Breaking News

ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ “72ನೇ ಸಹಕಾರ ಸಪ್ತಾಹ” ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಸಭೆ ಬಳಿಕ ಪತ್ರಿಕಾಗೋಷ್ಠಿ

Spread the love

ಇಂದು ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ “72ನೇ ಸಹಕಾರ ಸಪ್ತಾಹ” ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದೆ.

ಸಹಕಾರ ಚಳವಳಿ ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯವಿದ್ದು, ಜವಾಹರಲಾಲ್ ನೆಹರೂ ಅವರ ಜಯಂತಿಯ ದಿನ ನವೆಂಬರ್ 14ರಂದು 72ನೇ ಸಹಕಾರಿ ಸಪ್ತಾಹದ ಉದ್ಘಾಟನೆ ಮಾಡಲಿದ್ದೇವೆ.

ಅರಮನೆ ಮೈದಾನದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಸಪ್ತಾಹ ನಡೆಯಲಿದ್ದು, ಮಂಗಳೂರು, ರಾಯಚೂರು, ಹಾವೇರಿ, ಹೊಸಪೇಟೆ, ಕೊಪ್ಪಳದಲ್ಲಿ ಸಪ್ತಾಹ ನಡೆಯಲಿದೆ. ಸಮಾರೋಪ ಸಮಾರಂಭವು ನವೆಂಬರ್ 20ರಂದು ಚಾಮರಾಜನಗರದಲ್ಲಿ ನಡೆಯಲಿದೆ.

“ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭವೂ ಸಪ್ತಾಹದ ಉದ್ಘಾಟನೆಯ ದಿನವೇ ನಡೆಯಲಿದೆ. ರಾಜ್ಯದ ಎಲ್ಲಾ ಸಹಕಾರಿ ಧುರೀಣರು ನನಗೇ ಜವಾಬ್ದಾರಿ ಕೊಟ್ಟಿದ್ದು ನಾನೇ “ಸಹಕಾರ ರತ್ನ” ಪ್ರಶಸ್ತಿಗೆ ಹೆಸರು ಸೂಚಿಸಲು ಕೋರಿದ್ದಾರೆ. ಸಹಕಾರ ಮಹಾಮಂಡಳದ ಅಧ್ಯಕ್ಷರ ಜೊತೆ ಚರ್ಚಿಸಿ ಪ್ರಶಸ್ತಿಗೆ ಉತ್ತಮ ಸಹಕಾರಿಯನ್ನು ಆಯ್ಕೆ ಮಾಡುತ್ತೇನೆ.

ಹಾಲಿನ ಡೈರಿಗಳನ್ನು ಹಾಲಿನ ಒಕ್ಕೂಟಗಳ ಅಧೀನದಲ್ಲಿ ಮೊದಲ ಬಾರಿಗೆ ತಂದಿದ್ದು ನಾನೆ. ಹೀಗೆ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೆ. ನಾನು ಸಪ್ತಾಹದ ಉದ್ಘಾಟನೆಯನ್ನೂ ನೆರವೇರಿಸಿ, ಸಮಾರೋಪದಲ್ಲೂ ಭಾಗವಹಿಸುತ್ತೇನೆ.


Spread the love

About Laxminews 24x7

Check Also

ಡ್ರಗ್ಸ್ ದಂಧೆಕೋರರೊಂದಿಗೆ ಪೊಲೀಸರು ಶಾಮೀಲಾಗಿದ್ದು ಕಂಡುಬಂದ್ರೆ ಎಫ್ಐಆರ್ ದಾಖಲಿಸಿ ಸೇವೆಯಿಂದ ವಜಾ: ಜಿ. ಪರಮೇಶ್ವರ್

Spread the loveಬೆಳಗಾವಿ: ಡ್ರಗ್ಸ್ ಪಿಡುಗಿನ ವಿರುದ್ಧ ಸಮರ ಸಾರಿದ್ದು, ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಮಾದಕವಸ್ತು ಮಾರಾಟಕ್ಕೆ ಉತ್ತೇಜನ ನೀಡುವ ಸಿಬ್ಬಂದಿಗಳ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ