ಆಲ್ ಇಜ್ ವೆಲ್ ಚಿತ್ರವನ್ನು ಯಶಸ್ವಿಗೊಳಿಸಿ; ಚಿತ್ರತಂಡದಿಂದ ಕರೆ
ಇದೇ ಜೂನ್ 27 ರಂದು ತೆರೆ ಕಾಣಲಿರುವ ಮರಾಠಿ ಚಲನಚಿತ್ರ ಆಲ್ ಇಜ್ ವೆಲ್ ಚಿತ್ರತಂಡ ಇಂದು ಬೆಳಗಾವಿಗೆ ಆಗಮಿಸಿ, ಬೆಳಗಾವಿಗರಿಂದ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರವನ್ನು ವಿಕ್ಷೀಸಿ ಪ್ರೋತ್ಸಾಹಿಸಬೇಕೆಂದು ಕರೆ ನೀಡಿತು.
ಸುಪ್ರಸಿದ್ಧ ಬಹುಭಾಷಾ ಕಲಾವಿದ ಸಯ್ಯಾಜಿ ಶಿಂಧೆ, ಅಭಿನಯ ಭೆರ್ಡೆ, ರೋಹಿತ್ ಹಳದಿಕರ, ನಕ್ಷತ್ರಾ ಮೇಢೆಕರ, ಸಾಯಲಿ ಫಾಟಕ್, ಅಮಾಯರಾ ಗೋಸ್ವಾಮಿ ಅವರು ನಟಿಸಿರುವ ಪ್ರಿಯದರ್ಶನ ಜಾಧವ್ ಮತ್ತು ಯೋಗೇಶ್ ಜಾಧವ್ ಅವರ ನಿರ್ದೇಶನದಲ್ಲಿ ಮೂಡಿದ ಬಂದ ಆಲ್ ಇಜ್ ವೆಲ್ ಚಿತ್ರ ಇದೇ ಜೂನ್ 27 ರಂದು ಎಲ್ಲೆಡೆ ತೆರೆ ಕಾಣಲಿದೆ. ಈ ಹಿನ್ನೆಲೆ ಇಂದು ಬೆಳಗಾವಿಗೆ ಆಗಮಿಸಿದ ಆಲ್ ಇಜ್ ವೆಲ್ ಚಿತ್ರತಂಡ ಬೆಳಗಾವಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರವನ್ನು ವಿಕ್ಷೀಸಬೇಕೆಂದು ಕರೆ ನೀಡಿತು.
ಬಹುಭಾಷಾ ಕಲಾವಿದ ಸಯ್ಯಾಜಿ ಶಿಂಧೆ ಅವರು ಯುವ ಕಲಾವಿದರು ಅತ್ಯಂತ ಮನೋಜ್ಞವಾಗಿ ನಟನೆಯನ್ನು ಮಾಡಿದ್ದು, ನಿರ್ದೇಶಕ ಮತ್ತು ನಿರ್ಮಾಪಕರ ಮಾರ್ಗದರ್ಶನದಲ್ಲಿ ಅತ್ಯಂತ ಸುಂದರ ಚಿತ್ರ ಮೂಡಿದ ಬಂದಿದೆ. ಎಲ್ಲರೂ ಚಿತ್ರಮಂದಿರಕ್ಕೆ ಭೇಟಿ ನೀಡಿ ಚಿತ್ರವನ್ನು ವಿಕ್ಷೀಸಿ ಆಲ್ ಇಜ್ ವೆಲ್’ಗೆ ಪ್ರೋತ್ಸಾಹಿಸಬೇಕೆಂದರು.
ಇನ್ನು ನಟ ಅಭಿನಯ ಬೇರ್ಡೆ ಅವರು ಬೆಳಗಾವಿಯಲ್ಲಿ ನಮ್ಮ ಚಿತ್ರಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಬಲ ಪ್ರೋತ್ಸಾಹ ಸಿಗುತ್ತಿರುವುದು ಸಂತಸ ತಂದಿದೆ. ಜೂನ್ 27 ರಂದು ಚಿತ್ರಮಂದಿರಗಳನ್ನು ಹೌಸ್’ಪೂಲ್ ಆಗಿಸಿ, ಚಿತ್ರವನ್ನು ವೀಕ್ಷಿಸಿ ಬೆಂಬಲಿಸಬೇಕೆಂದರು.
ಆಲ್ ಇಜ್ ವೆಲ್ ಚಿತ್ರತಂಡದ ಇನ್ನುಳಿದ ಸದಸ್ಯರು ಕೂಡ ಬೆಳಗಾವಿಗರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರವನ್ನು ವೀಕ್ಷಿಸಿ ಪ್ರೀತಿ ವಿಶ್ವಾಸವನ್ನು ತೋರಬೇಕೆಂದು ಕರೆ ನೀಡಿದರು.
ಇನ್ನು ನಟ, ನಿರ್ಮಾಪಕ ಮತ್ತು ಲೇಖಕ ಪ್ರಿಯದರ್ಶನ ಜಾಧವ್ ಅವರು ಬೆಳಗಾವಿಯ ವಾಣಿಶ್ರೀ ಫಿಲ್ಮ್ ಪ್ರೋಡಕ್ಷನ್’ನ ವತಿಯಿಂದ ನಿರ್ಮಿಸಿದ ಆಲ್ ಇಜ್ ವೆಲ್ ಚಲನಚಿತ್ರ ಜೂನ್ 22 ರಂದು ಬಿಡುಗಡೆಯಾಗುತ್ತಿದ್ದು, ಸಹಕುಟುಂಬ ಸಹಪರಿವಾರದೊಡನೆ ಚಿತ್ರಮಂದಿರಕ್ಕೆ ಭೇಟಿ ನೀಡಿ ವೀಕ್ಷಿಸಿ ಯಶಸ್ವಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ನಿರ್ಮಾಪಕ ಅಮೋದ ಮುಚ್ಚಂಡಿಕರ, ವಾಣಿ ಹಾಲಪ್ಪನವರ, ಮಹೇಶ್ ಮರವಚೆ, ವಿನಾಯಕ ಪಟ್ಟಣಶೆಟ್ಟಿ, ಕಾರ್ಯನಿರ್ವಾಹಕ ನಿರ್ಮಾಪಕ ಸಂಜಯ್ ಠುಬೆ ಮತ್ತು ನಿರ್ಮಾಣ ನಿಯಂತ್ರಕ ವಿನಯ ಜವಳಗಿಕರ ಇನ್ನುಳಿದವರು ಉಪಸ್ಥಿತರಿದ್ದರು. ತಮ್ಮ ನೆಚ್ಚಿನ ಕಲಾವಿದರನ್ನು ಕಾಣಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗಿದ್ಧರು.
Laxmi News 24×7