ಬೆಳಗಾವಿಯಲ್ಲಿ ಚರಂಡಿ ನೀರು ಮನೆಗಳ ಮುಂದೆ:ಚರಂಡಿ ಸ್ವಚ್ಛಗೊಳಿಸಲು ನಾಗರೀಕರ ಆಗ್ರಹ!!
ಚರಂಡಿ ನೀರು ಮನೆಗಳ ಮುಂದೆ ಹರಿಯುತ್ತಿರುವುದ್ದರಿಂದ ನಾಗರೀಕರು ಸಂಚರಿಸಲು ಹರ ಸಾಹಸ ಪಡಬೇಕಾಗಿದೆ. ಚರಂಡಿ ಸ್ವಚ್ಛತೆಗೆ ನಾಗರೀಕರು ಒತ್ತಾಯಿಸಿದ್ದಾರೆ.
ಬೆಳಗಾವಿ ಮಹಾನಗರದ ವಾರ್ಡ ಸಂಖ್ಯೆ 25ರಲ್ಲಿ ಬರುವ ಸದಾಶಿವ ನಗರದ ಕೊನೆಯ ಬಸ್ ನಿಲ್ದಾಣದ ಪ್ರದೇಶದಲ್ಲಿ ಕಳೆದ ಐದಾರು ದಿನಗಳಿಂದ ಜಿಟಿ, ಜಿಟ್ಟಿಯಾಗಿ ಸುರಿಯುತ್ತಿರುವ ಮಳೆಯಿಂದ ನಾಗರೀಕರು ಹೊಬರದ ಸ್ಥಿತಿಯಲ್ಲಿದ್ದರೆ. ಕಸ ಕಡ್ಡಿಗಳಿಂದ ತುಂಬಿರುವ ಚರಂಡಿಗಳಿಂದ ನೀರು ಸುಮಗವಾಗಿ ಹರಿಯದೆ ಮನೆ ಅಂಗಳದಲ್ಲಿ ಕೆರೆಯಾಗಿ ನಿಂತಿರುವುದ್ದರಿಂದ ನಾಗರೀಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಯೋವೃದ್ಧರಂತು ಮನೆಯಿಂದ ಆಚೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಚಂರಂಡಿ ನೀರು ಸುಗಮವಾಗಿ ಹರಿಯುವಂತೆ ಪಾಲಿಕೆಯ ಸಿಬ್ಬಂದಿಗಳು ಬಂದು ಚರಂಡಿ ಸ್ವಚ್ಛಗೊಳಿಸಬೇಕೆಂದು ಅಲ್ಲಿನ ನಾಗರೀಕರ ಒತ್ತಾಯವಾಗಿದೆ.
ಅಲ್ಲಿನ ಹಿರಿಯ ನಾಗರೀಕರೊಬ್ಬರು ಮಾತನಾಡಿ, ಮನೆಯ ಮುಂದೆ ಈ ರೀತಿ ನೀರು ನಿಂತಿದೆ. ದ್ವೀಚಕ್ರ ವಾಹನ ಬೀಡಿ, ನಡೆದಾಡಲು ಸಹ ಆಗುವುದಿಲ್ಲ. ಪಾಲಿಕೆ ಸಿಬ್ಬಂದಿಗಳು ಬಂದು ಚರಂಡಿ ಸ್ವಚ್ಛತೆ ಮಾಡಬೇಕು ಎಂದರು.
Laxmi News 24×7