ಅಕ್ಕ ಪ್ರೀತಿಸುತ್ತಿದ್ದ ಹುಡುಗನನ್ನೇ ಹತ್ಯೆಗೈದ ಅಪ್ರಾಪ್ತ ಬಾಲಕ
ಬೆಳಗಾವಿ:ಅಕ್ಕ ಪ್ರೀತಿಸುತ್ತಿದ್ದ ಹುಡುಗನನ್ನೇ ಹತ್ಯೆಗೈದ ಅಪ್ರಾಪ್ತ ಬಾಲಕ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಘಟನೆ. ರಾಜಾಪುರ ಗ್ರಾಮದ ಮಂಜುನಾಥ ಸುಭಾಷ್ ಎಣ್ಣಿ (23) ಕೊಲೆಯಾದವ.
ಕಳೆದ ಹಲವು ವರ್ಷಗಳಿಂದ ಅಪ್ರಾಪ್ತ ಸಹೋದರಿಯನ್ನು ಪ್ರೀತಿಸುತ್ತಿದ್ದ ಮಂಜುನಾಥ. ಅಕ್ಕನ ಉಸಾಬರಿಗೆ ಬರಬೇಡ ಎಂದು ಹಲವು ಸಲ ಮಂಜುನಾಥಗೆ ವಾರ್ನ್ ಮಾಡಿದ್ದ ಅಪ್ರಾಪ್ತ ಬಾಲಕ. ಆದರೂ ಅಪ್ರಾಪ್ತ ಅಕ್ಕನ ಜೊತೆಗೆ ಫೋನ್ನಲ್ಲಿ ಮಾತನಾಡುತ್ತಿದ್ದ ಮಂಜುನಾಥ್. ಸಾಲದೆಂಬಂತೆ ಆಗಾಗ ಗ್ರಾಮದಲ್ಲಿ ಪ್ರೇಯಸಿಗೆ ಭೇಟಿ ಆಗುವುದನ್ನು ಮಾಡ್ತಿದ್ದ ಮೃತ ಮಂಜುನಾಥ.
ರಾಜಾಪುರ ಗ್ರಾಮದ ಚೂನಮ್ಮ ದೇವಿಯ ಪೂಜಾರಿ ಆಗಿದ್ದ ಮಂಜುನಾಥ ಎಣ್ಣಿ. ಬೆಳಗ್ಗೆ ಚೂನಮ್ಮ ದೇವರ ಪೂಜೆ ಮಾಡಲು ಬಂದಾಗ ಮಂಜುನಾಥ ಕೊಲೆಗೆ ಸಂಚು. ದೇವಸ್ಥಾನದಲ್ಲಿ ಯಾರೂ ಇಲ್ಲದಾಗ ಮಂಜುನಾಥ ತಲೆಗೆ ಕಬ್ಬಿನದ ರಾಡ್ ರಭಸವಾಗಿ ಹಲ್ಲೆ.
ತೀವ್ರ ರಕ್ತಸ್ರಾವದಿಂದ ದೇವಸ್ಥಾನ ಆವರಣದಲ್ಲೇ ಪ್ರಾಣಬಿಟ್ಟ ಮಂಜುನಾಥ ಎಣ್ಣಿ. ಸ್ಥಳಕ್ಕೆ ಘಟಪ್ರಭಾ ಠಾಣೆ ಪೊಲೀಸರ ಭೇಟಿ, ಪರಿಶೀಲನೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಬಂಧನ.
Laxmi News 24×7