Breaking News
Home / ಜಿಲ್ಲೆ / ಬೆಂಗಳೂರು / 53 ವರ್ಷಗಳ ಅನುಭವದಲ್ಲಿ ಇದೇ ಮೊದಲು; ಮೋಡ ಅಡ್ಡ ಬಂದಿದ್ದರಿಂದ ಯುದ್ಧಕಾಂಡ ನಡೆಯಬಹುದು’

53 ವರ್ಷಗಳ ಅನುಭವದಲ್ಲಿ ಇದೇ ಮೊದಲು; ಮೋಡ ಅಡ್ಡ ಬಂದಿದ್ದರಿಂದ ಯುದ್ಧಕಾಂಡ ನಡೆಯಬಹುದು’

Spread the love

ಬೆಂಗಳೂರು: ಗವಿಗಂಗಾಧರೇಶ್ವರನ ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಅಡ್ಡವಾಗಿದೆ. ಭಾಸ್ಕರನು ಅಗೋಚರವಾಗಿ ಲಿಂಗ ಸ್ಪರ್ಶಿಸಿ ಹಾದುಹೋಗಿದ್ದಾನೆ. ಈ ಬಗ್ಗೆ, ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

ದೈವ ನಿರ್ಣಯ ದೇವರಿಗೆ ಮಾತ್ರ ಗೊತ್ತಿರುತ್ತದೆ. ನನ್ನ 53 ವರ್ಷಗಳ ಅನುಭವದಲ್ಲಿ ಇದೇ ಮೊದಲ ಬಾರಿ ಹೀಗಾಗುತ್ತಿದೆ. ಕಳೆದ ವರ್ಷ ಈಶ್ವರನ ಮೇಲೆ 2.36 ನಿಮಿಷ ಸೂರ್ಯ ಕಿರಣವಿತ್ತು. ಹಾಗಾಗಿ, ಕಳೆದ ವರ್ಷ ಕೊರೊನಾ ಇಡೀ ವಿಶ್ವವನ್ನು ಕಾಡಿತ್ತು. 2020ರ ವರ್ಷದ ಇಡೀ ವಿಶ್ವಕ್ಕೆ ಸಂಕಷ್ಟದ ವರ್ಷವಾಗಿತ್ತು. ಈ ವರ್ಷ ಅಗೋಚರವಾಗಿ ಸೂರ್ಯ ಪೂಜೆ ಮಾಡಿದ್ದಾನೆ. ಅಗೋಚರ ಸ್ಪರ್ಶವಾಗಿದ್ದರಿಂದ ಯಾವುದೇ ಸಮಸ್ಯೆಯಿಲ್ಲ. 2019 ವರ್ಷದಂತೆ 2021ರ ವರ್ಷ ಶುಭಮಯವಾಗಿರುತ್ತದೆ. ಪ್ರಕೃತಿಯಲ್ಲಿ ಉಂಟಾಗಿದ್ದ ಕೊರೊನಾ ಮಾರಿ ತೊಲಗಲಿದೆ. 20 ನಿಮಿಷಗಳ ಮುಂಚೆ ದಕ್ಷಿಣಾಯಣದಲ್ಲಿ ಸೂರ್ಯನಿದ್ದನು. ಈಗ ಉತ್ತರಾಯಣ ಕಾಲ ಆರಂಭವಾಗಿದೆ ಎಂದು ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.

ಗಂಗಾಧರನಿಗೆ ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಅಡ್ಡವಾಗಿದೆ. ಮೋಡ ಅಡ್ಡ ಬಂದಿದ್ದರಿಂದ ಯುದ್ಧಕಾಂಡ ನಡೆಯಬಹುದು. ಶಿವನ ಕ್ಷೇತ್ರಗಳಲ್ಲಿ ಮೃತ್ಯುಂಜಯ ಪೂಜೆಯಿಂದ ಮೋಕ್ಷ ಲಭಿಸುತ್ತದೆ. ಮಾಘಮಾಸದಲ್ಲಿ ಅತಿರುದ್ರ ಮಹಾಯಾಗ ಮಾಡುತ್ತೇವೆ. ಸ್ವಾಮಿ ಸನ್ನಿಧಿಯಲ್ಲಿ ಮಹಾಯಾಗದಿಂದ ಒಳ್ಳೆಯದಾಗಲಿದೆ. ಜಗದೋದ್ಧಾರಕ ಶಿವನು ಎಲ್ಲರನ್ನೂ ಸಂತುಷ್ಟಗೊಳಿಸುತ್ತಾನೆ. ಆಲಯದ ಅರ್ಧದವರೆಗೆ ಸೂರ್ಯ ರಶ್ಮಿ ಪ್ರವೇಶವಾಗಿತ್ತು. ಹಾಗಾಗಿ, ಅಗೋಚರವಾಗಿ ಸೂರ್ಯ ಪೂಜೆ ಸಲ್ಲಿಸಿದ್ದಾನೆ. ಪರಮೇಶ್ವರನ ಕೃಪೆ ಎಲ್ಲರ ಮೇಲೂ ಇರಲಿದೆ ಎಂದು ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಮಾತನಾಡಿದ್ದಾರೆ.

ಸೂರ್ಯ ರಶ್ಮಿ ಸ್ಪರ್ಶಕ್ಕೆ ಅಡ್ಡವಾದ ಮೋಡ: ಅಗೋಚರವಾಗಿಯೇ ಗವಿ ಗಂಗಾಧರನನ್ನು ಸ್ಪರ್ಶಿಸಿ ಮುಂದೆ ನಡೆದ ಭಾಸ್ಕರ

The post ’53 ವರ್ಷಗಳ ಅನುಭವದಲ್ಲಿ ಇದೇ ಮೊದಲು; ಮೋಡ ಅಡ್ಡ ಬಂದಿದ್ದರಿಂದ ಯುದ್ಧಕಾಂಡ ನಡೆಯಬಹುದು’


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ