ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ ಸ್ಪರ್ಧೆ; ಅಜೀತ್ ಸಿದ್ಧನ್ನವರ
’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026
ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ ಸ್ಪರ್ಧೆ
ಜ.19 ರಂದು ಗೋಕಾಕಿನಲ್ಲಿ ಆಯೋಜನೆ
ಅಜೀತ್ ಸಿದ್ಧನ್ನವರ ಮಾಧ್ಯಮಗೋಷ್ಟಿ
ಖ್ಯಾತ ಸಮಾಜ ಸೇವಕರು ಹಾಗೂ ಸತೀಶ್ ಜಾರಕಿಹೊಳಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ, ಜನವರಿ 19, 2026ರಂದು ಗೋಕಾಕಿನ ವಾಲ್ಮೀಕಿ ಮೈದಾನದಲ್ಲಿ ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅಜೀತ್ ಸಿದ್ಧನ್ನವರ ಹೇಳಿದರು.
ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ 11 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿರುವ ಈ ಕ್ರೀಡಾಕೂಟವು ಇಂದು ಭಾರತದ ಪ್ರತಿಷ್ಠಿತ ‘ಬ್ರಾಂಡ್ ಇವೆಂಟ್’ ಆಗಿ ಹೊರಹೊಮ್ಮಿದೆ. ಯುವ ಸಮುದಾಯವನ್ನು ಮಾದಕ ವ್ಯಸನಗಳಿಂದ ಮುಕ್ತಗೊಳಿಸಿ, ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗುವ ಈ ಸ್ಪರ್ಧೆಯಲ್ಲಿ ವಿಜೇತರಿಗೆ ಭಾರಿ ಮೊತ್ತದ ಬಹುಮಾನವನ್ನು ನೀಡಲಾಗುವುದು. ಈ ಬಾರಿಯ ಸ್ಪರ್ಧೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಸಮಯದ ಮಿತಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಮೈಸೂರಿನಲ್ಲಿ ನಡೆಯಲಿರುವ “ಮಿಸ್ಟರ್ ಕನ್ನಡಿಗ-2025” ಸ್ಪರ್ಧೆಯಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಮಾತ್ರ ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದರು.
ಜಿಲ್ಲಾ ಮಟ್ಟದಿಂದ 70 ಹಾಗೂ ರಾಜ್ಯ ಮಟ್ಟದಿಂದ 80 ಸ್ಪರ್ಧಿಗಳನ್ನು ಈ ಮೆಗಾ ಇವೆಂಟ್‌ಗೆ ಆಯ್ಕೆ ಮಾಡಲಾಗುವುದು. ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮಕ್ಕೆ ಏಷ್ಯನ್ ಪದಕ ವಿಜೇತ ಸುನಿಲ್ ಆಪ್ಟೇಕರ್ ಸೇರಿದಂತೆ ಹಲವು ಸಾಧಕರು ಸಾಥ್ ನೀಡಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಮಾಧ್ಯಮಗಳ ಸಹಕಾರವನ್ನು ಸಂಘಟಕರು ಕೋರಿದ್ದಾರೆ. ಬೈಟ್
ಈ ಸಂದರ್ಭದಲ್ಲಿ ಇದೇ ಟ್ರೋಫಿಯನ್ನು ಕೂಡ ಗಣ್ಯರು ಅನಾವರಣಗೊಳಿಸಲಾಯಿತು. ಈ ವೇಳೆಸುನೀಲ್ ಆಪ್ಟೇಕರ್, ರಿಯಾಝ್ ಚೌಗುಲಾ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
Laxmi News 24×7