Breaking News
Home / ಜಿಲ್ಲೆ / ಮೈಸೂರ್ / ಇಂದು ಸಂಜೆ 6 ಗಂಟೆಯಿಂದ ಜನವರಿ 2ರ ಸಂಜೆಯವರೆಗೂ Chamundi Hill ಪ್ರವೇಶ ನಿಷೇಧಿಸಲಾಗಿದೆ.

ಇಂದು ಸಂಜೆ 6 ಗಂಟೆಯಿಂದ ಜನವರಿ 2ರ ಸಂಜೆಯವರೆಗೂ Chamundi Hill ಪ್ರವೇಶ ನಿಷೇಧಿಸಲಾಗಿದೆ.

Spread the love

ಮೈಸೂರು (ಡಿ. 31): ಮತ್ತೆ ಹೆಚ್ಚುತ್ತಿರುವ ಕೊರೋನಾದಿಂದಾಗಿ ಈ ಬಾರಿಯ New Year Celebrationಗೂ ಬ್ರೇಕ್ ಬಿದ್ದಿದೆ. ಬೆಂಗಳೂರು ಮಾತ್ರವಲ್ಲದೆ ಮೈಸೂರಿನಲ್ಲಿ ಕೂಡ ಹೊಸ ವರ್ಷಕ್ಕೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಇಂದು ರಾತ್ರಿ 11.30ರೊಳಗೆ ಎಲ್ಲ ಕಾರ್ಯಕ್ರಮ ಮುಗಿಸಬೇಕು. ಹೋಟೆಲ್, ರೆಸ್ಟೋರೆಂಟ್, ಪಬ್ ಅಂಗಡಿ‌‌, ಮುಗ್ಗಟ್ಟುಗಳನ್ನು ಮುಚ್ಚಬೇಕು ಎಂದು ಈಗಾಗಲೇ ಎಲ್ಲ ಅಧಿಕಾರಿಗಳನ್ನೂ ಕರೆದು ಸೂಚನೆ‌ ನೀಡಲಾಗಿದೆ. ಇಂದು ಸಂಜೆ 6 ಗಂಟೆಯಿಂದ ಜನವರಿ 2ರ ಸಂಜೆಯವರೆಗೂ Chamundi Hill ಪ್ರವೇಶ ನಿಷೇಧಿಸಲಾಗಿದೆ.

ಮೈಸೂರಿನಲ್ಲಿ ಇಂದು ರಾತ್ರಿ ಡಿಜೆ,‌ ಡ್ಯಾನ್ಸ್‌ ಸೇರಿ ಯಾವುದೇ ಕಾರ್ಯಕ್ರಮ ಮಾಡಬಾರದೆಂದು ಸೂಚಿಸಲಾಗಿದೆ. ರಸ್ತೆಯಲ್ಲಿ ಎಲ್ಲೂ ಕೂಡ ಪಾರ್ಟಿ ಮಾಡುವ ಹಾಗಿಲ್ಲ. ರಸ್ತೆಯಲ್ಲಿ ಓಡಾಡಿ ಶುಭಾಶಯ ತಿಳಿಸುವುದು, ಮನರಂಜನೆಗೆ ಅವಕಾಶ ಇಲ್ಲ. ಈ ದಿನ ವಿಶೇಷ ದಿನ ಎಂದು ಪರಿಗಣಿಸಿ‌ ಕ್ರಮ ಕೈಗೊಳ್ಳಲಾಗಿದೆ. 5ಕ್ಕೂ ಹೆಚ್ಚು ಮಂದಿ ಸೇರದಂತೆ‌ ಸೂಚನೆ ನೀಡಲಾಗಿದೆ. ಮೈಸೂರಿನ ಎಲ್ಲ ಠಾಣಾಧಿಕಾರಿಗಳನ್ನು ಆಯಾ ವ್ಯಾಪ್ತಿಗೆ ಗಸ್ತಿಗೆ‌ ನೀಯೋಜನೆ‌ ಮಾಡಲಾಗಿದೆ ಎಂದು ಮೈಸೂರು ಕಾನೂನು ಸುವ್ಯವಸ್ಥೆ‌ ಡಿಸಿಪಿ ಪ್ರಕಾಶ್ ಗೌಡ ಹೇಳಿದ್ದಾರೆ.ಇಂದು ಸಂಜೆ 6 ಗಂಟೆಯಿಂದಲೇ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಜನವರಿ 2ರವರೆಗೂ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಅನಗತ್ಯವಾಗಿ‌ ಹೊಸ ವರ್ಷದ ದಿನ ಓಡಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರಿನಲ್ಲಿ ಹೊಸ ವರ್ಷದ ಮಾರ್ಗಸೂಚಿ ಬಗ್ಗೆ ಡಿಸಿಪಿ ಪ್ರಕಾಶ್ ಗೌಡ ಮಾಹಿತಿ ನೀಡಿದ್ದಾರೆ.ಮೈಸೂರಿನಲ್ಲಿ ಹೊಸ ವರ್ಷಾಚರಣೆಗೆ ಹೊಸ ನಿಯಮಾವಳಿ ಜಾರಿಗೊಳಿಸಲಾಗಿದೆ. ಮೈಸೂರಿನಲ್ಲಿ ಹೊಸ ವರ್ಷಾಚರಣೆಯ ವಿಶೇಷ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಮೈಸೂರಿನ ಯಾವುದೇ ಕ್ಲಬ್, ಪಬ್, ರೆಸ್ಟೋರೆಂಟ್, ರೆಸಾರ್ಟ್ ಹಾಗೂ ಹೋಟೆಲ್‌ಗಳಲ್ಲಿ ವಿಶೇಷ ಪಾರ್ಟಿ ಇಲ್ಲ. ರಸ್ತೆಗಳಲ್ಲಿ ಡಿಜೆ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಡಿ. 31ರ ರಾತ್ರಿ ಮೈಸೂರಿನ ಹಲವು ರಸ್ತೆಗಳಲ್ಲಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಮೈಸೂರು ಅರಮನೆಯಲ್ಲೂ ಹೊಸ ವರ್ಷ ಸ್ವಾಗತ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.


Spread the love

About Laxminews 24x7

Check Also

ವರುಣಾ ಕ್ಷೇತ್ರದ ಸಿದ್ದರಾಮನ ಹುಂಡಿಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಬಗ್ಗೆ ಪ್ರತಾಪ್ ಸಿಂಹ ನಿಷ್ಪಕ್ಷಪಾತ ಚುನಾವಣೆಗೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

Spread the love ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಸಿದ್ದರಾಮನ ಹುಂಡಿಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ