ಗೋಕಾಕದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯ ಜಯಂತಿ ಆಚರಣೆ
ಗೋಕಾಕ: ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಹಾಕಾವ್ಯ ರಾಮಾಯಣದ ಸೃಷ್ಟಿಕರ್ತ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿಯ ಜಯಂತಿಯನ್ನ ಆಚರಿಸಲಾಯಿತು. ಶ್ರೀ ಮಹರ್ಷಿ ವಾಲ್ಮೀಕಿಯ ಅವರ ಭಾವಚಿತ್ರ ಪುಷ್ಪ ನಮನ ಸಲ್ಲಿಸಲಾಯಿತು.
ಕಾಂಗ್ರೆಸ್ ಮುಖಂಡ ಶಿವು ಪಾಟೀಲ್ ಮಾತನಾಡಿ, ತಳಸಮುದಾಯದಲ್ಲಿ ಹುಟ್ಟಿದ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯ ರಚಿಸಿ ಮಹರ್ಷಿಗಳಾದರು. ಸಾಧನೆಗೆ ಜಾತಿ, ಕುಲ, ಧರ್ಮದ ಹಂಗಿಲ್ಲ, ಶ್ರದ್ಧೆ ಮತ್ತು ಪರಿಶ್ರಮವಿದ್ದರೆ ಯಾರು ಏನನ್ನೂ ಬೇಕಾದರೂ ಸಾಧಿಸಲು ಸಾಧ್ಯವೆಂಬುದಕ್ಕೆ ಮಹರ್ಷಿ ವಾಲ್ಮೀಕಿಯವರ ಬದುಕೇ ಆದರ್ಶ ಎಂದರು.
ರಾಮಾಯಣ ಮಹಾಕಾವ್ಯವ ರಚಿಸಿದವರು ಶ್ರೀ ಮಹರ್ಷಿ ವಾಲ್ಮೀಕಿಯವರು. ಅವರು ರಾಮಾಯಣದಲ್ಲಿ ಉಲ್ಲೇಖಿಸಿರುವ ಅಂಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ. ಆದಿಕವಿ ಹೇಳಿಕೊಟ್ಟ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದರು.
ವಿಶ್ವಕ್ಕೆ ರಾಮಾಯಣ ಎಂಬ ಅತಿದೊಡ್ಡದಾದ ಕಾವ್ಯವನ್ನು ಕೊಡುಗೆ ನೀಡಿದ್ದಾರೆ. ರಾಮಾಯಣದಲ್ಲಿ ಒಳಗೊಂಡಿರುವ ತತ್ವಾದರ್ಶ ಕೊಡುಗೆ ಅಪಾರವಾಗಿದ್ದು, ಅವರು ನೀಡಿರುವ ಆದರ್ಶ ವಿಚಾರ-ತತ್ವಾದಾರ್ಶಗಳು ನಮ್ಮ ದೇಶ ಮಾತ್ರವಲ್ಲದೇ ಮಲೇಶಿಯಾ, ಕಾಂಬೋಡಿಯಾ ಸೇರಿದಂತೆ ಬೇರೆ-ಬೇರೆ ದೇಶಗಳಲ್ಲಿ ಪ್ರಚಲಿತದಲ್ಲಿವೆ. ಲವ-ಕುಶರಿಗೆ ಗುರುವಾಗಿದ್ದವರು ವಾಲ್ಮೀಕಿ. ಅವರ ತತ್ವಗಳನ್ನು ಜೀವನದಲ್ಲಿ ಪಾಲನೆ ಮಾಡಬೇಕು ಎಂದರು..
ರಾಮಾಯಣವನ್ನು ಮಹಾಕಾವ್ಯ, ಪುರಾಣ , ನಮ್ಮ ಇತಿಹಾಸ. ವಾಲ್ಮೀಕಿ ಮಹರ್ಷಿಗಳು ಒಂದೇ ಸ್ಥಳದಲ್ಲಿ ಇದ್ದು ಇಡೀ ಅಖಂಡ ಭಾರತದ ಪ್ರತಿಯೊಂದು ಸ್ಥಳ ಅಲ್ಲಿನ ಸ್ಥಳ ಇತಿಹಾಸ, ಅಲ್ಲಿನ ವಾತಾವರಣ, ಬೆಟ್ಟಗುಡ್ಡ- ಪರ್ವತ, ಪ್ರಕೃತಿ ಸೌಂದರ್ಯ, ಕೆಲವು ಸ್ಥಳಗಳಲ್ಲೆ ಬೆಳೆಯುವ ಗಿಡ ಮರಗಳ ವಿವರಣೆ, ಸರೋವರ, ನದಿ-ಸಮುದ್ರಗಳ ವಿವರಣೆ ಈ ರೀತಿ ಪ್ರತಿಯೊಂದ ಕರಾರುವಕ್ಕಾಗಿ ಬರೆದು ನಮ್ಮ ಭರತವರ್ಷದ ಮಹಾನ್ ಸಂಸ್ಕೃತಿಯನ್ನು ಪಸರಿಸಿದ ಆ ಮಹಾನ್ ಮಹರ್ಷಿ ವಾಲ್ಮೀಕಿ ರವರಿಗೆ ಎಂತಹ ಆಗಾದ ಆಧ್ಯಾತ್ಮಿಕ ತಪಸ್ ಶಕ್ತಿ ! ಇಂತಹ ಶ್ರೇಷ್ಠ ಆದಿಕವಿ ಮಹರ್ಷಿ ವಾಲ್ಮೀಕಿ ರವರ ಜಯಂತಿ ಆಚರಿಸಲಾಗುತ್ತಿದೆ.
“ವಿಶ್ವಕ್ಕೆ ಒಳ್ಳೆಯ ಸಂದೇಶ ಮಹಾನ್ ಕವಿ ಅವರು ಎಂದು ತಿಳಿಸಿದರು.
ಈ ವೇಳೆ ಸಚಿವ ಆಪ್ತ ಸಹಾಯಕ ಶಿವು ಪಾಟೀಲ, ಸಚಿವರ ಆಪ್ತ ಸಹಾಯಕರಾದ ವಿ.ಆರ್. ಪರಸನ್ನವರ, ಪಾಂಡು ರಂಗಸುಬೆ, ವಿಠ್ಠಲ ಪರಸನ್ನವರ್, ಮಹೇಶ ಚಿಕ್ಕೋಡಿ, ವಿನೋದ ಡೋಂಗ್ರೆ, ಮಂಜು ಸನದಿ , ವಿರಣ್ಣ ವಡರ್ , , ಮಾರುತಿ ಗುಟಗುದ್ದಿ, ಪ್ರಕಾಶ್ ಬಸ್ಸಾಪುರೆ, ಪಾಂಡು ರಂಗಸುಬೆ, ಸುರೇಶ್ ಮುದ್ದಪ್ಪಗೋಳ, ಪ್ರವೀಣ್ ಗುಡ್ಡಾಕಾಯ ಸೇರಿದಂತೆ ಹಿಲ್ ಗಾರ್ಡನ್ ಹಾಗೂ ಇತರರು ಇದ್ದರು.”