ಬೇಡವೆಂದರೂ ಪತ್ನಿಯನ್ನು ತವರಿಗೆ ಕರೆದೊಯ್ದ ತವರಿನವರು
ಪತ್ನಿ ಸೇರಿದಂತೆ ತವರು ಮನೆಯವರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪತಿ
ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಘಟನೆ

ಪತಿಯ ಮನೆಯಲ್ಲಿ ಜಗಳಕ್ಕೆ ಬೇಸತ್ತು ತವರು ಮನೆಗೆ ಹೋದ ಪತ್ನಿ ಹಾಗೂ ಆಕೆಯ ಕುಟುಂಬಸ್ಥರನ್ನು ಪತಿಯೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಡಿ.10 ರಂದು ಪತ್ನಿ ಹಾಗೂ ಅವರ ಕುಟುಂಬಸ್ಥರನ್ನು ಭೀಮಾ ಭೋಸಲೆ ಎಂಬಾತ ಕೊಲೆಗೆ ಯತ್ನಿಸಿದ್ದಾನೆ. ಭೀಮಾ ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದ ನಿವಾಸಿಯಾಗಿದ್ದಾನೆ. ಆತನ ಕಾಟ ತಾಳಲಾರದೇ ತವರು ಮನೆಗೆ ಹೋಗಿದ್ದ ಪತ್ನಿ ಹಾಗೂ ಅವರ ಮನೆಯವರನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ನಾನು ಬೇಡ ಅಂದರು ನೀವು ಹೇಗೆ ನನ್ನ ಪತ್ನಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಿರಿ ಎಂದು ಸಿಟ್ಟಾಗಿ ಈ ಕೃತ್ಯ ಎಸಗಿದ್ದಾನೆ.
ಪತ್ನಿಯ ತವರು ಮನೆಗೆ ಹೋಗಿ ಮನೆಯಲ್ಲಿದ್ದ 6 ಜನರ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ್ದಾನೆ.
ಸಂಜು ಸಾಳುಂಕೆ,ಶಂಕರ್ ಸಾಳುಂಕೆ, ಕೃಷ್ಣಾ ಸಾಳುಂಕೆ, ಅಂಕುಶ ಫಡತಾರೆ,ಮನೋಹರ ಫಡತಾರೆ, ಪತ್ನಿ ರಾಣಿ ಭೋಸಲೆಗೆ ಗಂಭೀರ ಗಾಯವಾಗಿವೆ. ಸದ್ಯಕ್ಕೆ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಗಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7