ಶಿವಮೊಗ್ಗ: “ನಾನೂ ಕ್ರಿಕೆಟ್ ಪ್ಲೇಯರ್. ರಾಜಕೀಯದಲ್ಲಿಯೂ ಒಳ್ಳೆಯ ಬ್ಯಾಟಿಂಗ್ ಮಾಡಬೇಕು. ಗೂಗ್ಲಿ ಹಾಕದೇ ಸಕ್ಸಸ್ ಇಲ್ಲ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಜಾರಕಿಹೊಳಿ, “ಕ್ರಿಕೆಟ್ ಪಂದ್ಯಾವಳಿಗಾಗಿ ಶಿವಮೊಗ್ಗಕ್ಕೆ ಬಂದಿದ್ದೇನೆ. ಇದು ಖಾಸಗಿ ಕಾರ್ಯಕ್ರಮ” ಎಂದರು. ಮುಂದುವರೆದು ಮಾತನಾಡಿ, “ರಾಜಕೀಯದಲ್ಲಿಯೂ ಒಳ್ಳೆಯ ಬ್ಯಾಟಿಂಗ್ ಮಾಡಬೇಕು. ಸ್ವಿಂಗ್, ಗೂಗ್ಲಿ ಹಾಕಬೇಕು. ಒಳ್ಳೆಯ ಬ್ಯಾಂಟಿಂಗ್ ಮಾಡದೆ ಹೋದರೆ ಉಳಿಗಾಲವಿಲ್ಲ” ಎಂದರು. ಇದೇ ವೇಳೆ, “ಈಗ ನಾನು ರಾಜಕೀಯದಲ್ಲಿ ಆಟ ಆಡುವವರಿಗೆ ಸಪೋರ್ಟ್ ಮಾಡ್ತಾ ಇದ್ದೇನೆ” ಎಂದು ಹೇಳಿದರು.![]()
ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಘೋಷಣೆ ಕೂಗುತ್ತಿದ್ದಂತೆಯೇ ಕಾರ್ಯಕರ್ತರಿಗೆ ಸಚಿವರು, “ನೀವು ಈ ರೀತಿ ಕೂಗಿದರೆ ಯಾವುದೇ ಪ್ರಯೋಜನವಿಲ್ಲ. ಹೀಗೆ ಕೂಗುವುದನ್ನು ಬಿಟ್ಟರೆ ನೀವೂ ಲೀಡರ್ ಆಗುತ್ತೀರಿ” ಎಂದು ಕಿವಿಮಾತು ಹೇಳಿದರು.
ಬಜೆಟ್ ನಂತರ ಸಿಎಂ ಬದಲಾಗುತ್ತಾರೆಯೇ ಎಂಬ ಪ್ರಶ್ನೆಗೆ, “ಅದೆಲ್ಲಾ ದೆಹಲಿ ಹಾಗೂ ಬೆಂಗಳೂರಿನಲ್ಲಿ ಕೇಳಬೇಕು” ಎಂದು ತಿಳಿಸಿದರು.
Laxmi News 24×7