ಬೆಳಗಾವಿಯಲ್ಲಿ ಸಂಭ್ರಮದ ಫಲಪುಷ್ಪ ಪ್ರದರ್ಶನ….
ಕೈಬೀಸಿ ಕರೆಯುತ್ತಿವೆ ನಾಡಿದ ದಿಟ್ಟ ಮಹಿಳೆಯರ ಕಲಾಕೃತಿಗಳು
ಬೆಳಗಾವಿಯಲ್ಲಿ ಆಯೋಜಿಸಿರುವ ಫಲ ಮತ್ತು ಪುಷ್ಪ ಪ್ರದರ್ಶನಕ್ಕೆ ಜನರಿಂದ ಅತ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ಬಾರಿ ನಾಡಿನ ದಿಟ್ಟ ಮಹಿಳೆಯರ ಇತಿಹಾಸ ದರ್ಶನವು ಎಲ್ಲರ ಗಮನ ಸೆಳೆಯುತ್ತಿದೆ.
ಹೌದು, ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಹ್ಯೂಮ್ ಪಾರ್ಕ್’ನಲ್ಲಿ ಬೆಳಗಾವಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಬೆಳಗಾವಿ ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಜಿಲ್ಲಾ ಕೃಷಿಕ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ಹ್ಯೂಮ್ ಪಾರ್ಕ್ ನಲ್ಲಿ ನಡೆದ 2025-26 ನೇ ಸಾಲಿನ ಜಿಲ್ಲಾ ಮಟ್ಟದ 66 ನೇ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಚಾಲನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಕೆ.ಎಂ.ಜಾನಕಿ ಸೇರಿದಂತೆ ವಿವಿಧ ಗಣ್ಯರು ಚಾಲನೆ ನೀಡಿದ್ದರು.
ಈ ಬಾರಿಯ ಫಲ ಪುಷ್ಪ ಪ್ರದರ್ಶನದಲ್ಲಿ ಕನ್ನಡ ನಾಡಿನ ವೀರ ವನಿತೆಯ ಇತಿಹಾಸನವನ್ನು ತಿಳಿಸಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸೇರಿದಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದಿಟ್ಟ ಮಹಿಳೆಯರು ಮತ್ತು ಕಿತ್ತೂರು ಸಂಸ್ಥಾನದ ಗತವೈಭವವನ್ನು ತೋರ್ಪಡಿಸಲಾಗಿದೆ.
ಹೈಡ್ರೋಪೋನಿಕ್ಸ್, ಹನಿ ನೀರಾವರಿ, ಸಿರಿಧಾನ್ಯದಲ್ಲಿ ಮೂಡಿ ಬಂದ ವೃಕ್ಷತಾಯಿ ಸಾಲುಮರದ ತಿಮ್ಮಕ್ಕ, ಬಗೆಬಗೆಯ ಹೂವಿನಲ್ಲಿ ಮೂಡಿ ಬಂದ ವಲ್ಡ್ ಕಪ್ ಗೆದ್ದ ಮಹಿಳೆಯರು, ಹೂವಿನಲ್ಲಿ ನಂದಿ, ಬೆಳಗಾವಿಯ ರೈತರು ಬೆಳೆದ ವಿವಿಧ ಉತ್ಪನ್ನಗಳು ನೋಡುಗರನ್ನು ಕೈಬೀಸಿ ಕರೆಯುತ್ತಿವೆ. ಈ ಕುರಿತು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಐ.ಕೆ.ದೊಡ್ಡಮನಿ ಅವರು ಇನ್ ನ್ಯೂಸ್’ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.
ಕೊನೆಯ ದಿನದಂದು ಅತ್ಯುತ್ತಮ ಉತ್ಪಾದನೆ ಮಾಡಿದ ರೈತರಿಗೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವುದು.
Laxmi News 24×7