಲ್ಲಾ.: ದೀಪಾ ಕುಡಚಿ

Spread the love

ಮೂಲ ಬಿಜೆಪಿ ಗರನ್ನು ಕಡೆಗಣಿಸಿದ ಸಂಜಯ್ ಪಾಟೀಲ್ ವಿರುದ್ದ ಹರಿಹಾಯ್ದ ದೀಪಾ ಕುಡಚಿ
ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಿ ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕಲಾಗುತ್ತಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮತ್ತು ಬಿಜೆಪಿ ಮುಖಂಡೆ ಡಾ. ಸೋನಾಲಿ ಸರ್ನೋಬತ್ ವಿರುದ್ದ ಕರ್ನಾಟಕ ನೀರು ಸರಬರಾಜು ನಿರ್ದೇಶಕಿ ದೀಪಾ ಕುಡುಚಿ ಗಂಭೀರ ಆರೋಪ ಮಾಡಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮೂಲ‌, ವಲಸೆ ಬಿಜೆಪಿಗರಿಗೆ ತಾರತಮ್ಯವಾಗುತ್ತಿದೆ. ಪಕ್ಷಕ್ಕಾಗಿ ಕಳೆದ 20 ವರ್ಷಗಳಿಂದ ಕೆಲಸ ಮಾಡಿದವರಿಗೆ ಮಣೆ ನೀಡುವ ಬದಲು ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕುತ್ತಿದ್ದಾರೆ. ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದವರನ್ನು ಖಾನಾಪುರ ಮಹಿಳಾ‌ ಘಟಕದ ಅಧ್ಯಕ್ಷೆಯನ್ನಾಗಿ ಮಾಡಿದ್ದಾರೆ‌.

ಅಲ್ಲದೆ ಡಾ. ಸೋನಾಲಿ ಸರ್ನೋಬತ್ ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರೂ ಸಾಕಷ್ಟು ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದು ಬೆಳಗಾವಿ ಜನಸೇವಕ ಸಮಾವೇಶದ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ನಮಗೆ ಏರ್ ಪೋಟ್೯ ನಿಲ್ದಾಣದಲ್ಲಿ ಮುಖ್ಯಸ್ಥೆ ಎಂದು ನೇಮಕ ಮಾಡಿದ್ದರೂ ಮೂಲ ಬಿಜೆಪಿಗರ‌ನ್ನು ಕಡೆಗಣಿಸಿ ಡಾ. ಸೋನಾಲಿ ಸರ್ನೋಬತ್ ಹಾಗೂ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ರಾತ್ರೋ ರಾತ್ರಿ ಪಟ್ಟಿಯನ್ನು ಬದಲಾವಣೆ ಮಾಡಿದ್ದಾರೆ.

ಈ ಕುರಿತು ಪಕ್ಷದ ವರಿಷ್ಠರಿಗೆ ದೂರು ನೀಡಲಾಗುವುದು ಎಂದರು. ನಾನು ಕೂಡ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚಯನಾವಣೆಯ ಆಕಾಂಕ್ಷಿ. ಈ ಕುರಿತು ಯಾವ ಯಾವ ನಾಯಕರನ್ನು ಭೇಟಿಯಾಗಬೇಕೋ ಮಾಡಿ ಆಗಿದೆ ಎಂದು ಹೇಳಿದರು.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ