Breaking News

ನಾನು ಆಕ್ಟರ್ ಮಾತ್ರ, ಡೈರೆಕ್ಟರ್ – ಪ್ರೋಡ್ಯೂಜರ್ ಬೇರೆಯವರು; ಸಚಿವ ಸತೀಶ ಜಾರಕಿಹೊಳಿ

Spread the love

ನಾನು ಆಕ್ಟರ್ ಮಾತ್ರ, ಡೈರೆಕ್ಟರ್ – ಪ್ರೋಡ್ಯೂಜರ್ ಬೇರೆಯವರು; ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ ಜಿಲ್ಲೆಯ ಬಿ ಡಿ ಸಿ ಸಿ ಬ್ಯಾಂಕ್, ಹುಕ್ಕೇರಿ ತಾಲೂಕಿನ ವಿದ್ಯುತ್ ಸಹಕಾರಿ ಸಂಘ, ಹಿರಣ್ಯಕೇಶಿ ಸಹಕಾರಿ ಸಕ್ಜೆರೆ ಕಾರ್ಖಾನೆ ಒಳಗೊಂಡು ನಡೆಯುವ ಚುನಾವಣೆಗಳಲ್ಲಿ ನಾನು ನಟ ಮಾತ್ರ ನಿರ್ಮಾಪಕರು, ನಿರ್ದೆಶಕರು ಬೇರೆ ಇದ್ದಾರೆ ಎಂದು ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.
ಅವರು ಇಂದು ಹುಕ್ಕೇರಿ ತಾಲೂಕಿನ ಕಂದಾಯ ಇಲಾಖೆ ಅಡಿಯಲ್ಲಿ ಬಗರ ಹುಕುಂ ಸಮಿತಿ ಸಭೆಯಲ್ಲಿ ಭಾಗವಹಿಸಲು ಬಂದಾಗ ಮಾದ್ಯಮಗಳೊಂದಿಗೆ ಮಾತನಾಡುತ್ತಾ ತಾಲೂಕಿನಲ್ಲಿ ಸರಕಾರಿ ಜಮಿನುಗಳನ್ನು ಅತಿಕ್ರಮಣ ಮಾಡಿ ಸಾಗುವಳಿ ಮಾಡುತ್ತಿರುವ ಜನರಿಗೆ ಸಕ್ರಂ ಮಾಡುವ ಉದ್ದೇಶದಿಂದ ಸಮಿತಿ ಸದಸ್ಯರ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಜನರಿಂದ ಅಹವಾಲು ಸ್ವೀಕರಿಸಿ ಸೂಕ್ತ ಮಾರ್ಗದರ್ಶನ ನೀಡಿದರು.
ವೇದಿಕೆ ಮೇಲೆ ಪುರಸಭೆ ಅದ್ಯಕ್ಷ ಇಮ್ರಾನ್ ಮೊಮಿನ, ವಿದ್ಯುತ್ ಸಹಕಾರಿ ಘದ ಅದ್ಯಕ್ಷ ಜಯಗೌಡಾ ಪಾಟೀಲ, ತಹಸಿಲ್ದಾರ ಮಂಜುಳಾ ನಾಯಿಕ, ಬಗರ ಹುಕುಂ ಸದಸ್ಯರು ,ವಿದ್ಯುತ್ ಸಹಕಾರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಹುಕ್ಕೇರಿ ವಿದ್ಯುತ್
ಸಹಕಾರಿ ಸಂಘದ ಚುನಾವಣೆ ಸಮಿಪಿಸುತ್ತಿದೆ ಆದ್ದರಿಂದ ನಾವು ಸಹ ಸದಸ್ಯರ ಸಭೆಗಳನ್ನು ಮಾಡುತ್ತಿದ್ದೆವೆ ಆದರೆ ನಾವು ಕೇವರ ನಟನೆ ಮಾಡುವವರು ನಿರ್ಮಾಪಕರು ಅಣ್ಣಾಸಾಹೇಬ ಜೋಲ್ಲೆ ಅದರಂತೆ ನಿರ್ದೆಶಕ ಬಾಲಚಂದ್ರ ಜಾರಕಿಹೋಳಿ ಇದ್ದಾರೆ ನೋಡೋಣ ನಾವು ಮಾತ್ರ Acting ಮಾಡಲು ತಯಾರಿದ್ದೆವೆ Producer ಮತ್ತು Director ಯಾವ ರೀತಿ ಕಥೆ ಮಾಡುತ್ತಾರೆ ಕಾದು ನೋಡಬೇಕು, ಯವದೇ ಚುನಾವಣೆ ಬರಲಿ ನಾವು ಮಾತ್ರ ಪಾತ್ರ ವಹಿಸುತ್ತೆವೆ ಎಂದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಮತ್ತು ಸಾರ್ವಜನಿಕರು ಹಾಗೂ ಬಗರ ಹುಕುಂ ಫಲಾನುಭವಿಗಳು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸಿಎಂ ಭೇಟಿ

Spread the love ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸಿಎಂ ಭೇಟಿ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ