ಬಾಗಲಕೋಟೆಯಲ್ಲಿ ಬೆಂಕಿ ಅವಘಡ…7 ಜನರಿಗೆ ಗಾಯ
ಗಾಯಾಳುಗಳ ಆರೋಗ್ಯ ವಿಚಾರಿಸಿದ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ
ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಘಟನಾ ಸ್ಥಳಕ್ಕೆ ಮತ್ತು ಕುಮಾರೇಶ್ವರ
ಆಸ್ಪತ್ರೆಗೆ ಭೇಟಿ ನೀಡಿದರು. ಶಾಸಕ ಜೆ.ಟಿ. ಪಾಟೀಲ್ ಅವರೊಂದಿಗೆ ಸಚಿವರು, ಘಟನೆಯಲ್ಲಿ ಗಾಯಗೊಂಡಿರುವ 8 ಜನ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಘಟನೆ ಕುರಿತು ಅಧಿಕಾರಿಗಳು
ಮತ್ತು ಸ್ಥಳೀಯರಿಂದ ಮಾಹಿತಿ ಪಡೆದ ಸಚಿವ ತಿಮ್ಮಾಪುರ ಅವರಿಗೆ ಶಾಸಕ ಜೆ.ಟಿ. ಪಾಟೀಲ್ ಸೇರಿ ಅಧಿಕಾರಿಗಳು ಸಾಥ್ ನೀಡಿದರು.
Laxmi News 24×7