ಕೃಷ್ಣಾ ಆರತಿ ಸೇವಾ ಸಮೀತಿ, ಕೃಷ್ಣಾ ತೀರ ರೈತ ಬಾಂಧವರು ಹಾಗೂ ಎಂ.ಆರ್.ಎನ್. (ನಿರಾಣಿ) ಫೌಂಡೇಶನ್ ಇವರ ಸಹಯೋಗದಲ್ಲಿ
ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಕೃಷ್ಣೆಯ ನಾಡಿನ ಹೆಮ್ಮೆಯ ನಾಯಕರಾದ ಶ್ರೀ ಮುರುಗೇಶ ಆರ್. ನಿರಾಣಿಯವರ 60ನೇ ಹುಟ್ಟುಹಬ್ಬದ ನಿಮಿತ್ಯವಾಗಿ
ಹಿಮಾಲಯದ ಅಘೋರಿಗಳು, ನಾಗಾ ಸಾಧುಗಳು ಹಾಗೂ ಈ ನಾಡಿನ ಜಗದ್ಗುರುಗಳು ಮತ್ತು ಸಂತ ಮಹಾಂತರ ಸಾನಿಧ್ಯದಲ್ಲಿ
*ಕುಂಭಮೇಳ ಮಾದರಿಯಲ್ಲಿ ಕೃಷ್ಣಾ ಪುಣ್ಯಸ್ನಾನ ಹಾಗೂ ಕೃಷ್ಣಾ ಆರತಿ*
ಕಾರ್ಯಕ್ರಮವನ್ನು ಇದೇ ಆಗಷ್ಟ-16 ಶನಿವಾರದಂದು ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಶ್ರೀ ಸಂಗಮೇಶ್ವರ ಮಠದ ಆವರಣದ ಕೃಷ್ಣಾ ನದಿ ತಟದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 10 ಗಂಟೆಗೆ ಅಘೋರಿಗಳು, ನಾಗಾ ಸಾಧುಗಳು ಹಾಗೂ ಸಂತ-ಮಹಾಂತರ ನೇತೃತ್ವದಲ್ಲಿ 250 ಕ್ಕೂ ಅಧಿಕ ಪಲ್ಲಕ್ಕಿಗಳು, ಪೂರ್ಣ ಕುಂಭದೊಂದಿಗೆ ಕೃಷ್ಣಾ ಶೋಭಾಯಾತ್ರೆ ಮತ್ತು ಕೃಷ್ಣಾ ಪುಣ್ಯಸ್ನಾನ ನಡೆಯಲಿದೆ.
ಸಾಯಂಕಾಲ 4.00 ಗಂಟೆಗೆ ಶ್ರೀ ಮುರುಗೇಶ ನಿರಾಣಿಯವರ ಹುಟ್ಟುಹಬ್ಬದ ಆಚರಣೆ ಹಾಗೂ ಸಂಜೆ 6.00 ರಿಂದ ಕಾಶಿಯ ವಿಶ್ವ ಪ್ರಸಿದ್ದ ಗಂಗಾ ಆರತಿ ಮಾಡುವ ಪಂಡಿತರಿಂದ ಕೃಷ್ಣಾ ಆರತಿ ನೆರವೇರಲಿದೆ. ಆರತಿಯ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದ್ದು,
ಈ ಎಲ್ಲ ಕಾರ್ಯಕ್ರಮಗಳಲ್ಲಿ ಜನತೆಯು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಕೃಷ್ಣಾ ಉತ್ಸವವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
Laxmi News 24×7