ಕೃಷಿ ತೋ ನಾಸ್ತಿ ದುರ್ಭಿಕ್ಷಂ’ನಿಪ್ಪಾಣಿಯ ಶ್ರೀ ಹಾಲಸಿದ್ಧನಾಥ ಕೋ ಆಫ್ ಶುಗರ ಫ್ಯಾಕ್ಟರಿ ಲಿ.,(ಮಲ್ಟಿ – ಸ್ಟೇಟ್)
ವಾರ್ಷಿಕ ಸರ್ವಸಾಧಾರಣ ಸಭೆಯ ಅಂಗವಾಗಿ ವಿಶೇಷವಾಗಿ ರೈತರಿಗೆ ಹೊಸ ತಂತ್ರಜ್ಞಾನದ ಬಗ್ಗೆ ಪರಿಚಯ
ಮಾಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ‘ಕೃಷಿ ಪ್ರದರ್ಶನ’ ಕಾರ್ಯಕ್ರಮದಲ್ಲಿ ಭಾಗವಹಿಸಿ,ಕೃಷಿ ಮಳಿಗೆಯನ್ನು ವೀಕ್ಷಿಸಲಾಯಿತು.
ಅನ್ನದಾತರಿಗೆ ಅನುಕೂಲವಾಗುವ ಉದ್ದೇಶದಿಂದ ಹಲವಾರು ಕೃಷಿ ಔಷಧ,ಹೊಸ ಯಂತ್ರೋಪಕರಣ,
ಸಲಕರಣೆಗಳು ಕಾರ್ಖಾನೆ ವತಿಯಿಂದ ರೈತರಿಗೆ ಪರಿಚಯಿಸಿದರು.ಕೃಷಿಯಲ್ಲಿ ಸಾಧನೆ ಮಾಡಿದ ರೈತರು ಬೆಳೆದ ಕಬ್ಬಿನ ಹೊಸ ತಳಿಗಳ ಪ್ರದರ್ಶನ ನಡೆಯಿತು.