ನಿಪ್ಪಾಣಿಯ ಶ್ರೀ ವೆಂಕಟೇಶ್ ಮಂದಿರದಲ್ಲಿ ಸ್ಪರ್ಧೆಅಶ್ಮೀತಾ ಟೇಕ್ವಾಂಡೋ ಲೀಗ್‌ನಲ್ಲಿ ಶ್ರದ್ಧಾಗೆ ಚಿನ್ನದ ಪದಕ
9ನೇ ತರಗತಿ ವಿದ್ಯಾರ್ಥಿನಿ 46 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ
ಬೆಳಗಾವಿಯ ಅಂಗಡಿ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿನಿಪ್ಪಾಣಿಯಲ್ಲಿ ಎರಡು ದಿನಗಳ ಕಾಲ ನಡೆದ ಅಶ್ಮೀತಾ ಟೇಕ್ವಾಂಡೋ ಲೀಗ್ ಸ್ಪರ್ಧೆಯಲ್ಲಿ ಶ್ರದ್ಧಾ ಸೂರ್ಯವಂಶಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ
ನಿಪ್ಪಾಣಿಯ ಗಾಂಧಿ ಚೌಕ ಹತ್ತಿರವಿರುವ ಶ್ರೀ ವೆಂಕಟೇಶ್ ಮಂದಿರದಲ್ಲಿ ಎರಡು ದಿನಗಳ ಕಾಲ ನಡೆದ 2025-26 ರ ಅಶ್ಮೀತಾ ಟೇಕ್ವಾಂಡೋ ಲೀಗ್ ಸ್ಪರ್ಧೆಯಲ್ಲಿ ಬೆಳಗಾವಿಯ ಅಂಗಡಿ ಇಂಟರ್ನ್ಯಾಷನಲ್ ಶಾಲೆಯ 9 ನೇ
ತರಗತಿಯ ವಿದ್ಯಾರ್ಥಿನಿ ಶ್ರದ್ಧಾ ರಾಮನಾಥ್ ಸೂರ್ಯವಂಶಿ ಭಾಗವಹಿಸಿ ಟೇಕ್ವಾಂಡೋ ಲೀಗ್‌ನಲ್ಲಿ 46 ಕೆಜಿಗಿಂತ ಕಡಿಮೆ ವಯಸ್ಸಿನ ವಿಭಾಗದಲ್ಲಿ ಪ್ರಥಮ ಸ್ಥಾನ (ಚಿನ್ನದ ಪದಕ) ಗಳಿಸುವ ಮೂಲಕ ಕೀರ್ತಿ ತಂದಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನವು ಇದು ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗಲು ಕಾರಣವಾಗಿದ್ದು, ಅವರ ಕ್ರೀಡಾ ಪ್ರಯಾಣದಲ್ಲಿ ಹೊಸ ಮೈಲಿಗಲ್ಲು ಆಗಿದೆ.