ದಿ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಹಿನ್ನೆಲೆಯಲ್ಲಿ, ಇಂದು ಪಾಚ್ಛಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕರಗುಪ್ಪಿ ಗ್ರಾಮದ ಶ್ರೀ ಸೀಮಿದೇವಿ ದೇವಸ್ಥಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದೆ.
ಈ ಸಂದರ್ಭದಲ್ಲಿ ದಿ. ಅಪ್ಪಣಗೌಡ ಪಾಟೀಲ ಸಹಕಾರಿ ಪೆನಲ್‌ಗೆ ಅಮೂಲ್ಯ ಮತವನ್ನು ಕೋರುತ್ತಾ, ಬಸವಣ್ಣನವರ ತತ್ವಗಳನ್ನು ಪಾಲಿಸಿ, ಬುದ್ಧ–ಅಂಬೇಡ್ಕರ್ ಅವರ ಮಾರ್ಗದಲ್ಲಿ ಜನಸೇವೆಯಲ್ಲಿ ತೊಡಗಿರುವ ಶ್ರೀ ಸತೀಶ
ಜಾರಕಿಹೊಳಿಯವರ ನೇತೃತ್ವದಲ್ಲಿ ನಮ್ಮ ಪೆನಲ್ ಸದಾ ರೈತರ ಹಾಗೂ ಜನರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. 30 ವರ್ಷಗಳಿಂದ ಆಗದೇ ಉಳಿದಿದ್ದ ಹಲವು ಕೆಲಸಗಳನ್ನು ನಮ್ಮ ಸಹಕಾರಿಯ ನೂತನ ಆಡಳಿತ ಮಂಡಳಿ ಸ್ವತಂತ್ರವಾಗಿ ಕೇವಲ 60 ದಿನಗಳಲ್ಲಿ ನೆರವೇರಿಸಿದೆ. ನಿರಂತರ ಜ್ಯೋತಿ ಯೋಜನೆಯಡಿ ಬೆಳಕಿನ ಹಕ್ಕನ್ನು ಮನೆಮನೆಗೆ ತಲುಪಿಸುತ್ತಿದ್ದು, ಹೊಲಗಳಿಗೆ ಪ್ರತ್ಯೇಕ ಟಿಸಿಗಳನ್ನು ಅಳವಡಿಸುವ ಕಾರ್ಯವೂ ಶೀಘ್ರಗತಿಯಲ್ಲಿ ನಡೆಯುತ್ತಿದೆ. ಹೀಗಾಗಿ, ರೈತರ ಹಿತ, ಜನರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ದಿ. ಅಪ್ಪಣಗೌಡ ಪಾಟೀಲ ವಿದ್ಯುತ್ ಸಹಕಾರಿ ಪೆನೆಲ್‌ಗೆ ನೀವು ಬೆಂಬಲ ನೀಡಿ, ಭಾರಿ ಬಹುಮತದಿಂದ ಜಯಶೀಲರನ್ನಾಗಿ ಮಾಡುವಂತೆ ವಿನಂತಿಸಿದೆ.
ಈ ವೇಳೆ ಸಹಕಾರಿಯ ನಿರ್ದೇಶಕರಾದ ಶ್ರೀ ರವಿ ಹಿಡಕಲ್, ಮುಖಂಡರಾದ ಶ್ರೀ ಮಂಜುಗೌಡಾ ಪಾಟೀಲ, ಶ್ರೀ ಮಹಾಂತೇಶ ಮಗದುಮ್ಮ, ಶ್ರೀ ಶಂಕರ ಗುಡಸ್, ಶ್ರೀ ಸೋಮನಗೌಡ ಪಾಟೀಲ, ಕರಗುಪ್ಪಿ ಗ್ರಾ.ಪಂ. ಅಧ್ಯಕ್ಷ ಶ್ರೀ ಸೋಮಲಿಂಗ ಜೊರಲಿ, ಬಸ್ಸಾಪುರ ಗ್ರಾ.ಪಂ. ಅಧ್ಯಕ್ಷ ಶ್ರೀ ಭೀಮಶಿ ಕಳ್ಳಿಮನಿ, ಗ್ರಾ.ಪಂ. ಅಧ್ಯಕ್ಷ ಶ್ರೀ ಲೋಹಿತ ಆಡಿಮನಿ,
ಗ್ರಾ.ಪಂ. ಅಧ್ಯಕ್ಷ ಕಮಲಪ್ಪಾ ದಾರವಾಡಿ, ಮುಖಂಡರುಗಳಾದ ಶ್ರೀ ಯಲನಾಯಿಕ ಮಾವನೂರ, ಶ್ರೀ ದತ್ತಾತ್ರೆಯ ಹೆಜ್ಜೆಸರ್, ಶ್ರೀ ಮಂಜುನಾಥ ಪಾಟೀಲ, ಶ್ರೀ ನಿಂಗಪ್ಪ ಬಂಜಿರಾಮ್, ಶ್ರೀ ಗಂಗಪ್ಪಾ ಕಂಟಿಕರ್, ಶ್ರೀ ಭೀಮಶಿ ಲಂಕೆನ್ನವರ್, ಶ್ರೀ ಅಬ್ದುಲಗಣಿ ದರ್ಗಾ, ಶ್ರೀ ಬಸು ಕುರಬೇಟ್, ಶ್ರೀ ಬಾಳೇಶ ದಾಸನಟ್ಟಿ, ಶ್ರೀ ಈರಪ್ಪಾ ಬಂಜಿರಾಮ್, ಮಾರುತಿ ನಾಯ್ಕ ಸೇರಿ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.